ರೋಜರ್ ಫೆಡರರ್ ಗ್ರೇಟ್ ಎಸ್ಕೇಪ್ : ಉಪಾಂತ್ಯಕ್ಕೇರಿದ ಸ್ವಿಸ್​ ದಿಗ್ಗಜ

2:32 PM, Wednesday, January 29th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Rozar

ಮೆಲ್ಬೋರ್ನ್ : ಏಳನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸುವ ಹಂಬಲದಲ್ಲಿರುವ ಸ್ವಿಸ್ ದಿಗ್ಗಜ ರೋಜರ್ ಫೆಡರರ್ ಏಳು ಬಾರಿ ಮ್ಯಾಚ್ ಪಾಯಿಂಟ್ ರಕ್ಷಿಸಿಕೊಂಡು ರೋಚಕ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್ಗೇರಿದ್ದು, ಹಾಲಿ ಚಾಂಪಿಯನ್ ಸೆರ್ಬಿಯಾದ ತಾರೆ ನೊವಾಕ್ ಜೋಕೊವಿಕ್ ಸವಾಲು ಎದುರಿಸಲು ಸಜ್ಜಾಗಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಆತಿಥೇಯರ ಆಶಾಕಿರಣವಾಗಿರುವ ವಿಶ್ವ ನಂ.1 ಆಟಗಾರ್ತಿ ಆಶ್ಲೆಗ್ ಬಾರ್ಟಿ ಮತ್ತು ಅಮೆರಿಕದ ಯುವ ಆಟಗಾರ್ತಿ ಸೋಫಿಯಾ ಕೆನಿನ್ ಉಪಾಂತ್ಯಕ್ಕೇರಿದ್ದಾರೆ.

38 ವರ್ಷದ ಫೆಡರರ್, ರಾಡ್ ಲೆವರ್ ಅರೆನಾದಲ್ಲಿ ಮಂಗಳವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ತಮಗಿಂತ 97 ರ್ಯಾಂಕ್ ಕೆಳಗಿನ ಮತ್ತು 10 ವರ್ಷ ಕಿರಿಯರಾದ ಅಮೆರಿಕದ ಟೆನ್ನಿಸ್ ಸ್ಯಾಂಡ್ಗ್ರೀನ್ ವಿರುದ್ಧ 6-3, 2-6, 2-6, 7-6 (10-8), 6-3ರಿಂದ 5 ಸೆಟ್ಗಳ ಹೋರಾಟದಲ್ಲಿ ಗೆಲುವು ದಾಖಲಿಸಿದರು. 3 ಗಂಟೆ 31 ನಿಮಿಷಗಳ ಕಾಲ ಸಾಗಿದ ಕಾದಾಟದಲ್ಲಿ ಫೆಡರರ್, ಎದುರಾಳಿಯ ಬಲವಾದ ಹೊಡೆತಗಳು ಮತ್ತು ಚುರುಕಿನ ಓಡಾಟದ ಆಟವನ್ನು ಹಿಮ್ಮೆಟ್ಟಿಸುವಲ್ಲಿ ಸಫಲರಾದರು. ಈ ಮೂಲಕ ಮೆಲ್ಬೋರ್ನ್ನಲ್ಲಿ 15ನೇ ಬಾರಿ ಉಪಾಂತ್ಯಕ್ಕೇರಿದ ಸಾಧನೆ ಮಾಡಿದರು. ಅವರು ಕಳೆದ 43 ವರ್ಷಗಳಲ್ಲಿ ಮೆಲ್ಬೋರ್ನ್ ಪಾಕ್ನಲ್ಲಿ ಉಪಾಂತ್ಯಕ್ಕೇರಿದ ಅತ್ಯಂತ ಹಿರಿಯ ಆಟಗಾರ ಎನಿಸಿದ್ದಾರೆ.

20 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ಫೆಡರರ್ ಪಂದ್ಯದ ನಡುವೆ ಚೇರ್ ಅಂಪೈರ್ ಜತೆ ವಾಗ್ವಾದ ನಡೆಸಿದರು ಮತ್ತು ವೈದ್ಯಕೀಯ ಟೈಮ್ಟ್ ಕೂಡ ಪಡೆದುಕೊಂಡರು. ವಿಶ್ವ ನಂ. 100 ಆಟಗಾರ ಸ್ಯಾಂಡ್ಗ್ರೀನ್ ಗೆಲುವು ದಾಖಲಿಸಿದ್ದರೆ, 1991ರ ಬಳಿಕ ಕೂಟದ ಸೆಮಿಫೈನಲ್ಗೇರಿದ ಅತ್ಯಂತ ಕೆಳ ರ್ಯಾಂಕ್ನ ಆಟಗಾರ ಎನಿಸುತ್ತಿದ್ದರು. ಆಗ 114ನೇ ರ್ಯಾಂಕ್ನ ಪ್ಯಾಟ್ರಿಕ್ ಮೆಕೆನ್ರೋ ಸೆಮಿಫೈನಲ್ಗೇರಿದ್ದರು.

