ತಂದೆಯ ಶವಸಂಸ್ಕಾರಕ್ಕೆಂದು ಹೊರಟ ಕೊಂಡಂಗೇರಿ ಶಿಕ್ಷಕ ದಂಪತಿ ಸಾವು

11:52 AM, Tuesday, February 4th, 2020
Share
1 Star2 Stars3 Stars4 Stars5 Stars
(No Ratings Yet)
Loading...

accident

ಮಡಿಕೇರಿ : ತಂದೆಯ ಶವ ಸಂಸ್ಕಾರಕ್ಕೆಂದು ಹೊರಟ್ಟಿದ್ದ ಕೊಡಗಿನ ಕೊಂಡಂಗೇರಿ ಸರ್ಕಾರಿ ಪ್ರೌಢಶಾಲೆಯ ಇಂಗ್ಲೀಷ್ ಶಿಕ್ಷಕ ದಂಪತಿ ರಸ್ತೆ ಅಪಘಾತದಲ್ಲಿ ಬಲಿಯಾದ ಘಟನೆ ಕೂಡ್ಲಿಗಿ ಪಟ್ಟಣದ ವಿರುಪಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಕಾರು ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಶಿಕ್ಷಕ ವಸಂತ ಕುಮಾರ್ (37), ಪತ್ನಿ ವಿನುತ (30) ಹಾಗೂ ಕಾರು ಚಾಲಕ ಲೋಹಿತ್ (38) ಮೃತಪಟ್ಟಿದ್ದಾರೆ. ಶಿಕ್ಷಕ ದಂಪತಿಯ ಪುತ್ರಿ ಋತ್ವಿಕಾ (2) ಬದುಕುಳಿದಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ವಸಂತ ಕುಮಾರ್ ಬಾಗಲಕೋಟೆ ಜಿಲ್ಲೆಯ ಇಳಕಲ್ಲು ಮೂಲದವರಾಗಿದ್ದು, ಕೊಂಡಂಗೇರಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಳಕಲ್ಲಿನಲ್ಲಿ ವಸಂತ ಕುಮಾರ್ ಅವರ ತಂದೆ ಮೃತಪಟ್ಟ ಹಿನ್ನೆಲೆ ಪತ್ನಿ ಮತ್ತು ಮಗಳೊಂದಿಗೆ ಶವ ಸಂಸ್ಕಾರಕ್ಕೆಂದು ಮಡಿಕೇರಿಯ ಟ್ಯಾಕ್ಸಿಯಲ್ಲಿ ತೆರಳಿದ್ದರು.

ಮೃತ ಕಾರು ಚಾಲಕ ಲೋಹಿತ್ ಮೂರ್ನಾಡು ಗ್ರಾಮದ ನಿವಾಸಿಯಾಗಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English