ವಸ್ತುವಿನ ಅವ್ಯಕ್ತ ಪ್ರಜ್ಞೆಯೇ ಕಥೆಯ ಹುಟ್ಟಿಗೆ ಮೂಲ : ಪ್ರೋ. ಪಾಟೀಲ

5:09 PM, Thursday, January 30th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

pateel

ವಿದ್ಯಾಗಿರಿ : ಅಕ್ಷರಕ್ಕೆ ಪರ್ಯಾಯವಾದದ್ದು ಯಾವುದೂ ಇಲ್ಲ. ಕಥೆ ಅನುಭವ ಮತ್ತು ಪರಾಮರ್ಶೆಯಲ್ಲಿ ವ್ಯಕ್ತಪಡಿಸುವುದಕ್ಕೆ ಸಾಧ್ಯವಾಗುವ ಮಾಧ್ಯಮ ಎಂದು ಕಥೆಗಾರ ಪ್ರೊ. ರಾಘವೇಂದ್ರ ಪಾಟೀಲ ಹೇಳಿದರು.

ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ ಹಾಗೂ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಜಂಟಿ ಆಶ್ರಯದಲ್ಲಿ ಆಯೋಜಿಸಿದ ’ಬಸವರಾಜ ಕಟ್ಟೀಮನಿ ಕಥಾ ಸಾಹಿತ್ಯ-ವಿಚಾರ ಸಂಕಿರಣ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

mallikarjun

ಅನುಭವದ ನವೀಕೃತ ರೂಪವೇ ಕಥೆ. ಕಥೆಗಾರನ ಅಂತರ್ಗರ್ಭದ ಎಲ್ಲಾ ಭಾವಗಳನ್ನು ಹೊರಹಾಕುವುದಕ್ಕೆ ಸಾಹಿತ್ಯದಲ್ಲಿ ಕಥೆ ಉತ್ತಮ ಪ್ರಕಾರ. ಸ್ಥಿತಿ ಮಿತಿಯೂ ಕೂಡ ಸಾಹಿತ್ಯಕ್ಕೆ ಪ್ರಭಾವ ಬೀರುತ್ತದೆ ಎನ್ನುವುದು ಸುಳ್ಳಲ್ಲ. ಮನುಷ್ಯನ ಪ್ರಜ್ಙೆ ಅವನ ಅನುಭವದ ಕ್ರೋಢಿಕರಣದಿಂದ ಉಂಟಾಗುತ್ತದೆ. ವಸ್ತು ಸಂದರ್ಭಗಳಲ್ಲಿರುವ ಅವ್ಯಕ್ತವಾಗಿರುವ ಪ್ರಜ್ಞೆ ಕಥೆಯ ಹುಟ್ಟಿಗೆ ಮೂಲವಾಗುತ್ತದೆ. ಕಾಲಾಂತರದಲ್ಲಿ ಕಥೆಯ ಶೈಲಿ ಬದಲಾದಂತೆ ಕಥೆ ಮತ್ತು ಕಥೆಯ ವಸ್ತುವಿನ ಸ್ವರೂಪದ ವಿಸ್ತಾರ ಬೆಳವಣಿಗೆ ಕಂಡಿತು. ಓದುಗನಾದವವನಿಗೆ ಕಥೆಯ ತಿರುಳನ್ನು ಅರ್ಥೈಸಿಕೊಳ್ಳುವುವುದಕ್ಕೆ ಸಾಹಿತ್ಯದಲ್ಲಿನ ಬೆಳವಣಿಗೆಯನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ ಓದುಗನಲ್ಲಿ ಒಂದು ಅನುಭೂತಿ ಹುಟ್ಟುತ್ತದೆ. ಓದುಗ ಮನಸ್ಸಿನ ಜಡತ್ವವನ್ನು ನಿವಾರಿಸುವುದಕ್ಕೆ ಮಾತ್ರ ಕೃತಿಯ ಓದಿಗೆ ಹೋಗಬಾರದು. ಬಸವರಾಜ್ ಕಟ್ಟಿಮನಿ ಯಂತ್ರಯುಗದ ಆರಂಭದಲ್ಲಿ ಸಮಾಜ ಮತ್ತು ನಾಗರಿಕರಲ್ಲಿನ ವಿಪ್ಲವಗಳ ಸ್ವರೂಪವನ್ನು ಸಾಹಿತ್ಯಕ್ಕೆ ಕಟ್ಟಿಕೊಟ್ಟವರು. ಅವರ ಅಧ್ಯಯನ ಯುವ ತಲೆಮಾರಿಗೆ ಅಗತ್ಯ ಎಂದು ಅಭಿಪ್ರಾಯ ಪಟ್ಟರು.

bala-saheb

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಪ್ರೋ. ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ಕಥೆಗಳಲ್ಲಿ ಜೀವನ ಪ್ರೀತಿಗೆ ಬೇಕಾದ ಎಲ್ಲಾ ಮಾಹಿತಿ ನಮಗೆ ಲಭ್ಯವಾಗುತ್ತದೆ. ಕಥೆ ಬರೆಯುವುದರೊಂದಿಗೆ ಕಥೆಗಾರ ಸೃಜನಶೀಲನಾಗುತ್ತಾನೋ ಹಾಗೆ ಓದಗನೂ ಕೂಡ ಸೃಜನಶೀಲನಾಗಬೇಕು. ಕೃತಿಯನ್ನು ತೆರೆದ ಮನಸ್ಸಿನಲ್ಲಿ ಓದಿ ಅದನ್ನು ಪೂರ್ವಾಗ್ರಹವಿಲ್ಲದೇ ವಿಮರ್ಶಿಸಿದಾಗ ಮಾತ್ರ ಸೃಜನಶೀಲ ಓದುಗನಾಗುತ್ತಾನೆ. ಕಥೆಯ ರಚನೆಯ ಮೂಲಕ ಬಸವರಾಜ ಕಟ್ಟೀಮನಿಯವರು ಸಮಾಜದ ವಾಸ್ತವವನ್ನು ಹೆಣೆದು ಕೊಟ್ಟವರು. ಬದುಕಿನಲ್ಲಿನ ಬದಲಾವಣೆಯನ್ನು ಅರಿಯಬೇಕಾದರೆ ಕಟ್ಟೀಮನಿಯವರನ್ನು ಓದಿಕೊಳ್ಳುವುದು ಅಗತ್ಯ ಎಂದರು.

ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸಂಚಾಲಕ ಡಾ. ಬಾಳಸಾಹೇಬ ಲೋಕಾಪುರ ಪ್ರಸ್ತಾವಿಸಿ, ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಸ್ವಾಗತಿಸಿ, ವಿದ್ಯಾರ್ಥಿನಿ ಪ್ರಗತಿ ಕಾರ್ಯಕ್ರಮ ನಿರ್ವಹಿಸಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English