ನವದೆಹಲಿ : ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸದ ಅನಂತ್ಕುಮಾರ್ ಹೆಗಡೆ ನಿವಾಸಕ್ಕೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದ್ದರು. ಗಾಂಧೀಜಿ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆ, ಬಿಜೆಪಿ ಹೈ ಕಮಾಂಡ್ ಹೆಗಡೆಯನ್ನು ತರಾಟೆಗೆ ತೆಗೆದುಕೊಂಡಿದೆ. ಈ ಹಿನ್ನೆಲೆ ಲೋಧಿ ಎಸ್ಟೇಟ್ನಲ್ಲಿರುವ ಅನಂತ ಕುಮಾರ್ ನಿವಾಸಕ್ಕೆ ತೆರಳಿ ಕಟೀಲ್ ಚರ್ಚೆ ನಡೆಸಿದ್ದಾರೆ.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗಾಂಧೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವಿಷಯ ಚರ್ಚಿಸಿದ್ದೇನೆ. ಈಗಾಗಲೇ ಅನಂತಕುಮಾರ್ ಹೆಗಡೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ವಿವರಣೆ ಕಳುಹಿಸಿ ಕೊಟ್ಟಿದ್ದಾರೆ,” ಎಂದರು.
ಅನಂತಕುಮಾರ್ ಹೆಗಡೆ ಭೇಟಿ ಮಾಡುವ ಮುನ್ನ ಮಾತನಾಡಿದ್ದ ಕಟೀಲ್, “ಈಗಾಗಲೇ ಕಾರಣ ಕೇಳಿ ಅನಂತಕುಮಾರ್ ಹೆಗಡೆಗೆ ನೋಟಿಸ್ ನೀಡಿದ್ಧೇವೆ. ಈ ವಿಷಯವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾಗೆ ತಿಳಿಸಿದ್ದೇವೆ. ಪಕ್ಷದ ನಿಯಮಗಳ ಪ್ರಕಾರ ಅವರೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ” ಎಂದು ಕಟೀಲ್ ಹೇಳಿದರು.
ಮಹಾತ್ಮ ಗಾಂಧಿ ಅವರನ್ನ ಮಹಾತ್ಮರು ಎಂದು ಬಿಜೆಪಿ ಒಪ್ಪಿಕೊಂಡಿದೆ. ಅವರ ವಿಚಾರಗಳು ಬಿಜೆಪಿಯ ನೀತಿಗಳಲ್ಲಿ ಅಡಕವಾಗಿದೆ. ಅನಂತಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕವಾದದ್ದು. ಪಕ್ಷಕ್ಕೂ ಅನಂತಕುಮಾರ್ ಹೇಳಿಕೆಗೂ ಸಂಬಂಧವಿಲ್ಲ. ಗಾಂಧೀಜಿ ಬಗ್ಗೆ ಉಡಾಫೆಯಾಗಿ ಮಾತನಾಡಿರುವ ಹೆಗಡೆ ಹೇಳಿಕೆಯನ್ನು ನಾವು ತಿರಸ್ಕರಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಅನಂತಕುಮಾರ್ ಹೆಗಡೆ ಗಾಂಧೀಜಿ ಕುರಿತಾಗಿ ಮಾತನಾಡಿರುವ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷರೇ ವಿವರಣೆ ಕೇಳಿದ್ದರು. ಈಗಾಗಲೇ ಜೆ.ಪಿ. ನಡ್ಡಾಗೆ ಈ ಬಗ್ಗೆ ತಿಳಿಸಿದ್ದೇವೆ. ಚರ್ಚೆ ನಡೆಸಿದ ಬಳಿಕ ಪಕ್ಷದ ವ್ಯವಸ್ಥೆಯಡಿ ಅನಂತ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
40ಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗಾಹುತಿಇದೇ ವೇಳೆ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಕಟೀಲ್ ಪ್ರತಿಕ್ರಿಯೆ ನೀಡಿದರು. “ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಸಚಿವ ಸಂಪುಟ ವಿಸ್ತರಿಸುತ್ತೇವೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದನ್ನು ಸಿಎಂ ಯಡಿಯೂರಪ್ಪ ನಿರ್ಧರಿಸಲಿದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದರು.
Click this button or press Ctrl+G to toggle between Kannada and English