ಮಂಗಳೂರು : ಈ ವಿಚಾರವಾಗಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಹೊರಡಿಸುವಂತೆ ಕೋರಿ ಮೊಕದ್ದಮೆ ದಾಖಲಾಗಿದೆ.
ಪ್ರಕರಣದ ವಾದಪತ್ರ ಮತ್ತು ಅರ್ಜಿಯನ್ನು ಕನ್ನಡದಲ್ಲಿ ತಯಾರಿಸಿದ್ದರೆ ನ್ಯಾಯಾಲಯದ ಆದೇಶ ಸಫಲವಾಗುತ್ತಿತ್ತು. ವಾದಪತ್ರ ಮತ್ತು ಅರ್ಜಿಯು ಇಂಗ್ಲಿಷಿನಲ್ಲಿ ಇದ್ದುದರಿಂದ ನ್ಯಾಯಾಲಯದ ಆದೇಶವೂ ಇಂಗ್ಲಿಷಿನಲ್ಲಿದೆ.
ಹಾಗಾಗಿ ನ್ಯಾಯಾಲಯವು ವಾದಿಗೆ ಪರಿಹಾರ ನೀಡಿದ್ದರೂ ಅದರಿಂದ ಯಾವುದೇ ಪ್ರಯೋಜನವಿಲ್ಲ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದವರು ಶಿಕ್ಷೆಗೆ ಗುರಿಯಾಗುವ ಪ್ರಮೇಯವಿಲ್ಲ. ಏಕೆಂದರೆ….’ಮಿಣಿಮಿಣಿ’ ಎಂಬ ಪದವನ್ನು ಇಂಗ್ಲಿಷಿನಲ್ಲಿ ‘MINI MINI’ ಎಂದು ಹೇಳಿರುವುದರಿಂದ ಅದು ‘ಮಿನಿಮಿನಿ’ ಎಂದಂತಾಗಿದೆ.
ಹಾಗಾಗಿ ನ್ಯಾಯಾಲಯವು ವಾದಿಯ ವಿಚಾರವಾಗಿ ‘ಮಿನಿಮಿನಿ’ ಎಂಬ ಪದವನ್ನು ಬಳಸದಂತೆ ನಿರ್ಬಂಧಕಾಜ್ಞೆ ಹೊರಡಿಸಿರುವುದರಿಂದ ಪ್ರತಿವಾದಿಗಳು ‘ಮಿಣಿಮಿಣಿ’ ಎಂದರೂ ಸಹ ಶಿಕ್ಷೆಯಿಂದ ಪಾರಾಗಬಹುದು.
ಮಾನನಷ್ಟ ಮೊಕದ್ದಮೆ,ಜೀವ ಬೆದರಿಕೆ ಹಾಗೂ ಇಂತಹ ಪ್ರಕರಣಗಳಲ್ಲಿ ಬಳಸಲಾದ ಪದಗಳನ್ನು ಆಯಾಯ ಭಾಷೆಗಳಲ್ಲಿ ಬರೆಯಬೇಕು!
ಕನ್ನಡವನ್ನು ಕನ್ನಡದಲ್ಲಿ ಬರೆದರೆ ಮಾತ್ರ ಅದಕ್ಕೊಂದು ಅರ್ಥವಿದೆ.ಕನ್ನಡವನ್ನು ಇಂಗ್ಲಿಷಿನಲ್ಲಿ ಬರೆದರೆ ಅಪಾರ್ಥ ಒಂದೇ ಅಲ್ಲ ಅನರ್ಥವೂ ಆದೀತು ಎಂಬುದಕ್ಕೆ ಮಿಣಿಮಿಣಿಯೇ ಸಾಕ್ಷಿ!
Click this button or press Ctrl+G to toggle between Kannada and English