‘ಯುವಕರಲ್ಲಿ ದೇಶ ಪ್ರೇಮ ಬಹಳ ಮುಖ್ಯ’

2:35 PM, Wednesday, February 5th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

JCI

ಮಂಗಳೂರು : ರಾಷ್ಟ್ರವು ಅಭಿವೃದ್ಧಿಯಾಗಬೇಕಾದರೆ ನಮ್ಮ ಇಂದಿನ ಯುವಪೀಳಿಗೆಯವರಲ್ಲಿ ದೇಶ ಪ್ರೇಮ ಇರುವುದು ಬಹಳ ಮುಖ್ಯ ಎಂದು ಮಾಜಿ ಸೈನಿಕಾರದ ಶ್ರೀ ರಾಮಕೃಷ್ಣ ರಾವ್ ಅಭಿಪ್ರಾಯಪಟ್ಟರು. ಅವರು ಜೇಸಿಐ ವಲಯ 15 ರ ಅತ್ಯಂತ ಸಕ್ರಿಯವಾದ ಘಟಕ, ಜೇಸಿಐ ಗಣೇಶಪುರ ಹಾಗೂ ಶ್ರೀ ಗೋಕರ್ಣನಾಥೇಶ್ವರ ಕಾಲೇಜು, ಮಂಗಳೂರು ಇವರ ಸಹಯೋಗದೊಂದಿಗೆ ಅದೇ ಕಾಲೇಜಿನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದಂತಹ “ಮ್ಯೂಸಿಕಲ್ ತ್ರಿಬ್ಯುಟ್ ಟು ದ ನೇಶನ್” ಅಂತರ್ ಕಾಲೇಜು ಮಟ್ಟದ ದೇಶ ಭಕ್ತಿಗೀತೆ ಸಂಗೀತ ಸ್ಪರ್ಧೆಯ ಸಮರೋಪ ಸಮಾರಂಭದಲ್ಲಿ ಮಾತನಾಡಿದರು.

ಸ್ಪರ್ಧೆಯ ಉಧ್ಘಾಟನ ಕಾಯಕ್ರಮವು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಡಾ. ರೇಣುಕಾ ಕೆ. ಇವರ ಹಸ್ತದಿಂದ ದೀಪ ಬೆಳಗುವುದರೊಂದಿಗೆ ಪ್ರಾರಂಭವಾಯಿತು. ಅವರು ಜೇಸಿಐ ಗಣೇಶಪುರದ ದೇಶ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

JCI

ವಕೀಲರು ಹಾಗೂ ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘ ಇವರ ಕಾರ್ಯದರ್ಶಿಗಳಾದ ಶ್ರೀ ವಸಂತ ಕುಮಾರ್ ಕರಂದೂರು ಮುಖ್ಯ ಅತಿಥಿಗಳಾಗಿ ಆಗಮಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಗಣೇಶಪುರದ ಜೆಸಿರೆಟ್ ವಿಭಾಗದ ಅಧ್ಯಕ್ಷೆ ಜೆಸಿರೆಟ್ ಶುಭ ಶರತ್ ವಹಿಸಿ ಸ್ವಾಗತವನ್ನು ಕೋರಿದರು.

JCI

ಗೌರವ ಅತಿಥಿಗಳಾಗಿ ವಲಯ 15 ರ ವಲಯಾಧಿಕಾರಿ ಜೇಸಿ ದೀಪಕ್ ಗಾಂಗೂಲಿ ಹಾಗೂ ವಲಯ “ಯುವ ಸಬಲೀಕರಣ ಮತ್ತು ಮಹಿಳಾ ಘಟಕ ವಿಸ್ತರಣೆ” ಸಂಯೋಜಕಿ ಜೇಸಿ ಸ್ಮಿತಾ.ಪಿ. ಹೊಳ್ಳ ಆಗಮಿಸಿದ್ದರು.

ಸ್ಪರ್ಧೆಯಲ್ಲಿ ನಗರದ ಒಟ್ಟು ಹತ್ತು ತಂಡಗಳು ಭಾಗವಹಿಸಿದ್ದವು. ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀ ಎಚ್. ವೆಂಕಟೇಶ ರಾವ್, ಶ್ರೀ ಮುರಳೀಧರ ಕಾಮತ್ ಮತ್ತು ಶ್ರೀಮತಿ ಸ್ಮಿತ ಪಿ. ಹೊಳ್ಳ ಕಾರ್ಯ ನಿರ್ವಹಿಸಿದರು. ಸ್ಪರ್ಧೆಯ ಫಲಿತಾಂಶವಾಗಿ ಪ್ರಥಮ ಸ್ಥಾನ ಸೆಂಟ್ ಆಲೋಶಿಯಸ್ ಕಾಲೇಜು, ದ್ವಿತೀಯ ಸ್ಥಾನ ಪದುವ ಕಾಲೇಜು ಹಾಗೂ ತೃತೀಯ ಸ್ಥಾನ ಕೆನರಾ ಕಾಲೇಜು ಪಡೆದುಕೊಂಡಿತು. ಕಾರ್ಯಕ್ರಮದ ನಿರೂಪಣೆಯನ್ನು ಜೇಸಿ ಉಷಾ ಮಂದಾರ ಕಾಳೆ ವಹಿಸಿದ್ದರು.

JCI

ಸಮಾರೋಪ ಸಮಾರಂಭದಲ್ಲಿ ಮಾಜಿ ಸೈನಿಕ ಶ್ರೀ ರಾಮಕೃಷ್ಣ ರಾವ್ ಇವರನ್ನು ಗೌರವಪೂರ್ವವಾಗಿ ಸನ್ಮಾನಿಸಲಾಯಿತು. ಜೇಸಿ ಗಣೇಶಪುರದ ಅಧ್ಯಕ್ಷರಾದ ಜೇಸಿ ಶರತ್ ಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಉದಯ ಕುಮಾರ್, ಜೇಸಿ ಶ್ರೀಶಾ ಕರ್ಮಾರನ್, ಜೇಸಿ ಲಕ್ಷ್ಮೀಶ ಅಂಚನ್ ಕಾರ್ಯದರ್ಶಿ ಜೇಸಿ ಭರತ್, ಜೇಸಿ ಚಂದನ್, ಜೇಸಿ ಭಾರತಿ ಶ್ರೀಶಾ, ಜೇಸಿ ಶಶಿಕುಮಾರ್, ಜೇಸಿ ಅರುಣ್. ಜೇಸಿ ವೇಣುಗೋಪಾಲ್, ಜೇಸಿ ಚೈತ್ರ, ಜೆಸಿಎಲ್‌ಟಿ ಹೃತಿಕ್, ಮುಂತಾದವರು ಉಪಸ್ಥಿತರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English