ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ : ಲಾಭ ಪಡೆಯಲು ಕೊಡಗಿನ ರೈತರಲ್ಲಿ ಜಿಲ್ಲಾಧಿಕಾರಿ ಮನವಿ

10:58 AM, Saturday, February 8th, 2020
Share
1 Star2 Stars3 Stars4 Stars5 Stars
(No Ratings Yet)
Loading...

bank

ಮಡಿಕೇರಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು 2018ರಿಂದ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ರಾಷ್ಟ್ರೀಕತ ಬ್ಯಾಂಕ್, ಗ್ರಾಮೀಣ ಬ್ಯಾಂಕುಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಂದ 2019ರವರೆಗೆ 91,311 ರೈತರು ಬೆಳೆಸಾಲ ಪಡೆದವರಾಗಿದ್ದು, ಇಲ್ಲಿಯವರೆಗೆ 44.174 ರೈತರು ಮಾತ್ರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಉಳಿದ ರೈತರು ಕೂಡ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದ್ದಾರೆ.

ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯಲ್ಲಿ ಹೆಸರು ನೋಂದಾಯಿಸಲ್ಪಟ್ಟು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯದೆ ಇದ್ದವರು 2020 ಫೆ.24 ರೊಳಗೆ ಖಾತೆ ಹೊಂದಿರುವ ಬ್ಯಾಂಕುಗಳ ಶಾಖೆಗಳನ್ನ ಸಂಪರ್ಕಿಸಿ ರೈತರು ಯೋಜನೆಯ ಲಾಭ ಪಡೆಯಬಹುದು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ಪಿಎಂ ಕಿಸಾನ್ ಫಲಾನುಭವಿಗಳಿಗೆ ನಿಯಮಾನುಸಾರ ಆದ್ಯತೆ ಮೇರೆಗೆ ಬೆಳೆಸಾಲ( ಕೆ ಸಿ ಸಿ) ವಿತರಿಸಿ ಕೇಂದ್ರ ಸರ್ಕಾರದ ನಿರ್ದೇಶನದಂತೆ 2020 ಫೆ.24ರವರೆಗೆ ಪೂರ್ಣ ಗೊಳಿಸಲು ಸೂಚಿಸಲಾಗಿದೆ. ಆದ್ದರಿಂದ ಅರ್ಜಿ ಸಲ್ಲಿಸದೆ ಇರುವ ಜಿಲ್ಲೆಯ ರೈತರು ತಕ್ಷಣ ಅರ್ಜಿ ಸಲ್ಲಿಸಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶದ ಎಲ್ಲಾ ರೈತ ಕುಟುಂಬಗಳಿಗೆ ಆದಾಯ ಬೆಂಬಲ ನೀಡುವ ಉದ್ದೇಶದಿಂದ ಕೃಷಿಭೂಮಿ ಯನ್ನು ಹೊಂದಿರುವ ರೈತರಿಗೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಯೋಜನೆಯೆ ಪಿಎಂ ಕಿಸಾನ್ ಸಮ್ಮಾನ ನಿಧಿ.