ಥೈಲ್ಯಾಂಡ್ : ಯುನಿವರ್ಸಿಟಿ ಆಫ್ ಡಿಶ್ಟಂನ್ಸ್ ಲಾರ್ನಿಂಗ್ ಎಜ್ಯುಕೇಶನ್ ಆರ್ಜೇಂಟೈನಾ ಪ್ರಸಿದ್ಧಿಯ ಸೈಂಟ್ ಪಾವ್ಲ್’ಸ್ ಇಂಟರ್ನೇಶನಲ್ ಯುನಿವರ್ಸಿಟಿ (ಎಸ್ಪಿಐಯು) ಶೈಕ್ಷಣಿಕ ಸಂಸ್ಥೆಯು ವಾರ್ಷಿಕ ಅಂತರಾಷ್ಟ್ರೀಯ ಘಟಿಕೋತ್ಸವ ಸಮಾರಂಭ ಇಂದಿಲ್ಲಿ ಶನಿವಾರ ಸಂಜೆ ಥೈಲ್ಯಾಂಡ್ ರಾಷ್ಟ್ರದ ಸಿಲೋಮ್ ಇಲ್ಲಿನ ಹೊಟೇಲ್ ಹಾಲೀಡೇ ಇನ್ನ್ ಸಿಲೊಮ್ ಇದರ ಕ್ರಿಸ್ಟಲ್ ಬಾಲ್ರೂಂನ ಸಭಾಗೃಹದಲ್ಲಿ ಮಾಜಿ ವಿದೇಶಗಳ ಭಾರತೀಯ ರಾಯಭಾರಿ ಡಾ. ವಿ.ಬಿ ಸೋನಿ ಅಧ್ಯಕ್ಷತೆಯಲ್ಲಿ ನೆರವೇರಿತು.
ಘಟಿಕೋತ್ಸವದಲ್ಲಿ ಪಿ.ಎನ್ ಅಕಾಡೆಮಿ ಥೈಲ್ಯಾಂಡ್ ಇದರ ಮುಖ್ಯಸ್ಥ ಪಾವ್ಲ್ ಪಿ.ಸ್ರಿನರೂಲಾ ಮುಖ್ಯ ಅತಿಥಿಯಾಗಿ ಮತ್ತು ಗೌರವ ಅತಿಥಿಯಾಗಳಾಗಿ ಥೈಲ್ಯಾಂಡ್ ನ ಪ್ರತಿಷ್ಠಿತ ಶಿಕ್ಷಣತಜ್ಞೆ ಕೆ.ರೋನೆಲ್, ಪ್ರಾಂಶುಪಾಲ ಅಡೋಲ್ಫ್ ಪೆರಿ ಜರ್ಮನ್ ಮತ್ತು ಎಸ್ಪಿಐಯು ಇದರ ಭಾರತೀಯ ಪ್ರತಿನಿಧಿ ಡಾ| ಎಂ.ಬಿಸಾನ್ವಿ ಉಪಸ್ಥಿತರಿದ್ದು ಕರ್ನಾಟಕದ ಮಂಗಳೂರು ಮೂಲತಃ ವಿದೇಶಿ ಯುವ್ಯೋದ್ಯಮಿಯ ಸಾಧನಾಶೀಲತೆ ಮತ್ತು ಸಮಾಜ ಸೇವೆ ಗುರುತಿಸಿ ಯುನೈಟೆಡ್ ರೆಡಿಮಿಕ್ಸ್ ಕಾಂಕ್ರೀಟ್ ಇಂಡಿಯಾ ಸಂಸ್ಥೆಯ ನಿರ್ದೇಶಕ ಅನಿವಾಸಿ ಭಾರತೀಯ ಉದ್ಯಮಿ, ಕೆಪಿಸಿಸಿ ಎನ್‌ಆರ್‌ಐ ಸೌದಿ ಅರೇಬಿಯಾ ಘಟಕದ ಅಧ್ಯಕ್ಷ ಅಬ್ದುಲ್ ಶಕೀಲ್ ದೇರಳಕಟ್ಟೆ (ರೆಂಜಡಿ) ಮತ್ತು ಅತ್ಯಮೂಲ್ಯ ಸಮಾಜ ಸೇವೆ ಪರಿಗಣಿಸಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಸಮಾಜ ಸೇವಕಿ ಶ್ರೀಮತಿ ಸಂಸದ್ ಕುಂಜತ್ತಬೈಲ್ (ಮಂಗಳೂರು) ಇವರಿಗೆ ಗೌರವ ಡಾಕ್ಟರೇಟ್ ಸನದು ಪ್ರದಾನಿಸಿ ಅಭಿನಂದಿಸಿದರು.
ಈ ಶುಭಾವಸರದಲ್ಲಿ ಝೈನೂದ್ಧೀನ್ ಮುನ್ನೂರು, ಸನದ್ ಅಬ್ದುಲ್ ರಹಮಾನ್, ಮಹಮ್ಮದ್ ಇಕ್ಬಾಲ್, ಮಹಮ್ಮದ್ ಹರ್ಷದ್ ಗಣ್ಯರು ಉಪಸ್ಥಿತರಿದ್ದು ಪುರಸ್ಕೃತರಿಗೆ ಅಭಿನಂದಿಸಿದರು.
Click this button or press Ctrl+G to toggle between Kannada and English