ಮಂಗಳೂರಿನಲ್ಲಿ ಜಿಲ್ಲಾ ಹಿಂದೂ ಮಟ್ಟದ ಹಿಂದೂ ರಾಷ್ಟ್ರ ಅಧಿವೇಶನ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನವಾಯಿತು

10:04 AM, Monday, February 10th, 2020
Share
1 Star2 Stars3 Stars4 Stars5 Stars
(No Ratings Yet)
Loading...

hindhu janajagruti

ಮಂಗಳೂರು : “ಆಧ್ಯಾತ್ಮಿಕ ಸಾಧನೆಯ ಬಲದಿಂದ ಹಿಂದೂ ರಾಷ್ಟ್ರದ ಶಿವಧನಸ್ಸನ್ನು ಎತ್ತಲು ಸಾಧ್ಯ‌.” ಎಂದು ಧರ್ಮ ಪ್ರಸಾರಕಿ, ಸನಾತನ ಸಂಸ್ಥೆ ಸೌ.ಮಂಜುಳಾ ಗೌಡ ರವರು ಹೇಳಿದರು.

ಸೌ.ಮಂಜುಳಾ ಗೌಡ ಇವರು ಮಾತನಾಡಿ ” ಮನುಷ್ಯ ಜನ್ಮದ ಸಾರ್ಥಕತೆ ಈಶ್ವರ ಪ್ರಾಪ್ತಿ ಯಾಗಿದೆ‌ ಅದಕ್ಕಾಗಿ ಮಾಡುವುದಕ್ಕೆ ಸಾಧನೆ ಎನ್ನುತ್ತಾರೆ. ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಲು ಸಾಧನೆಯ ಅವಶ್ಯಕತೆ ಇದೆ‌‌.ಇದಕ್ಕಾಗಿ ಭಗವಂತನ ಕೃಪೆ ಮತ್ತು ಸಾಧನೆಯು ಅವಶ್ಯಕ. ಸಾಧನೆಯನ್ನು ಮಾಡಿ ಧರ್ಮಾಭಿಮಾನವನ್ನು ಹೆಚ್ಚಿಸಬೇಕು‌.ಭಗವಂತ ಧರ್ಮಸಂಸ್ಥಾಪನೆಗಾಗಿ ಅವತಾರ ತಾಳುತ್ತಾರೆ.ಹಾಗಾಗಿ ಹಿಂದೂ ರಾಷ್ಟ್ರ ಎಂಬ ಶಿವಧನಸ್ಸನ್ನು ಎತ್ತಲು ಸಾಧನೆಯ ಬಲ ಬೇಕು‌.” ಎಂದು ವಿಚಾರ ಮಂಡಿಸಿದರು.

hindhu janajagruti

” ಭ್ರಷ್ಟಾಚಾರ ನಿರ್ಮೂಲನೆಗಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ” ಎಂದು ಸಾಮಾಜಿಕ ಹೋರಾಟಗಾರರು ಶ್ರೀ.ಹನುಮಂತ ಕಾಮತ್ ರವರು ಹೇಳಿದರು.

ಶ್ರೀ .ಹನುಮಂತ ಕಾಮತ್ ಮಾತನಾಡಿ “ಇಂದು ಹಲವಾರು ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ.ದೇಶದಲ್ಲಿ ಈ ಭ್ರಷ್ಟಾಚಾರ ನಿರ್ಮೂಲನೆಗಾಗಿ ಸರಕಾರವು ಸಮಾನವಾದ ಕಾನೂನು ಜಾರಿಗೊಳಿಸಬೇಕಾಗಿದೆ.ಈ ಮೂಲಕ ಭ್ರಷ್ಟಾಚಾರ ಮುಕ್ತ ಭಾರತವನ್ನಾಗಿ ಮಾಡಬೇಕಾಗಿದೆ.” ಎಂದು ವಿಚಾರ ಮಂಡಿಸಿದರು.

” ಹಿಂದೂ ದೇವಸ್ಥಾನಗಳು ಸರಕಾರೀಕರಣದಿಂದ ಮುಕ್ತವಾಗಬೇಕು ಇದಕ್ಕಾಗಿ ಹಿಂದೂಗಳು ಸಂಘಟಿತರಾಗಬೇಕಾಗಿದೆ.” ಎಂದು ಕರ್ನಾಟಕ ರಾಜ್ಯ ವಕ್ತಾರರು ಹಿಂದೂ ಜನಜಾಗೃತಿ ಸಮಿತಿ ಶ್ರೀ. ಮೋಹನ್ ಗೌಡ ರವರು ಹೇಳಿದರು.

