ಪ್ರಜ್ವಲ್ಸ್ ಆಕ್ಟಿಂಗ್ ಕ್ಲಾಸ್ ಸಮಾರೋಪ ಸಮಾರಂಭ

5:29 PM, Tuesday, February 4th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

prajwal

ಮಂಗಳೂರು : ಪ್ರಜ್ವಲ್ಸ್ ಆಕ್ಟಿಂಗ್ ಕ್ಲಾಸ್ ಇದರ ಸಮಾರೋಪ ಸಮಾರಂಭ ಕಾರ್ಯಕ್ರಮವು 03.02.2020 ರಂದು ಮುನೇಶ್ವರ ದೇವಸ್ಥಾನ, ಪೋಲಿಸ್ ಲೈನ್, ಪಾಂಡೇಶ್ವರದಲ್ಲಿ ನಡೆದಿದೆ.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಚಲನಚಿತ್ರ ನಿರ್ದೇಶಕ ಹಾಗೂ ರಂಗಕರ್ಮಿ ‘ವಿಜಯ್ ಕುಮಾರ್ ಕೊಡಿಯಾಲ್ ಬೈಲ್’, ಕನ್ನಡ ‘ಲುಂಗಿ’ ಚಿತ್ರದ ನಾಯಕ ‘ಪ್ರಣವ್ ಹೆಗ್ದೆ,’ ಸಾಹಿತಿ ಡಾಕ್ಟರ್ ಕಾಸರಗೋಡು ಅಶೋಕ್ ಕುಮಾರ್’,ರಂಗಕರ್ಮಿ, ಡ್ರಾಮಾ ಡೈರೆಕ್ಟರ್ ‘ಜಿಎ ಬೋಲೂರ್’, ರಂಗಕರ್ಮಿ ಹಾಗೂ ಚಿತ್ರನಟ ಶರತ್ ಅಲ್ವ’ ಪುತ್ತೂರು, ಹಾಗೂ ‘ಪಮ್ಮಿ ಕೊಡಿಯಲ್ಬೈಲ್,’ಕುಮಾರ್ ಮಾಲೆಮಾರ್ ಫೈನ್ ಆರ್ಟ್ಸ್ ಇವರೆಲ್ಲರೂ ಉಪಸ್ಥಿತರಿದ್ದರು.

ಪ್ರಜ್ವಲ್ಸ್ ಆಕ್ಟಿಂಗ್ ಕ್ಲಾಸ್ ಸಮಾರೋಪ ಸಮಾರಂಭದಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರನ್ನ ಸನ್ಮಾನಿಸಲಾಯಿತು.

prajwal

ಮಂಗಳೂರಿನಲ್ಲಿ ಇಂತಹ ಒಂದು ಕಡಿಮೆ ಫೀಸ್ನಲ್ಲಿ ಎಲ್ಲಿಯೂ, ಯಾರು ಕೂಡ ಆಕ್ಟಿಂಗ್ ಕ್ಲಾಸ್ ನಡೆಸುತ್ತಿಲ್ಲ. ಪ್ರಜ್ವಲ್ ಅವರು, ಚಿತ್ರರಂಗಕ್ಕೆ ಬರುವ ಹೊಸ ಪ್ರತಿಭೆಗಳಿಗೆ ಇಲ್ಲೊಂದು ಅವಕಾಶ ಕೊಡುತ್ತಿದ್ದಾರೆ. ಎಲ್ಲಿಯೂ ಆಕ್ಟಿಂಗ್ ಕ್ಲಾಸ್ ಅಂದರೆ 30000, 50000, 100000 ಈ ರೀತಿಯಲ್ಲಿ ಫೀಸ್ ಇಡುತ್ತಿದ್ದಾರೆ, ಆದರೆ ಇದೇ ಮೊದಲ ಬಾರಿ ಮಂಗಳೂರಿನಲ್ಲಿ ಇಂತಹ ಒಂದು ಯೋಜನೆಗೆ ಪ್ರಜ್ವಲ್ ಪೂಜಾರಿಯವರು ಕೈಹಾಕಿದ್ದಾರೆ. ಈಗಾಗಲೇ ಒಂದು ಬ್ಯಾಚ್ ಮುಗಿಸಿದ್ದಾರೆ. ಇದು ಒಂದು 19 ದಿನದ ತರಬೇತಿ ಆಗಿದೆ. ಇದನ್ನ ಇನ್ನು ಮುಂದೆ ಒಂದು ಆಕ್ಟಿಂಗ್ ಸ್ಕೂಲ್ ಮಾಡಬೇಕು ಎನ್ನುವುದು ನನ್ನ ಹಾಗೂ ಇವರಂತೆಯೇ ಇನ್ನು ನಟನೆ ಕಲಿಯಬೇಕೆಂದು ಆಸೆ ಇರುವವರಿಗಾಗಿ ಆಕ್ಟಿಂಗ್ ಸ್ಕೂಲ್ ಅನ್ನ ಪ್ರಾರಂಭ ಮಾಡಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ” ಎಂದು ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು ಮಾತನಾಡಿದ್ದಾರೆ.

ಸೇರಿದ ಎಲ್ಲಾ ಅತಿಥಿಗಳ ಆಸೆ ಇದಾಗಿತ್ತು, ಈ ಒಂದು ಯೋಜನೆ ಏನಿದಿಯೋ ಪ್ರಜ್ವಲ್ಸ್ ಆಕ್ಟಿಂಗ್ ಕ್ಲಾಸ್ ಇನ್ನು ಮುಂದೆ ಪ್ರಜ್ವಲ್ಸ್ ಆಕ್ಟಿಂಗ್ ಸ್ಕೂಲ್ ಆಗಬೇಕೆನ್ನುವುದಾಗಿತ್ತು.

