ಮುಖಾಮುಖಿ ಢಿಕ್ಕಿಯಾಗಿ ರಸ್ತೆ ಬದಿಯ ಬಾವಿಗೆ ಬಿದ್ದ ಸರಕಾರಿ ಬಸ್-ಅಟೋ : 20 ಜನರ ದುರ್ಮರಣ

11:31 AM, Wednesday, January 29th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

bus

ಮುಂಬೈ : ಸರಕಾರಿ ಬಸ್ ಮತ್ತು ಅಟೋಗಳು ಮುಖಾಮುಖಿ ಢಿಕ್ಕಿಯಾಗಿ ಎರಡೂ ವಾಹನಗಳು ರಸ್ತೆಬದಿಯ ಬಾವಿಗೆ ಬಿದ್ದ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ. ಮಂಗಳವಾರ ಸಂಜೆಯ ವೇಳೆಗೆ ನಡೆದ ಈ ಭೀಕರ ಅಪಘಾತದಲ್ಲಿ ಸುಮಾರು 20 ಜನರು ಮೃತಪಟ್ಟಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಮತ್ತು ಅಟೋ ನಡುವೆ ಮುಖಾಮುಖಿ ಡಿಕ್ಕಿ ನಡೆದಿದೆ. ನಂತರ ಬಸ್ ಮತ್ತು ಆಟೋ ಬಾವಿಯೊಳಗೆ ಬಿದ್ದಿದೆ. ಬಸ್ ಚಾಲಕನ ಅಜಾಗರೂಕತೆಯೇ ಇದಕ್ಕೆ ಕಾರಣ ಎನ್ನಲಾಗಿದೆ.

ಸುಮಾರು 18 ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲರೂ ಬಸ್ ಪ್ರಯಾಣಿಕರು ಎನ್ನಲಾಗಿದೆ.

ಮಂಗಳವಾರ ರಾತ್ರಿ ಹೊತ್ತಿಗೆ 20 ಶವಗಳನ್ನು ಹೊರತೆಗೆಯಲಾಗಿದೆ. ಬಸ್ ಡ್ರೈವರ್ ಕೂಡಾ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದನೆ ಎನ್ನಲಾಗಿದೆ. ಮೃತರ ಕುಟುಂಬಿಕರಿಗೆ ಮಹಾರಾಷ್ಟ್ರ ಸರಕಾರ ಹತ್ತು ಲಕ್ಷ ಪರಿಹಾರ ಘೋಷಿಸಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English