ಎರಡು ಪ್ರತ್ಯೇಕ ಪ್ರಕರಣ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳನ ಕೈಚಳಕ; ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

11:53 AM, Monday, February 3rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

kalavu

ಮೈಸೂರು : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಮನೆಯ ಬಾಗಿಲು ಮೀಟಿ ಚಿನ್ನಾಭರಣ ಕದ್ದೊಯ್ದ ಘಟನೆ ಮೈಸೂರಿನಲ್ಲಿ ನಡೆದಿದೆ. ಮತ್ತೊಂದು ಕಡೆ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ.

ಸರಸ್ವತಿಪುರಂ ಠಾಣೆಗೆ ಉಷಾ ಎಂಬವರು ದೂರು ನೀಡಿದ್ದು, 11/01/2020 ರ ಬೆಳಿಗ್ಗೆ 8.30 ರಿಂದ 29/01/2020 ರ ರಾತ್ರಿ 10.30 ರ ನಡುವೆ ಯಾರೋ ಕಳ್ಳರು ಶಾರದಾದೇವಿನಗರದ ಬಳಿ ಇರುವ ಕಾವೇರಿ ಅಪಾರ್ಟ್ ಮೆಂಟ್ ನಮ್ಮ ಮನೆಯ ಬಾಗಿಲನ್ನು ಮೀಟಿ ಒಳಪ್ರವೇಶಿಸಿ ಬೆಡ್ ರೂಂ ಗಳಲ್ಲಿದ್ದ ಗಾಡ್ರೇಜ್ ಬೀರು ಗಳನ್ನು ಮೀಟಿ ಅದರೊಳಗಿದ್ದ ಮತ್ತು ದೇವರ ಮನೆಯಲ್ಲಿದ್ದ 90 ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು 450 ಗ್ರಾಂ ನ ಬೆಳ್ಳಿಯ ಪದಾರ್ಥಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇವುಗಳ ಬೆಲೆ ಸುಮಾರು 3,50000 ರೂ ಗಳಾಗುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೇವರಾಜ ಠಾಣೆಗೆ ಸತೀಶ್ ಕೋಠಾರಿ ಎಂಬವರು ದೂರು ನೀಡಿದ್ದು, ವಿನೋಬಾ ರಸ್ತೆ ದೇವರಾಜ ಮೊಹಲ್ಲಾದ ಬಳಿ ರೈಲ್ವೆ ಟಿಕೇಟ್ ಬುಕ್ ಮಾಡಲು ಹೊರಗೆ ಹೋಗಿದ್ದೆ. ಮನೆಯಲ್ಲಿ ಯಾರೂ ಇರಲಿಲ್ಲ. ನಂತರ ಮಧ್ಯಾಹ್ನ 2.30 ರ ಸಮಯದಲ್ಲಿ ವಾಪಸ್ ಬಂದು ನೋಡಿದಾಗ ಯಾರೋ ಅಪರಿಚಿತ ವ್ಯಕ್ತಿ ಮನೆಯ ಕಾಂಪೌಂಡ್ ಜಿಗಿದು ಬಂದು ರೂಂ ಕಿಟಕಿಯಲ್ಲಿ ಯಾವುದೋ ದೊಣ್ಣೆಯಿಂದ ಅಥವಾ ಸರಳಿನಿಂದ ಕಳವು ಮಾಡಲು ಪ್ರಯತ್ನಿಸಿ ನಂತರ ಮನೆಯ ಹಿಂಭಾಗದಲ್ಲಿರುವ ಔಟ್ ಹೌಸ್ ನ ಬೀಗ ಒಡೆದು ಕಳವು ಮಾಡಲು ಪ್ರಯತ್ನಿಸಿದ್ದಾನೆ. ವ್ಯಕ್ತಿ ಮನೆಯ ಕಡೆ ಬರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯ ಕಳವು ಮಾಡಲು ಪ್ರಯತ್ನಿಸಿದ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಅರವಿಂದ ನಗರದ ನಿವಾಸಿ ಜಗನ್ನಾಥ್ ಎಂಬವರು ಮನೆಗೆ ಬೀಗ ಹಾಕಿ ಹೋಗಿದ್ದಾಗ ಜ.29ರ ರಾತ್ರಿ ಕಳ್ಳರು ಬಾಗಿಲು ಮೀಟಿ 1.25ಲಕ್ಷರೂ.ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಕುರಿತು ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English