ಮಂಗಳೂರು : ಸನಾತನ ಹಿಂದೂ ಧರ್ಮವೆಂದರೆ ಅವಿನಾಶಿ ಮತ್ತು ಅಜರಾಮರವೇ ಆಗಿದೆ. ಹಿಂದೂ ಧರ್ಮವು ಜೀವನದ ಅಂಗವಾಗಿದೆ.ಹಿಂದೂ ಧರ್ಮವು ಎಲ್ಲಾ ಜೀವಿಗಳಲ್ಲಿಯೂ ದೇವರನ್ನು ಕಾಣುವ ಅತ್ಯಂತ ಶ್ರೇಷ್ಠ ಧರ್ಮವಾಗಿದೆ.ಇಂದು ಇಂದಿನ ಪೀಳಿಗೆಗೆ ಧರ್ಮಶಿಕ್ಷಣವನ್ನು ನೀಡಬೇಕಾಗಿದೆ ಉಡುಪುಗಳಾಗಿರಲಿ, ಉತ್ಸವಗಳಾಗಿರಲಿ ಪಾಶ್ಚಾತ್ಯರಂತೆ ಅಲ್ಲ ಹಿಂದೂ ಧರ್ಮದಂತೆ ಆಚರಿಸಿ ಧರ್ಮದ ರಕ್ಷಣೆಯನ್ನು ಮಾಡಿ ಎಂದು ಸೌ.ವಿದ್ಯಾಲಕ್ಮೀ ರವರು ವಿಚಾರವನ್ನು ಮಂಡಿಸಿದರು.
“ಭಾರತವು ವಿಶ್ವಗುರುವಾಗ ಬೇಕಾದರೆ 4ಜಿ ಬಲಿಷ್ಠವಾಗಬೇಕು !(ಗೋವು, ಗ್ರಾಮ, ಗಂಗೆ, ಗುರುಕುಲ)”ಎಂದು ನ್ಯಾ. ಚಂದ್ರಶೇಖರ ರಾವ್ ರವರು ಹೇಳಿದರು.
ನ್ಯಾಯವಾದಿಗಳಾದ ಶ್ರೀ.ಚಂದ್ರಶೇಖರ್ ರಾವ್ ಇವರು ಮಾತನಾಡುತ್ತಾ ” ಭಾರತವು ಅನಾದಿ ಕಾಲದಲ್ಲಿ ವಿಶ್ವಗುರುವಾಗಿತ್ತು.ಆಗ ಗೋವು,ಗ್ರಾಮ, ಗುರುಕುಲ,ಗಂಗೆ ಎಂಬ 4ಜಿ ಬಲಿಷ್ಠವಾಗಿತ್ತು.ಪ್ರತಿಯೊಂದು ಗ್ರಾಮವು ಸ್ವಾವಲಂಬಿಯಾಗಿತ್ತು ಮತ್ತು ಜನರು ಸುಖೀಗಳಾಗಿದ್ದರು.ಗಂಗೆ ಶುಧ್ದವಾಗಿತ್ತು, ಗುರುಕುಲ ವ್ಯವಸ್ಥೆಯಿಂದ ಉಚ್ಛ ಮಟ್ಟದ ಶಿಕ್ಷಣ ನೀಡಲಾಗುತ್ತಿತ್ತು, ಅಸಂಖ್ಯಾತ ಗೋವುಗಳಿದ್ದು ಸಂಪತ್ತು ಸಮೃದ್ಧವಾಗಿತ್ತು, ಆದರೆ ಇಂದು ಗೋ ಹತ್ಯೆಯಿಂದಾಗಿ ಗೋ ಸಂತತಿ ನಾಶವಾಗುತ್ತಿದೆ. ಮತ್ತೊಮ್ಮೆ ಭಾರತ ವಿಶ್ವಗುರುವಾಗಬೇಕಾದರೆ ಈ 4G ಅಂಶಗಳು ಬಲಿಷ್ಠವಾಗಬೇಕು” ಎಂದು ವಿಚಾರ ಮಂಡಿಸಿದರು.
“ಹಿಂದೂಗಳು ಜಾತಿ ಎಂಬ ಬಂಧನವನ್ನು ತೆಗೆದು ಕೇವಲ ‘ಹಿಂದೂ’ ಎಂಬ ಚೌಕಟ್ಟಿನಲ್ಲಿ ಒಂದಾಗಬೇಕಾಗಿದೆ”ಎಂದು ಬಂಟರ ಸಂಘ ಸೌ.ಆಶಾ ಜ್ಯೋತಿ ರೈ ರವರು ಹೇಳಿದರು.
ಸೌ.ಆಶಾಜ್ಯೋತಿ ರೈ ಇವರು ಮಾತನಾಡುತ್ತಾ ಪ್ರಸ್ತುತ ಹಿಂದೂ ಧರ್ಮವು ಜಾತಿ ಎಂದು ವಿಭಜನೆ ಹೊಂದಿದೆ.ಆದರೆ ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕಾದರೆ ಜಾತಿ ಎಂಬ ಬಂಧನವನ್ನು ತೆಗೆದು ಕೇವಲ ‘ಹಿಂದೂ’ ಎಂದು ಒಂದಾಗಬೇಕಾಗಿದೆ..ಹಿಂದೂ ಐಕ್ಯತೆ ಹೊಂದಬೇಕಾಗಿದೆ ಎಂದು ವಿಚಾರ ಮಂಡಿಸಿದರು.
Click this button or press Ctrl+G to toggle between Kannada and English