ಮಡಿಕೇರಿ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಡಿಕೇರಿಯಲ್ಲಿರುವ ಬಿಜೆಪಿ ಹಿರಿಯ ಮುಖಂಡ ಡಾ.ಎಂ.ಜಿ.ಪಾಟ್ಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಮಡಿಕೇರಿಯ ರೋಟರಿ ಸಭಾಂಗಣ ಬಳಿಯಲ್ಲಿನ ಡಾ.ಎಂ.ಜಿ.ಪಾಟ್ಕರ್ ಮನೆಗೆ ತೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ, ಹಲವಾರು ವಷ೯ಗಳ ಹಿಂದಿನಿಂದಲೂ ಕೊಡಗಿನಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಸಂಘಟಿಸುವಲ್ಲಿ ಕಾರಣರಾದ ಡಾ.ಎಂ.ಜಿ.ಪಾಟ್ಕರ್ ದಂಪತಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕೊಡಗಿನಲ್ಲಿ ಬಿಜೆಪಿಗೆ ಕಛೇರಿ ಇಲ್ಲದ ವಷ೯ಗಳಲ್ಲಿ ಡಾ.ಪಾಟ್ಕರ್ ತಮ್ಮ ಮನೆಯಲ್ಲಿಯೇ ಪಕ್ಷದ ಬೆಳವಣಿಗೆಗೆ ಅವಕಾಶ ಕಲ್ಪಿಸಿದ್ದರು. ಕೊಡಗಿನಲ್ಲಿ ಬಿಜೆಪಿ ಸಂಘಟಿಸುವಲ್ಲಿಯೂ ಡಾ.ಪಾಟ್ಕರ್ ಅವರ ಪಾತ್ರ ಮುಖ್ಯವಾದದ್ದು ಎಂದೂ ಯಡಿಯೂರಪ್ಪ ಸ್ಮರಿಸಿಕೊಂಡರು.
ಈ ಸಂದಭ೯ ಸಚಿವರಾದ ಡಾ.ಅಶ್ವಥನಾರಾಯಣ, ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಎಂ.ಪಿ.ಸುನೀಲ್ ಸುಬ್ರಹ್ಮಣಿ, ಮಡಿಕೇರಿ ಬಿಜೆಪಿ ಅಧ್ಯಕ್ಷ ಮನುಮಂಜುನಾಥ್, ನಗರ ಬಿಜೆಪಿ ಮಹಿಳಾ ಮೋಚಾ೯ ಅಧ್ಯಕ್ಷೆ ಅನಿತಾ ಪೂವಯ್ಯ, ಬಿಜೆಪಿ ಪ್ರಮುಖರಾದ ಮಹೇಶ್ ಜೈನಿ, ಬಿ.ಕೆ.ಅರುಣ್ ಕುಮಾರ್, ಬಿ.ಕೆ.ಜಗದೀಶ್, ಆರೋಹಣ ತಂಡದ ಮುಖ್ಯಸ್ಥ ಕೆ.ಕೆ.ಮಹೇಶ್ ಕುಮಾರ್, ಶೆರಿನ್, ಡಾ.ಜಯಲಕ್ಷ್ಮಿ ಪಾಟ್ಕರ್, ಸಲೀಲ ಪಾಟ್ಕರ್ ಹಾಜರಿದ್ದರು.
Click this button or press Ctrl+G to toggle between Kannada and English