ಬೀಡಿ ಕೆಲಸ ಕಡಿತ ನೀತಿಯನ್ನು ವಿರೋಧಿಸಿ ಎಸ್. ಕೆ.ಬೀಡಿ ವರ್ಕರ್ಸ್ ಫೆಡರೇಶನ್ ವತಿಯಿಂದ ಕಂಪನಿ ಚಲೋ

5:15 PM, Tuesday, November 6th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Beedi Workersಮಂಗಳೂರು :ಇತ್ತೀಚಿನ ದಿನಗಳಲ್ಲಿ ಬೀಡಿ ಕಂಪನಿಗಳು ಬೀಡಿ ಕೆಲಸವನ್ನು ಕಡಿತಗೊಳಿಸಿದ್ದು ಕಂಪನಿಯ ಈ ಕ್ರಮವನ್ನು ವಿರೋಧಿಸಿ ಎಸ್.ಕೆ. ಬೀಡಿ ವರ್ಕರ್ಸ್ ಫೆಡರೇಶನ್ (ಎ‌ಐಟಿಯುಸಿ) ನೇತೃತ್ವದಲ್ಲಿ ಇಂದು ಲಾಲ್‌ಬಾಗ್‌ನ ಗಣೇಶ್ ಬೀಡಿ ಕಂಪೆನಿಯೆದುರು ಬೀಡಿ ಕಾರ್ಮಿಕರು ಕಂಪೆನಿ ಚಲೋ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಎ‌ಐಟಿಯುಸಿ ಜಿಲ್ಲಾ ಅಧ್ಯಕ್ಷ ಪಿ. ಸಂಜೀವ, ಧೂಮಪಾನ ನಿಷೇಧದ ಹಿನ್ನೆಲೆಯಲ್ಲಿ ಬೀಡಿ ಕೈಗಾರಿಕೆಯನ್ನು ನಾಶ ಮಾಡಲು ಸರಕಾರ ಹವಣಿಸುತ್ತಿದ್ದು, ಇದರಿಂದ ಬೀಡಿ ಉದ್ಯಮವನ್ನು ನಂಬಿರುವ ಲಕ್ಷಾಂತರ ಬೀಡಿ ಕಾರ್ಮಿಕರು ಬೀದಿ ಪಾಲಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ಬೀಡಿ ಕಾರ್ಮಿಕರು, ವಾರದಲ್ಲಿ ಆರು ದಿನ ಕೆಲಸ, ಉತ್ತಮ ಎಲೆ ಹಾಗೂ ಕ್ರಯದ ಬೀಡಿ ಕಟ್ಟಿಸುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ಬೀಡಿ ಮೇಲೆ ಅನಗತ್ಯವಾಗಿ ವ್ಯಾಟ್ ವಿಧಿಸಲಾಗಿದೆ. ಈಗಾಗಲೇ ಕೆಲಸದ ಕಡಿತದಿಂದ ಬೀಡಿ ಕಾರ್ಮಿಕರು ಕಂಗಾಲಾಗಿದ್ದಾರೆ. ವಾರಕ್ಕೆ ಮೂರು ದಿನ ಕೆಲಸ ಮಾತ್ರ ಸಿಗುತ್ತಿದ್ದು, ದಿನವೊಂದಕ್ಕೆ ಕಾರ್ಮಿಕರೊಬ್ಬರು ೫೦೦ ಬೀಡಿಗಳನ್ನಷ್ಟೆ ಕಟ್ಟಲು ಸಾಧ್ಯವಾಗುವಂತಹ ಪರಿಸ್ಥಿತಿ ಇದೆ. ಇದರಿಂದ ವಾರಕ್ಕೆ ಕೇವಲ 150 ರೂ.ಗಳ ಸಂಪಾದನೆಯಿಂದ ದಿನ ಸಾಗಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕಾರ್ಮಿಕರು ಗಣೇಶ್ ಬೀಡಿ ವರ್ಕ್ಸ್ ನ ಮಾಲಕರಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ವ್ಯವಸ್ಥಾಪಕರು ಈಗಾಗಲೇ ಬೀಡಿ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಗೊಂಡಿದ್ದು, ಅದನ್ನು ಮಾರಾಟ ಮಾಡಲು ಮಾರುಕಟ್ಟೆ ತೊಂದರೆ ಎದುರಾಗಿದೆ. ನಾವು ಈಗಿನ 2 ತಿಂಗಳಿನಲ್ಲಿ ಕೇವಲ 15% ಕೆಲಸದಲ್ಲಿ ಕಡಿತ ಮಾಡಿದ್ದು ಈಗ ತೆರಿಗೆ ಮತ್ತು ಮಾರಾಟದ ತೊಂದರೆಯಿಂದ ಆಡಳಿತ ಮಂಡಳಿ ಕೂಡ ಕಷ್ಟ ಅನುಭವಿಸುವಂತಾಗಿದೆ ಎಂದರು.

ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷ ಚಂದಪ್ಪ ಅಂಚನ್, ಕೋಶಾಧಿಕಾರಿ ಕರುಣಾಕರ್, ಕಾರ್ಯದರ್ಶಿ ವಿ.ಎಸ್. ಬೇರಿಂಜ, ವಾಸಂತಿ ಆರ್ ಶೆಟ್ಟಿ,ಸುಲೋಚನ,ಶಿವಪ್ಪ ಕೋಟ್ಯಾನ್ ಭಾಗವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English