ಸಿಪಿಐಎಂ ಹಿರಿಯ ಸದಸ್ಯರಾದ ಕೂಸಪ್ಪ ಗಟ್ಟಿ ನಿಧನ

5:38 PM, Saturday, February 1st, 2020
Share
1 Star2 Stars3 Stars4 Stars5 Stars
(No Ratings Yet)
Loading...

koosappa

 

ಮಂಗಳೂರು : ಸಿಪಿಐಎಂ ಪಕ್ಷದ ಹಿರಿಯ ಸದಸ್ಯರಾದ ಕಾಂ.ಕೂಸಪ್ಪ ಗಟ್ಟಿ(70)ಯವರು ಹ್ರದಯಾಘಾತದಿಂದಾಗಿ ಕುಂಪಲದಲ್ಲಿರುವ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿರುತ್ತಾರೆ.

ತನ್ನ ಎಳೆಯ ಪ್ರಾಯದಲ್ಲೇ ಕಮ್ಯುನಿಸ್ಟ್ ಸಿದ್ದಾಂತಕ್ಕೆ ಆಕರ್ಷಿತರಾಗಿದ್ದ ಕೂಸಪ್ಪ ಗಟ್ಟಿ ಯವರು,ಆ ಕಾಲದಲ್ಲಿ ಬಲಿಷ್ಠವಾಗಿದ್ದ ಬೀಡಿ,ನೇಯ್ಗೆ,ಗೋಡಂಬಿ ಕಾರ್ಮಿಕರು,ರೈತರು ಸೇರಿದಂತೆ ದುಡಿಯುವ ವರ್ಗದ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದದ್ದು ಮಾತ್ರವಲ್ಲದೆ ಬಂಧನಕ್ಕೊಳಗಾಗಿದ್ದಾರೆ.

1964ರಲ್ಲಿ ಕಮ್ಯುನಿಸ್ಟ್ ಪಕ್ಷವು ವಿಭಜನೆಗೊಂಡಾಗ ಕೂಸಪ್ಪರವರು ಸಿಪಿಐಎಂನಲ್ಲಿ ಧ್ರಢವಾಗಿ ನಿಂತರು.1972ರಲ್ಲಿ ಪಕ್ಷದ ನೇತ್ರತ್ವದಲ್ಲಿ ನಡೆದ ಆಹಾರ ಚಳುವಳಿಯಲ್ಲಿ ಕ್ರಿಯಾಶೀಲ ಪಾತ್ರ ವಹಿಸಿದ ಕೂಸಪ್ಪ ಗಟ್ಟಿಯವರು,ಬಳಿಕ ತಮ್ಮ ವಾಸಸ್ಥಳವನ್ನು ಬಂಟ್ವಾಳದಿಂದ ಮಂಗಳೂರಿಗೆ ವರ್ಗಾಯಿಸಿ ಪಕ್ಷದ ಮೈದಾನ ಕಚೇರಿಯ ಸಂಪರ್ಕಕ್ಕೆ ಬಂದು,ಕಾರ್ಮಿಕ ಚಳುವಳಿಯಲ್ಲಿ ತೊಡಗಿಸಿಕೊಂಡರು. ಸಾರಿಗೆರಂಗದಲ್ಲಿರುವ ನೌಕರರ ಮಧ್ಯೆ ಸಂಘಟನಾ ಕೆಲಸಕ್ಕೆ ಧುಮುಕಿ,ಪಕ್ಷದ ಸಾರಿಗೆ ಶಾಖಾ ಕಾರ್ಯದರ್ಶಿಯಾಗುವ ಮೂಲಕ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿದ್ದ ಎಲ್ಲಾ ಹೋರಾಟಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದರು.

ತನ್ನ ಇಳಿವಯಸ್ಸಿನಲ್ಲೂ ಪಕ್ಷದ ಬಗ್ಗೆ ಅಪಾರ ಗೌರವವನ್ನು ಹೊಂದಿದ ಕಾಂ.ಕೂಸಪ್ಪ ಗಟ್ಟಿಯವರ ಅಗಲುವಿಕೆಯು ಮಂಗಳೂರಿನ ದುಡಿಯುವ ವರ್ಗದ ಚಳುವಳಿಗೆ ತುಂಬಲಾರದ ನಷ್ಟವಾಗಿದೆ.ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.

ಮೃತರ ಮನೆಗೆ ಭೇಟಿ ನೀಡಿದ ಸಿಪಿಐಎಂ ದ.ಕ.ಜಿಲ್ಲಾ ನಾಯಕರಾದ ವಸಂತ ಆಚಾರಿ, ಜೆ.ಬಾಲಕ್ರಷ್ಣ ಶೆಟ್ಟಿ, ಯು.ಬಿ.ಲೋಕಯ್ಯ, ಕೃಷ್ಣಪ್ಪ ಸಾಲ್ಯಾನ್, ಕೆ.ಯಾದವ ಶೆಟ್ಟಿ, ವಾಸುದೇವ ಉಚ್ಚಿಲ್, ಮುನೀರ್ ಕಾಟಿಪಳ್ಳ, ಸುನಿಲ್ ಕುಮಾರ್ ಬಜಾಲ್, ಪದ್ಮಾವತಿ ಶೆಟ್ಟಿ, ಜಯಂತ ನಾಯಕ್ ರವರು ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡರು.

ಮ್ರತರು ಪತ್ನಿ ಮೂವರು ಗಂಡು ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧು ಮಿತ್ರರನ್ನು ಅಗಲಿರುತ್ತಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English