ಮಂಗಳೂರಿನಲ್ಲಿ ಎರಡು ದಿನಗಳ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ ಆರಂಭ

2:56 PM, Saturday, February 8th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

janajagruti

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದಿನಾಂಕ 8 ಜನವರಿ 2020 ರಂದು ದಕ್ಷಿಣ ಜಿಲ್ಲಾ ಹಿಂದೂ ಅಧಿವೇಶನ ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಗೃಹ, ಡೊಂಗರಕೇರಿ ಪ್ರಾರಂಭವಾಯಿತು.

janajagruti

ಈ ಅಧಿವೇಶನದಲ್ಲಿ ಸನಾತನ ಸಂಸ್ಥೆಯ ಸಂತರಾದ ಪೂ.ರಮಾನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ ಗುರುಪ್ರಸಾದ್ ಗೌಡ , ಶ್ರೀ.ಕೃಷ್ಣಮೂರ್ತಿ, ನ್ಯಾಯವಾದಿಗಳು, ಶ್ರೀ.ದಯಾನಂದ ಕತ್ತಲ್ ಸಾರ್, ಅಧ್ಯಕ್ಷರು ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಇವರು ದೀಪಪ್ರಜ್ವಲನೆ ಮಾಡಿದರು.

janajagruti

” ಹಿಂದೂ ರಾಷ್ಟ್ರದ ಬೇಡಿಕೆಯು ಹಿಂದೂ ಸಂಸ್ಕೃತಿಯ ಉಳಿವಿಗಾಗಿ ಮಾತ್ರವಲ್ಲದೇ ಇಡೀ ಮನುಕುಲದ ಉದ್ದಾರಕ್ಕಾಗಿ ಇದೆ ! ” ಎಂದು ಕರ್ನಾಟಕ ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ ಶ್ರೀ. ಗುರುಪ್ರಸಾದ್ ಗೌಡರವರು ಹೇಳಿದ್ದಾರೆ.

ಶ್ರೀ.ಗುರುಪ್ರಸಾದ್ ಗೌಡ ಇವರು ಮಾತನಾಡಿ “ಹಿಂದೂ ಅಧಿವೇಶನದ ಉದ್ದೇಶವು ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡುವುದಾಗಿದೆ. ಹಿಂದೂ ರಾಷ್ಟ್ರದ ಬೇಡಿಕೆಯು ಕಾನೂನು ಬಾಹಿರವಲ್ಲ. ಕಾನೂನು ಚೌಕಟ್ಟಿನಲ್ಲಿ ಸಂವಿಧಾನಾತ್ಮಕವಾಗಿ ಬೇಡಿಕೆಯನ್ನು ಮಾಡುವುದಾಗಿದೆ‌‌. ಜಗತ್ತಿನಲ್ಲಿ ಹಿಂದೂಗಳಿಗೆ ಒಂದೇ ಒಂದು ರಾಷ್ಟ್ರವಿಲ್ಲ.ಹಿಂದೂ ರಾಷ್ಟ್ರ ದ ವಿಚಾರ ಭಾರತ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ‌. ಸೆಕ್ಯುಲರ್ ವ್ಯವಸ್ಥೆಯಿಂದಾಗಿ ಹಿಂದೂ ಧರ್ಮದ ಮೇಲೆ ಅನ್ಯಾಯವಾಗುತ್ತಿದೆ‌. ಹಿಂದೂ ರಾಷ್ಟ್ರದ ಬೇಡಿಕೆಯು ರಾಜಕೀಯ ವಿಚಾರವಲ್ಲದೇ; ಧರ್ಮಪ್ರೇಮಿ ಹಿಂದೂಗಳ ಮತ್ತು ಹಿಂದೂ ಸಂಸ್ಕೃತಿಯ ಉಳಿವಿಗಾಗಿ ಮತ್ತು ಅಖಿಲಮಾನವ ಕುಲದ ಕಲ್ಯಾಣಕ್ಕಾಗಿ ಇದೆ !ಎಂದು ವಿಚಾರ ಮಂಡಿಸಿದರು.

janajagruti

” ಅಖಂಡ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಧರ್ಮಾಚರಣೆ ಮಾಡಿ ಸಂಘಟಿತರಾಗೋಣ !” ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಶ್ರೀ‌.ದಯಾನಂದ ಕತ್ತಲ್ ಸಾರ್ರವರು ಹೇಳಿದ್ದಾರೆ.

