ಮಾರಕ ಕರೊನಾ ಸೋಂಕಿಗೆ 490 ಜನ ಬಲಿ : 24 ಸಾವಿರಕ್ಕೂ ಅಧಿಕ ಜನರಿಗೆ ಸೋಂಕು ದೃಢ

12:30 PM, Thursday, February 6th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

virus

ಬೀಜಿಂಗ್ : ಮಾರಕ ಕರೊನಾ ಸೋಂಕಿಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 490ಕ್ಕೆ ಏರಿದೆ. ಸೋಂಕಿನ ಕೇಂದ್ರ ಬಿಂದು ವುಹಾನ್ನಲ್ಲಿ ಸೋಂಕಿತರ ಸಂಖ್ಯೆಯಲ್ಲಿ 3,887 ಹೆಚ್ಚಳವಾಗಿದ್ದು, ಒಟ್ಟಾರೆ ಚೀನಾದಲ್ಲಿ 24,324 ಮಂದಿಗೆ ವೈರಸ್ ತಗುಲಿರುವುದು ದೃಢಪಟ್ಟಿದೆ. ಹಾಂಕಾಂಗ್ ಮತ್ತಿತರ ಕಡೆಗಳಲ್ಲಿ ಕರೊನಾ ವೈರಸ್ನಿಂದ ಆತಂಕ ಹೆಚ್ಚಿದೆ. ಈ ಮಧ್ಯೆ, ಜಪಾನ್ನ ಜಹಜಿನಲ್ಲಿ 10 ಮಂದಿಯಲ್ಲಿ ಮಾರಣಾಂತಿಕ ವೈರಸ್ ಕಾಣಿಸಿಕೊಂಡಿದೆ. ಈ ಮೂಲಕ ಜಪಾನ್ನಲ್ಲಿ ಸೋಂಕು ಪೀಡಿತರ ಸಂಖ್ಯೆ 33ಕ್ಕೆ ಏರಿದೆ. ಹಾಂಕಾಂಗ್ನಲ್ಲಿ ಸೋಂಕು ತಗುಲಿರುವ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಫಿಲಿಪ್ಪೀನ್ಸ್ನಲ್ಲಿ 180 ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಅಸುನೀಗಿದ್ದಾರೆ.

ತನ್ನ ಮೇಲೆ ಅತ್ಯಾಚಾರಗೈಯಲು ಮುಂದಾದ ಕಾಮುಕನಿಂದ ಬಚಾವಾಗಲು ಚೀನಿ ಮಹಿಳೆ ಕರೊನಾ ವೈರಸ್ ಅಸ್ತ್ರ ಬಳಸಿದ್ದಾಳೆ. ವುಹಾನ್ನಿಂದ ಸ್ವಲ್ಪವೇ ದೂರವಿರುವ ಪಿಂಗ್ಬಾ ಪಟ್ಟಣದಲ್ಲಿ ಈ ಪ್ರಕರಣ ನಡೆದಿದೆ. ಮನೆಯಲ್ಲಿ ಮಹಿಳೆ ಒಂಟಿಯಾಗಿದ್ದಾಗ ದುಷ್ಕರ್ವಿುಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದ. ‘ನಾನು ಈಗಷ್ಟೆ ವುಹಾನ್ನಿಂದ ಮರಳಿದ್ದೇನೆ. ನನಗೆ ಕರೊನಾ ವೈರಸ್ ತಗಲಿದ್ದು ಮನೆಯಲ್ಲಿ ಒಂಟಿಯಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ’ ಎಂದು ಯುವತಿ ಹೇಳಿದ್ದಾಳೆ. ಕೆಮ್ಮು ಬಂದಂತೆ ಆಕೆ ನಟಿಸಿದ್ದಾಳೆ. ಇದರಿಂದ ಹೆದರಿದ ದುಷ್ಕರ್ವಿು ಅಲ್ಲಿಂದ ಪರಾರಿಯಾದ.

ವುಹಾನ್ನಲ್ಲಿ ನವಜಾತ ಶಿಶುವಿಗೂ (ಜನಿಸಿ 30 ತಾಸು) ಮಾರಕ ಕರೊನಾ ವೈರಸ್ ತಗುಲಿದ್ದು, ಗರ್ಭಾವಸ್ಥೆ ಅಥವಾ ಜನಿಸಿದ ಕೆಲವು ತಾಸಿನಲ್ಲೇ ಸೋಂಕು ತಗುಲಿರುವ ಶಂಕೆಯನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. ಹೆರಿಗೂ ಮುನ್ನ ನಡೆಸಿದ ತಪಾಸಣೆಯಲ್ಲಿ ತಾಯಿಯಲ್ಲಿ ವೈರಸ್ ದೃಢಪಟ್ಟಿತ್ತು. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತೆರೆದಿರುವ ಆಸ್ಪತ್ರೆಗಳಲ್ಲಿ ವಿಪರೀತ ಜನಸಂದಣಿ ಉಂಟಾಗಿದೆ. 10 ದಿನಗಳಲ್ಲಿ ನಿರ್ವಣವಾದ 1 ಸಾವಿರ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಮತ್ತು 1,500 ಹಾಸಿಗೆ ವ್ಯವಸ್ಥೆಯುಳ್ಳ ಆಸ್ಪತ್ರೆಗಳು ವೈರಸ್ ಶಂಕಿತರಿಂದ ತುಂಬಿ ಹೋಗಿವೆ. ಒಟ್ಟಾರೆ ತಾತ್ಕಾಲಿಕ ಆಸ್ಪತ್ರೆಗಳಲ್ಲಿ 3,400 ಜನರಿಗೆ ಚಿಕಿತ್ಸೆ ನೀಡಲಾಗಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English