ಪ್ರಜ್ವಲ್ಸ್ ಆಕ್ಟಿಂಗ್ ಕ್ಲಾಸಲ್ಲಿ ತರಬೇತಿ ಪಡೆದಿರುವ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳ ಕೈಯಲ್ಲಿ ಸರ್ಟಿಫಿಕೇಟ್ ಕೊಡಲಾಯಿತು. ಹಾಗೂ ಅತಿಥಿಗಳ ಮುಂದೆ ವಿದ್ಯಾರ್ಥಿಗಳ ಒಂದು ನಾಟಕ ಪರ್ಫಾರ್ಮೆನ್ಸ್, ನಟನೆ ತೋರಿಸಲಾಯಿತು. ಹಾಗೆ ನಂತರ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಪ್ರಜ್ವಲ್ ಪೂಜಾರಿ ಇವರು ಪ್ರಜ್ವಲ್ ಆಕ್ಟಿಂಗ್ ಕ್ಲಾಸ್ನ ಆರ್ಗನೈಸರ್ ಹಾಗೂ ಟ್ರೈನರ್ (ಮಾರ್ಗದರ್ಶಿ), ಇನ್ನು ರೂಪೇಶ್ ಶೆಟ್ಟಿ(ತರಬೇತುದಾರ), ಜಿ ಎ ಬೋಲೂರ್ (ತಜ್ಞ ಸಲಹೆಗಾರ), ಡಾಕ್ಟರ್ ಕಾಸರಗೋಡು ಅಶೋಕ್ ಕುಮಾರ್ (ತಜ್ಞ ಸಲಹೆಗಾರ) ಇವರೆಲ್ಲರೂ ಭಾಗಿಯಾಗಿದ್ದರು.
prajwal

ಪ್ರಜ್ವಲ್ ಪೂಜಾರಿಯವರು ನಟನಾಗಬೇಕು ಎನ್ನುವ ಆಸೆ ಕನಸು ಹಿಡ್ಕೊಂಡು ಮಂಗಳೂರಿನಲ್ಲಿ ಒಂದು ಆಕ್ಟಿಂಗ್ ಕ್ಲಾಸ್ ಗೆ 15000 ಫೀಸ್ ಕಟ್ಟಿ 22 ದಿನದ ತರಬೇತಿ ಪಡೆದುಕೊಂಡರು. ಅವರಿಗೆ 15000 ಸುಲಭದ ಹಣ ವಾಗಿರಲಿಲ್ಲ, ಅಷ್ಟೊಂದು ಹಣ ಕಟ್ಟುವ ಆರ್ಥಿಕ ಸೌಲಭ್ಯ ಅವರಲ್ಲಿರಲಿಲ್ಲ. ಆದರೂ ನಟನಾಗಬೇಕು ಎನ್ನುವ ಆಸೆಯಲ್ಲಿ ಹೇಗೋ 15000 ಕಟ್ಟಿದರು. ಅವರಂತೆಯೇ ಚಿತ್ರರಂಗಕ್ಕೆ ಬರಲು ಆಸೆಯಿರುವ, ನಟನಾಗಬೇಕು ಎನ್ನುವ ಕನಸು ಕಟ್ಟಿಕೊಂಡಿರುವ ಪ್ರತಿಭೆಗಳಿಗೆ ಒಂದು ಆಕ್ಟಿಂಗ್ ಕ್ಲಾಸಲ್ಲಿ ತರಬೇತಿ ಪಡೆಯಲು ತುಂಬಾ ಕಷ್ಟ ಇರುವುದರಿಂದ, 15000 ಕೊಟ್ಟು ನಾನು ಕಲಿತಿರುವ ಆಕ್ಟಿಂಗ್ ತರಬೇತಿ ಗಿಂತಲೂ, ಕಡಿಮೆ ವೆಚ್ಚದಲ್ಲಿ (ಅಂದರೆ 1000 ರೂ ಫೀಸ್ ನಲ್ಲಿ) ನಾನು ನನ್ನ ಸ್ವಂತ ಆಕ್ಟಿಂಗ್ ಕ್ಲಾಸನ್ನು ತರಬೇಕೆನ್ನುವ ಕನಸಿನೊಂದಿಗೆ ‘ಪ್ರಜ್ವಲ್ ಪೂಜಾರಿಯವರು’ ಈ ಒಂದು ಯೋಜನೆಯ ಮೂಲಕ ಹಲವಾರು ಪ್ರತಿಭೆಯುಳ್ಳವರಿಗೆ ಅವಕಾಶ ನೀಡುತ್ತಿದ್ದಾರೆ. ಹಾಗೂ ಆ ವಿದ್ಯಾರ್ಥಿಗಳಿಗೆ ಪ್ರಜ್ವಲ್ ಪೂಜಾರಿಯವರೇ ಅವರ ಮುಂದಿನ ಚಲನಚಿತ್ರಗಳಲ್ಲಿ ಅವಕಾಶಗಳನ್ನು ಕೊಡುತ್ತೇನೆ ಎಂದಿದ್ದಾರೆ.

“ಚಿತ್ರರಂಗ ಎನ್ನುವುದು ಹಣ ಇರುವವರಿಗೆ ಮಾತ್ರ, ಸಿಟಿ ಜನರಿಗೆ ಮಾತ್ರ” ಎನ್ನುವ ಜನರ ಮಾತನ್ನು ಸುಳ್ಳು ಮಾಡಲು ಮಂಗಳೂರಿಗೆ ಬಂದು, ಪ್ರಜ್ವಲ್ ಪೂಜಾರಿಯವರು ಇಂತಹ ಒಂದು ಯೋಜನೆಯ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ಸುಲಭದ ದಾರಿಯನ್ನು ತೋರಿಸಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English