ಬಂಟ್ವಾಳ : ಕೇರಳದ ನಟೋರಿಯಸ್ ರೌಡಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಗ್ರಿ ಎಂಬಲ್ಲಿ ನಿಗೂಢವಾಗಿ ಕೊಲೆಯಾಗಿದ್ದಾನೆ.
ಕೊಲೆಯಾದ ವ್ಯಕ್ತಿ ನಟೋರಿಯಸ್ ರೌಡಿಶೀಟರ್ ಕೇರಳ ಮೂಲದ ಮುತ್ತಾಸಿಮ್ ಯಾನೆ ತಸ್ಲೀಮ್ ಎಂದು ಗುರುತಿಸಲಾಗಿದ್ದು ಬಂಟ್ವಾಳದ ನಗ್ರಿ ಸಮೀಪದ ಗುಡ್ಡೆಯಲ್ಲಿ ಅನಾಥವಾಗಿ ಕಾರೊಂದರಲ್ಲಿ ಶವ ಪತ್ತೆಯಾಗಿದೆ.
ಅಪಹರಣ ಮಾಡಿ ಕೊಲೆ ಮಾಡಿ ಬಂಟ್ವಾಳ ಸಮೀಪದ ನಗ್ರಿ ಎಂಬಲ್ಲಿ ಕಾರು ನಿಲ್ಲಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.
2017ರಲ್ಲಿ ಮಂಗಳೂರು ಹೊರವಲಯದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಪೆಟ್ರೋಲ್ ಪಂಪ್ ಬಳಿ ಕೇರಳ ಮೂಲದ ನಟೋರಿಯಸ್ ರೌಡಿ ಕಾಲಿಯಾ ರಫೀಕ್ ಮರ್ಡರ್ ಕೇಸಿನಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ.
2019ರಲ್ಲಿ ಮಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿ ಈತ ಬೆಳಗಾವಿ ಜೈಲಿನಲ್ಲಿದ್ದ. ಎರಡು ದಿನಗಳ ಹಿಂದೆ ಬೇಲ್ ಮೂಲಕ ಹೊರಬಂದಿದ್ದ ಈತನನ್ನು ಸ್ಕೆಚ್ ಹಾಕಿ ಕಾದುಕುಳಿತಿದ್ದ ದುಷ್ಕರ್ಮಿ ತಂಡ ಈತನನ್ನು ಬೆಳಗಾವಿ ನಿಂದ ಕಿಡ್ನಾಪ್ ಮಾಡಿ ತಂದು ಕೊಲೆ ಮಾಡಿರುವುದಾಗಿ ಗುಮಾನಿ ವ್ಯಕ್ತವಾಗಿದೆ.
ಭೂಗತ ಜಗತ್ತಿನ ನೇರ ಸಂಪರ್ಕ ಹೊಂದಿದ್ದ ಮುತ್ತಾಸಿಮ್ ಮೇಲೆ ಅನೇಕ ಪ್ರಕರಣಗಳು ಕೇರಳ ಹಾಗೂ ಕರ್ನಾಟಕದಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Click this button or press Ctrl+G to toggle between Kannada and English