ಎಬಿವಿಪಿಯಿಂದ ಕುದ್ಮುಲ್ ರಂಗರವ್ ಸಮಾಧಿಗೆ ಪುಷ್ಪನಮನ

9:36 AM, Friday, February 7th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

ABVP

ಮಂಗಳೂರು : ಶಿಕ್ಷಣದಿಂದ ಪರಿವರ್ತನೆ ಸಾಧ್ಯ ಎಂದು ತಿಳಿಸಿಕೊಟ್ಟ ಕುದ್ಮುಲ್ ರಂಗರಾವ್ ಸಮಾಜಕ್ಕೆ ಪ್ರೇರಣೆ. ಮಂಗಳೂರಿನ ಪುರಭವನದಲ್ಲಿ ನಡೆಯುತ್ತಿರುವ ಅಭಾವಿಪದ 39ನೇ ರಾಜ್ಯ ಸಮ್ಮೇಳನಕ್ಕೆ ಅವರ ತತ್ವ ಆದರ್ಶಗಳು ಮಾದರಿಯಾಗಿವೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ ತಿಳಿಸಿದರು.

ಇವರು ಗುರವಾರ ಮಂಗಳೂರಿನ ಬಾಬುಗುಡ್ಡೆಯ ಬಳಿ ಇರುವ ಕುದ್ಮುಲ್ ರಂಗರಾವ್ ಸ್ಮಾರಕಕ್ಕೆ ಪುಷ್ಪರ್ಚಾನೆ ಮಾಡಿ ಮಾತನಾಡಿದರು.

ABVP

ಸಶಕ್ತ ಸಮಾಜಕ್ಕೆ ಮಾರಕವಾದ ಅಸ್ಪೃಶ್ಯತೆಯ ನಿವಾರಣೆಗಾಗಿ ಜೀವ ಸವೆಸಿದ ಕುದ್ಮುಲ್ ರಂಗರಾವ್ ಒಬ್ಬ ಸಮಾಜ ಸುಧಾರಕ. ದಲಿತರ ಏಳಿಗೆಗಾಗಿ ಶ್ರಮಿಸಿದ ಶ್ರಮಜೀವಿ, ದಮನಿತರ ಧ್ವನಿಯಾಗಿ ಬದುಕಿದವರು ಅಸ್ಪೃಷ್ಯತೆ ನಿವಾರಣೆಯ ಕಾರ್ಯದಲ್ಲಿ ಮಹಾತ್ಮ ಗಾಂಧೀಜಿಯವರಿಗೆ ಪ್ರೇರಣೆಯಾಗಿದ್ದವರು ಎಂದು ಕುದ್ಮುಲ್ ರಂಗರಾವ್ ಸ್ಮಾರಕ ಸಮಿತಿಯ ಪ್ರಧಾನ ಕಾರ್ಯದರ್ಶಿ ರಘುವೀರ ಬಾಬುಗುಡ್ಡೆ ಹೇಳಿದರು.

ಅಭಾವಿಪ ಮಂಗಳೂರು ವಿಭಾಗ ಪ್ರಮುಖರಾದ ಕೇಶವ ಬಂಗೇರ ಮಾತನಾಡಿ ಕುದ್ಮುಲ್ ರಂಗರಾವ್ ನುಡಿದಂತೆ ನಡೆದವರು, ದಲಿತರ ಉದ್ಧಾರಕ್ಕಾಗಿ ವಕೀಲಿ ವೃತ್ತಿಯನ್ನೇ ತೊರೆದವರು. ದೀನದಲಿತರಿಗಾಗಿ ದುಡಿದ ಧೀಮಂತ ವ್ಯಕ್ತಿತ್ವ ಅವರದ್ದು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮಂಗಳೂರು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯರಾದ ರವಿಚಂದ್ರ ಪಿ.ಎಂ, ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪ್ರತೀಕ್ ಮಾಳಿ, ಸ್ಮಾರಕ ಸಮಿತಿಯ ಸದಸ್ಯರಾದ ಶ್ರೀಧರ್ ಬಿ, ರವೀಂದ್ರನಾಥ್ ಬಿ ಮೊದಲಾದವರು ಉಪಸ್ಥಿತರಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English