ಭಾರತವು ಜಗತ್ತಿಗೆ ದೇವರಕೋಣೆ.ದೇವರು ಮತ್ತು ದೈವಗಳ‌ ಪೂಜಿಸುವ ಶ್ರೇಷ್ಠವಾದ ಭಾರತೀಯ ಸಂಸ್ಕೃತಿ.ಇಡೀ ಮಾನವ ಕುಲವನ್ನು ಸಾತ್ತ್ವಿಕಗೊಳಿಸಲು ಮತ್ತು ಜೀವನದ ಉಧ್ದಾರವಾಗಲು ಸನಾತನ ಹಿಂದೂ ಧರ್ಮದಲ್ಲಿ ಹೇಳಲಾಗುವ ಪ್ರತಿಯೊಂದು ಸಿಧ್ಧಾಂತವನ್ನು ಜೀವನದಲ್ಲಿ ಅಳವಡಿಸಿದರೆ ವ್ಯಕ್ತಿಯ ಜೊತೆಗೆ ಸಮಾಜ, ಮತ್ತು ಇಡೀ ವಿಶ್ವವೇ ಸಾತ್ತ್ವಿಕ ಮತ್ತು ಸುಖೀಯಾಗುವುದು‌.ಮಾತೃಭೂಮಿ, ಜನ್ಮನೀಡಿದ ಮಾತೆಗೆ ಗೌರವ ನೀಡಲು ಕಲಿಸುವುದು, ಗೋಮಾತೆಯನ್ನು ಪೂಜನೀಯ ಸ್ಥಾನದಲ್ಲಿ ಕಾಣಲು ಕೇವಲ ಸನಾತನ ಹಿಂದೂ ಧರ್ಮದಲ್ಲಿ ಮಾತ್ರ ಸಾಧ್ಯ.ಅಖಂಡ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಧರ್ಮಾಚರಣೆ ಮಾಡಿ ಸಂಘಟಿತರಾಗೋಣ.” ಎಂದು ಕರೆ ನೀಡಿದರು

janajagruti

” ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಭಗವಂತನ ಆಶೀರ್ವಾದಕ್ಕಾಗಿ ಶ್ರಧ್ದಾ ಭಕ್ತಿಯನ್ನು ಹೆಚ್ಚಿಸಬೇಕು ” ಎಂದು ಸನಾತನ ಸಂಸ್ಥೆಯ ಸಂತರು ಪೂ‌.ರಮಾನಂದ ಗೌಡರವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸಂತರಾದ ಪೂ.ರಮಾನಂದ ಗೌಡ ಇವರು ಉಪಸ್ಥಿತಿತರಿಗೆ ಮಾರ್ಗದರ್ಶನ ಮಾಡುತ್ತಾ “ಪ್ರಸ್ತುತ ದೇಶವು ಸಂಧಿಕಾಲದಲ್ಲಿ ಹಾದುಹೋಗುತ್ತಿದೆ. ಧರ್ಮ ಸಂಸ್ಥಾಪನೆಯ ಕಾಲವು ಸಮೀಪಿಸಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ತನು,ಮನ, ಧನದ ತ್ಯಾಗದ ಜೊತೆಗೆ ಭಗವಂತನ ಆಶೀರ್ವಾದವು ಅಗತ್ಯವಿದೆ ಇದಕ್ಕಾಗಿ ಶ್ರಧ್ಧಾ ಭಕ್ತಿಯನ್ನು ಹೆಚ್ಚಿಸಬೇಕಾಗಿದೆ.” ಎಂದು ಆಶೀರ್ವಚನ ರೂಪೀ ಮಾರ್ಗದರ್ಶನ ‌ಮಾಡಿದರು.

janajagruti

” ಶಾಲೆಗಳಲ್ಲಿ ಭಗವದ್ಗೀತೆಯ ಶಿಕ್ಷಣವನ್ನು ನೀಡುವ ಪಾಠವನ್ನು ಪ್ರಾರಂಭಿಸಬೇಕು ” ಎಂದು ನ್ಯಾಯವಾದಿ ಶ್ರೀ.ಕೃಷ್ಣಮೂರ್ತಿರವರು ಹೇಳಿದ್ದಾರೆ.

ನ್ಯಾಯವಾದಿಗಳಾದ ಶ್ರೀ.ಕೃಷ್ಣಮೂರ್ತಿ ಇವರು ಮಾತನಾಡಿ “ಇಂದು ಭಾರತವನ್ನು ವಿಭಜಿಸಲಾಗುತ್ತದೆ‌.ಮತಾಂತರ, ಲವ್ ಜಿಹಾದ್, ಹಿಂದೂ ಕಾರ್ಯಕರ್ತರ ಹತ್ಯೆಯಿಂದ ಹಿಂದೂ ಧರ್ಮದ ಮೇಲೆ ಆಘಾತವಾಗುತ್ತಿದೆ‌‌.ಮಾತ್ರವಲ್ಲದೆ ನಾಗರಿಕ ತಿದ್ದುಪಡಿ ಕಾನೂನು ವಿರೋಧಿಸಿ ದೇಶದ ಆಸ್ತಿಪಾಸ್ತಿಗಳನ್ನು ಹಾನಿ ಮಾಡಲಾಗುತ್ತಿದೆ.ಅಖಂಡ ವಿಶ್ವಕ್ಕೆ ಶಾಂತಿಯನ್ನು ನೀಡಿದ ಧರ್ಮ ಅಂದರೆ ಸನಾತನ ಹಿಂದೂ ಧರ್ಮವಿದೆ.ಮುಂದಿನ ಪೀಳಿಗೆಯನ್ನು ಸಾತ್ತ್ವಿಕ ಮಾಡಬೇಕಾದರೆ ಮಕ್ಕಳಿಗೆ ಶಿಕ್ಷಣದಲ್ಲಿ ಭಗವದ್ಗೀತೆಯನ್ನು ಕಲಿಸಿ ದೇಶದ ಭವಿಷ್ಯವನ್ನು ಸುಧೃಢ ಮಾಡಬೇಕಾಗಿದೆ.” ಎಂದು ವಿಚಾರ ಮಂಡಿಸಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English