ಈ ಯೋಜನೆಯಲ್ಲಿ ಪ್ರತಿ ವರ್ಷ ಆರು ಸಾವಿರ ರೂಪಾಯಿ ಗಳನ್ನು ಮೂರು ಸಮಾನ ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಸಿಎಸ್ಸಿ ಗಳಲ್ಲಿ (ಕಾಮನ್ ಸರ್ವಿಸ್ ಸೆಂಟರ್ ಗಳಲ್ಲಿ) ರೈತರು ನೊಂದಾವಣಿ ಮಾಡಿಕೊಳ್ಳಬಹುದು. ಹಾಗೇನೆ ಪಿಎಂ ಕಿಸಾನ್ ಡಾಟಾ ಬೇಸ್ ನಲ್ಲಿರೋ ಮಾಹಿತಿಯನ್ನು ಆಧಾರ ಡಾಟಾ ಬೇಸ್ ನಲ್ಲಿರೋ ರೀತಿಯಲ್ಲಿ ತಿದ್ದುಪಡಿ ಮಾಡಲು ಅವಕಾಶವಿದೆ. ಅದೇ ಡೇಟಾಬೇಸ್ ನಲ್ಲಿ ಹಣಪಾವತಿಯ ಮಾಹಿತಿಯನ್ನು ಕೂಡಾ ಪಡೆಯಬಹುದು.(ಈ ಯೋಜನೆ ಯಡಿ ಅರ್ಜಿ ಸಲ್ಲಿಸಲು ಈ ಕೆಳಗಿನವರಿಗೆ ಸಾದ್ಯವಿಲ್ಲ.ಯಾರಿಗೆ 2 ಹೆಕ್ಟೇರ್ ಗಿಂತ ಹೆಚ್ವಿನ ಸಾಗುವಳಿ ಭೂಮಿ ಹೊಂದಿರುವ ರೈತ ಕುಟುಂಬ, ಮಾಜಿ ಅಥವಾ ಹಾಲಿ ಸಾಂವಿಧಾನಿಕ ಹುದ್ದೆ ಹೊಂದಿದ್ದವರು, ಮಾಜಿ ಅಥವಾ ಹಾಲಿ ಸಚಿವರು, ನಗರಸಭೆ, ಪುರಸಭೆ, ಜಿಲ್ಲಾ ಪಂಚಾಯತಿ ಅದ್ಯಕ್ಷರು, ನಿವೃತ್ತ ಅಥವಾ ಹಾಲಿ ಸೇವೆಯಲ್ಲಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೌಕರರು ಹಾಗೂ ಸ್ಥಳೀಯ ಸಂಸ್ಥೆಗಳ ಖಾಯಂ ನೌಕರರು( ಡಿ ಗ್ರುಪ್ ಹೊರತು ಪಡಿಸಿ) ಕಳೆದ ಸಾಲಿನಲ್ಲಿ ಆದಾಯ ತೆರಿಗೆ ಪಾವತಿ ಮಾಡಿದವರು ಹಾಗೂ ಇನ್ನಿತರರು ಈ ಯೋಜನೆಯ ಫಲಾನುಭವಿಗಳಾಗಲು ಸಾದ್ಯವಿಲ್ಲ ). ಈವರೆಗೆ9.22 ಕೋಟಿ ಕುಟುಂಬಗಳು ಈ ಯೋಜನೆಯಲ್ಲಿ ಹೆಸರು ನೋಂದಾಯಿಸಿದ್ದು ದೇಶಾದ್ಯಂತ 6.76 ಕೋಟಿ ರೈತರು ಕಿಸಾನ್ ಕ್ರೆಡಿಟ್ ಕಾರ್ಡನ್ನು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಪಡೆದುಕೊಂಡಿದ್ದಾರೆ.

ದೇಶಾದ್ಯಂತ 2.47ಕೋಟಿ ರೈತರು ಇವರೆಗೆ ಕಿಸಾನ ಕ್ರೆಡಿಟ್ ಕಾರ್ಡ್ ನ ಲಾಭ ಪಡೆದುಕೊಂಡಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಸೂಚನೆಯ ಮೇರೆಗೆ ರಾಜ್ಯ ಬ್ಯಾಂಕುಗಳ ಸಲಹಾ ಸಮಿತಿ ಇಂದು ವಿಶೇಷ ಸಭೆ ನಡೆಸಿ ಮಾಹಿತಿಯನ್ನು ರೈತರಿಗೆ ನೀಡುತ್ತಿದೆ.

ಸುದ್ದಿಗೋಷ್ಠಿಯಲ್ಲಿ ನಬಾರ್ಡ್ ನ ಡಿಡಿಎಮ್ ಶ್ರೀನಿವಾಸ ಹಾಗೂ ಜಿಲ್ಲಾ ಲೀಡ್ ಬ್ಯಾಂಕ್ ನ ಮುಖ್ಯಸ್ಥ ಆರ್.ಕೆ.ಬಾಲಚಂದ್ರ ಉಪಸ್ಥಿತರಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English