ಜೋಕೋ ಮುನ್ನಡೆ: 2ನೇ ಶ್ರೇಯಾಂಕಿತ ಜೋಕೊವಿಕ್ ಕ್ವಾರ್ಟರ್ಫೈನಲ್ನಲ್ಲಿ ಕೆನಡದ ಮಿಲೋಸ್ ರಾವೊನಿಕ್ ವಿರುದ್ಧ 6-4, 6-3, 7-6 (7-1) ರಿಂದ ಗೆಲುವು ದಾಖಲಿಸಿದರು. ಜೋಕೋ 2 ಗಂಟೆ 49 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು. ಇದರಿಂದ ಜೋಕೋ-ಫೆಡ್ ನಡುವಿನ 50ನೇ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಹಿಂದಿನ 49ರಲ್ಲಿ ಜೋಕೋ 26, ಫೆಡ್ 23ರಲ್ಲಿ ಜಯಿಸಿದ್ದಾರೆ. ಕಳೆದ 14 ಆಸ್ಟ್ರೇಲಿಯನ್ ಓಪನ್ಗಳಲ್ಲಿ 12ಅನ್ನು ಫೆಡ್-ಜೋಕೋ ಅವರೇ ಹಂಚಿಕೊಂಡಿದ್ದಾರೆ. -ಏಜೆನ್ಸೀಸ್

ಪಂದ್ಯದ 4ನೇ ಸೆಟ್ನಲ್ಲಿ ಸ್ಯಾಂಡ್ಗ್ರೀನ್ 5-4 ಮುನ್ನಡೆಯಲ್ಲಿದ್ದಾಗ ಫೆಡರರ್ ಸರ್ವ್ ಮಾಡುತ್ತಿದ್ದರು. ಆಗ ಸ್ಯಾಂಡ್ಗ್ರೀನ್ಗೆ ಫೆಡ್ ಸರ್ವ್ ಬ್ರೇಕ್ ಮಾಡಿ ಪಂದ್ಯ ವಶಪಡಿಸಿಕೊಳ್ಳುವ ಅವಕಾಶ 4 ಬಾರಿ ಒದಗಿ ಬಂತು. ಅದೆಲ್ಲವನ್ನೂ ಅವರು ಕೈಚೆಲ್ಲಿದರು. ಇದರಿಂದ ಟೈಬ್ರೇಕರ್ಗೆ ಹೋದ ಸೆಟ್ನಲ್ಲಿ ಫೆಡರರ್ ಗೆದ್ದು ಪಂದ್ಯವನ್ನು ಸಮಬಲಕ್ಕೆ ತಂದರು. ಟೈಬ್ರೇಕರ್ನಲ್ಲೂ ಸ್ಯಾಂಡ್ಗ್ರೀನ್ 6-3 ಮುನ್ನಡೆ ಕಂಡ ಬಳಿಕ 3 ಮ್ಯಾಚ್ ಪಾಯಿಂಟ್ಗಳನ್ನು ಕೈಚೆಲ್ಲಿದರು. ಅಂತಿಮ ಸೆಟ್ನಲ್ಲಿ ಫೆಡರರ್ ಹೆಚ್ಚಿನ ಪ್ರತಿರೋಧವಿಲ್ಲದೆ ಜಯಿಸಿದರು. ಮೆಲ್ಬೋರ್ನ್ನಲ್ಲಿ ಇದು ಅವರಿಗೆ 102ನೇ ಪಂದ್ಯ ಗೆಲುವಾಗಿದೆ.

ವೃತ್ತಿಜೀವನದ ಕೊನೇ ಟೆನಿಸ್ ಋತುವಿನಲ್ಲಿ ಆಡುತ್ತಿ ರುವ ಭಾರತದ ಅನುಭವಿ ಆಟಗಾರ ಲಿಯಾಂಡರ್ ಪೇಸ್ ಮತ್ತು ಅವರ ಜತೆಗಾರ್ತಿ ಲಾತ್ವಿಯಾದ ಜೆಲೆನಾ ಒಸ್ತಾಪೆಂಕೊ ಮಿಶ್ರ ಡಬಲ್ಸ್ ವಿಭಾಗದ 2ನೇ ಸುತ್ತಿನಲ್ಲಿ ಎಡವಿ ದ್ದಾರೆ. 46 ವರ್ಷದ ಪೇಸ್ ಮತ್ತು ಅವರಿಗಿಂತ ಅರ್ಧದಷ್ಟು ವಯಸ್ಸಿನ ಒಸ್ತಾಪೆಂಕೊ ಜೋಡಿ ಬ್ರಿಟನ್ನ ಜೇಮಿ ಮರ್ರೆ ಮತ್ತು ಅಮೆರಿಕದ ಬೆಥಾನಿ ಮಾಟೆಕ್ ಸ್ಯಾಂಡ್ಸ್ ಜೋಡಿಯ ವಿರುದ್ಧ 2-6, 5-7ರಿಂದ ಶರಣಾ ಯಿತು. ಇದೀಗ ರೋಹನ್ ಬೋಪಣ್ಣ ಟೂರ್ನಿಯಲ್ಲಿ ಸವಾಲು ಜೀವಂತ ಉಳಿಸಿಕೊಂಡಿರುವ ಏಕೈಕ ಭಾರತೀಯರಾಗಿದ್ದಾರೆ. ಅವರು ಮಿಶ್ರ ಡಬಲ್ಸ್ ವಿಭಾಗದಲ್ಲಿ ಉಕ್ರೇನ್ನ ನಾಡಿಯಾ ಕಿಚೆನಾಕ್ ಜತೆಗೂಡಿ ಕ್ವಾರ್ಟರ್ಫೈನಲ್ಗೇರಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English