ಮಂಗಳೂರು :ಎಸ್.ಎಫ್.ಐ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ನಿನ್ನೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಸ್ವಾಮಿ ವಿವೇಕಾನಂದ ಹಾಗೂ ಭೂಗತ ದೊರೆ ದಾವೂದ್ ಇಬ್ರಾಹಿಂ ಬುದ್ದಿಮತ್ತೆ ಒಂದೇ ಎಂಬ ಹೇಳಿಕೆಯ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್.ಎಫ್.ಐ. ರಾಜ್ಯ ಸಹ ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್ ಭ್ರಷ್ಟಾಚಾರದಲ್ಲಿ ಸಿಲುಕಿರುವ ನಿತಿನ್ ಗಡ್ಕರಿ ಹತಾಶರಾಗಿದ್ದು, ಅವರ ತಲೆ ಖಾಲಿಯಾಗಿದೆ. ಆದುದರಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯುವಕರ ಆದರ್ಶ ವಿವೇಕಾನಂದರನ್ನು ಭೂಗತ ಪಾತಕಿ ದಾವೂದ್ ಗೆ ಹೋಲಿಸಿದ್ದು ಅತ್ಯಂತ ದೊಡ್ಡ ಅಪರಾಧ, ಅವರಿಬ್ಬರ ಬುದ್ದಿಮತ್ತೆಯನ್ನು ಗಡ್ಕರಿ ಯಾವಾಗ ಪರೀಕ್ಷಿಸಿದರು. ದಾವೂದ್ ಇಬ್ರಾಹೀಂ ನಂತಹ ವ್ಯಕ್ತಿ ವಿವೇಕಾನಂದರ ಐಕ್ಯೂಗೆ ಸಮ ಎನಿಸುವುದಿಲ್ಲ. ಅದೇನಿದ್ದರೂ ನಿತಿನ್ ಗಡ್ಕರಿಯ ಐಕ್ಯೂಗೆ ಸಮ ಎಂದು ಜೀವರಾಜ್ ಕುತ್ತಾರ್ ಆರೋಪಿಸಿದರು. ನಿತಿನ್ ಗಡ್ಕರಿ ಜನರ ಮಧ್ಯ ದಲ್ಲಿಯೇ ಬೆರತು ಲೂಟಿ ಮಾಡಿದರೆ ದಾವೂದ್ ಅವಿತು ಲೂಟಿ ಮಾಡಿದ್ದಾನೆ. ಆದುದರಿಂದ ಅವರಿಬ್ಬರ ಮಧ್ಯದ ಹೋಲಿಕೆ ಸರಿಯಾಗುತ್ತದೆ ಎಂದರು.
ಬಿಜೆಪಿಯರಿಗೆ ಖಾವಿದಾರಿಗಳೆಲ್ಲ ಭಯೋತ್ಪಾದಕರಾಗಿ ಕಾಣುತ್ತಿದ್ದಾರೆ. ಎಲ್ಲ ಖಾವಿದಾರಿಗಳೂ ಭಯೋತ್ಪಾದಕರಲ್ಲ. ಸಂಘ ಪರಿವಾರ ಸಂಪರ್ಕದಲ್ಲಿರುವ ಖಾವಿದಾರಿಗಳು ಮಾತ್ರ ಭಯೋತ್ಪಾದಕರಾಗಿರಲು ಸಾಧ್ಯ ಎಂದುಅವರು ಆರೋಪಿಸಿದರು, ನಿತಿನ್ ಗಡ್ಕರಿ ತಮ್ಮ ಹೇಳಿಕೆಗೆ ಸಂಬಂದಿಸಿದಂತೆ ಸಾರ್ವಜನಿಕ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ಗಡ್ಕರಿಯ ಪ್ರತಿಕೃತಿ ದಹಿಸಲಾಯಿತು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ರಝಾಕಂ ಮೊಂಟೆಪದವು, ನಗರ ಅಧ್ಯಕ್ಷ ಶರಣ್ ಶೆಟ್ಟಿ, ಹಂಝ ಕಿನ್ಯ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Click this button or press Ctrl+G to toggle between Kannada and English