ಚೈನಾ ಪಟಾಕಿ ಕ್ರೇಕರ್ಸ್ ವರ್ಲ್ಡ್ ಮಾಲಕರಿಂದ 1.5 ಲಕ್ಷ ಪ್ರತಿ ತುಳು ಲಿಪಿ ಪುಸ್ತಕ ವಿತರಣೆ

6:16 PM, Tuesday, November 6th, 2012
Share
1 Star2 Stars3 Stars4 Stars5 Stars
(3 rating, 1 votes)
Loading...

Crackers Worldಮಂಗಳೂರು :ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಚೈನಾ ಪಟಾಕಿ ಕ್ರೇಕರ್ಸ್ ವರ್ಲ್ಡ್ ಮಾಲಕ ಉಸ್ಮಾನ್ ರವರು ಮಾತನಾಡಿ  ತುಳುವರಿಗಾಗಿ ಪ್ರಥಮ ಹಂತವಾಗಿ 1.5 ಲಕ್ಷ ಪ್ರತಿ ತುಳು ಲಿಪಿ ಪುಸ್ತಕಗಳನ್ನು ಮುದ್ರಿಸಿ ಉಚಿತವಾಗಿ ಸಾರ್ವಜನಿಕರಿಗೆ ನೀಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೆಗಾಮೀಡಿಯಾ ಮಾಲಕರಾದ ಶಿವಪ್ರಸಾದ್ ರವರು ಉಪಸ್ಥಿತರಿದ್ದರು

ಕಳೆದ 12 ವರ್ಷಗಳಿಂದ ನಗರದ ಬಿ.ಬಿ. ಅಲಾಬಿ ರಸ್ತೆಯಲ್ಲಿ ಚೈನಾ ಪಟಾಕಿ ವ್ಯವಹಾರ ನಡೆಸುತ್ತಿದ್ದು ತುಳು ಭಾಷೆಯ ಮೇಲಿನ ಅಭಿಮಾನದಿಂದ ಶಿವಕಾಶಿಯ ಪಟಾಕಿ ಉತ್ಪನ್ನ ಕಂಪೆನಿಗಳ ಸಹಯೋಗದೊಂದಿಗೆ ಹಾಗೂ ಸ್ಥಳೀಯ ಮಿತ್ರರ ಸಹಕಾರದೊಂದಿಗೆ ಸುಮಾರು 3.5 ಲಕ್ಷ ವೆಚ್ಚದಲ್ಲಿ ತುಳು ಲಿಪಿಯುಳ್ಳ ಪುಸ್ತಕೆಯನ್ನು ಮುದ್ರಿಸಲಾಗಿದ್ದು ಇದು ತುಳುವರಿಗೆ ತಲುಪಬೇಕೆಂಬ ಹಂಬಲ ತಮ್ಮದಾಗಿದ್ದು ಅದಕ್ಕಾಗಿ ಪುಸ್ತಿಕೆಗಳನ್ನು ತುಳುವರಿರುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಉಚಿತವಾಗಿ ವಿತರಿಸಲಾಗುವುದು ಎಂದರು.

ಈ ದೀಪಾವಳಿ ಕಳೆದ ನಂತರ ತುಳುವಿಗಾಗಿ ಇನ್ನಷ್ಟು ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಮಂಗಳೂರಿನ ಸ್ಥಳೀಯ ಶಾಲೆಗಳಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ದೆಗಳನ್ನು ನಡೆಸುವ ಚಿಂತನೆ ನಡೆಸಲಾಗಿದೆ. ತುಳು ಸಾಹಿತ್ಯ ರಚನೆ, ತುಳು ಹಾಡುಗಳು, ತುಳು ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಕಲಾ ಸ್ಪರ್ಧೆ ಇವುಗಳಲ್ಲಿ ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English