ಮೆಲ್ಬೋರ್ನ್ : ಉಪನಾಯಕಿ ಸ್ಮೃತಿ ಮಂಧನಾ ಮತ್ತು ಆರಂಭಿಕ ಆಟಗಾರ್ತಿ ಶಿಫಾಲಿ ವರ್ಮಾ ಬ್ಯಾಟಿಂಗ್ ಸಾಹಸದಿಂದ ಭಾರತದ ವನಿತೆಯರು ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ.
ಇಲ್ಲಿನ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ವನ್ ಡೌನ್ ಆಟಗಾರ್ತಿ ಗಾರ್ಡ್ನರ್ 93 ರನ್ ಗಳಿಸಿದರು.
ಭಾರಿ ಮೊತ್ತವನ್ನು ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ದೊರೆಯಿತು. ಸ್ಮೃತಿ ಮಂಧನಾ (55 ರನ್) ಮತ್ತು ಶಿಫಾಲಿ ವರ್ಮಾ (49 ರನ್) ಮೊದಲ ವಿಕೆಟ್ ಗೆ 85 ರನ್ ಕಲೆಹಾಕಿದರು. ನಂತರ ಬಂದ ಜೆಮಿಮಾ ರೋಡ್ರಿಗಸ್ ಮತ್ತು ಹರ್ಮನ್ ಪ್ರೀತ್ ಕೌರ್ ಕ್ರಮವಾಗಿ 30 ಮತ್ತು 20 ರನ್ ಗಳಿಸಿದರು. ಇನ್ನೆರಡು ಎಸೆತ ಬಾಕಿ ಇರುವಂತೆ ಮೂರು ವಿಕೆಟ್ ಕಳೆದುಕೊಂಡು ಭಾರತ ಗುರಿ ಮುಟ್ಟಿತು.
ಮಹಿಳಾ ಕ್ರಿಕೆಟ್ ನ ಮೂರನೇ ಅತೀ ದೊಡ್ಡ ಚೇಸಿಂಗ್ ಗೆಲುವಾಗಿದೆ. ಗಾರ್ಡ್ನರ್ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರು.
Click this button or press Ctrl+G to toggle between Kannada and English