ಶ್ರೀ.ಮೋಹನ್ ಗೌಡ ಇವರು ಮಾತನಾಡುತ್ತಾ ” ದೇವಸ್ಥಾನವು ಇಡೀ ಗ್ರಾಮಕ್ಕೆ ಶಕ್ತಿ ಮತ್ತು ಚೈತನ್ಯವನ್ನು ನೀಡುವ ಕೇಂದ್ರವಾಗಿದೆ ‌ಹಿಂದೆ ಬ್ರಿಟಿಷರು ಹಿಂದೆ ದೇವಸ್ಥಾನಗಳಲ್ಲಿ ಆಕ್ರಮಣ ಮಾಡಿ ದೇವಸ್ಥಾನದ ಸಂಪತ್ತನ್ನು ಲೂಟಿ ಮಾಡಿದರು.ಆದರೆ ಪ್ರಸ್ತುತ ಕಾಲದಲ್ಲಿ ಭ್ರಷ್ಟ ರಾಜಕಾರಣಿಗಳು ದೇವಸ್ಥಾನದ ಸರಕಾರಿಕರಣದ ನೆಪದಲ್ಲಿ ದೇವಸ್ಥಾನದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಇಂತಹ ಭ್ರಷ್ಟಾಚಾರವನ್ನು ತಡೆಗಟ್ಟಲು ಪ್ರತೀ ತಿಂಗಳು ರಾಷ್ಟ್ರೀಯ ಹಿಂದೂ ಆಂದೋಲನ ಮಾಡಿ ಸರಕಾರವು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸುತ್ತಿದೆ‌.ಹಾಗೆಯೇ ಹಿಂದೂ ರಾಷ್ಟ್ರ ಜಾಗೃತಿ ಸಭೆಯ ಮೂಲಕ‌ ಹಿಂದೂಗಳಲ್ಲಿ ಹಿಂದೂ ಧರ್ಮದ ಮೇಲೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸಲು ಕೃತಿಶೀಲರನ್ನಾಗಿ ಮಾಡುತ್ತಿದೆ”ಎಂದು ವಿಚಾರ ಮಂಡಿಸಿದರು.

hindhu janajagruti

” ಹಿಂದೂಗಳು‌ ಸಂಘಟಿತರಾಗಿ ಹಿಂದೂ ಧರ್ಮದ ಮೇಲಾಗುವ ಅನ್ಯಾಯದ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಬೇಕಾಗಿದೆ ” ಎಂದು ನ್ಯಾಯವಾದಿಗಳು, ಕರ್ನಾಟಕ ಉಚ್ಚನ್ಯಾಯಾಲಯ ಶ್ರೀ. ನಟರಾಜ್ ರವರು ಹೇಳಿದರು.

ಶ್ರೀ. ನಟರಾಜ್ ಇವರು ಮಾತನಾಡುತ್ತಾ ” ಪ್ರಸ್ತುತ ಹಿಂದೂ ಧರ್ಮದ ಮೇಲೆ ಅನ್ಯಾಯವಾಗುತ್ತಿದೆ.ಮಾತ್ರವಲ್ಲದೆ ದೇವತೆಗಳು ಮತ್ತು ಸಂತರ ವಿಡಂಬಣೆಯನ್ನು ಕೂಡಾ ಮಾಡಲಾಗುತ್ತಿದೆ.ಹಾಗಾಗಿ ಹಿಂದೂಗಳು ಸಂಘಟಿತರಾಗಿ ಕಾನೂನಾತ್ಮಕವಾಗಿ ಹೋರಾಡಬೇಕಾಗಿದೆ” ಎಂದು ಕರೆ ನೀಡಿದರು.

hindhu janajagruti

ಈ ಎರಡು ದಿನದ ಅಧಿವೇಶದಲ್ಲಿ ಯುವ ಬ್ರಿಗೇಡ್ ನ ಶ್ರೀ.ಶ್ರೀಪತಿ ಆಚಾರ್ಯ, ಮಡಿಕೇರಿಯ ವಕೀಲರಾದ ಶ್ರೀ. ಕೃಷ್ಣಮೂರ್ತಿ, ಶ್ರೀ ತಾರಾನಾಥ ಕೊಟ್ಟಾರಿ, ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ. ರಾಜೇಶ್ ಪವಿತ್ರನ್, ಬಂಟರ ಸಂಘದ ಡಾ.ಆಶಾಜ್ಯೋತಿ ರೈ,ಆರ್ ಟಿಐ ಹೋರಾಟಗಾರರಾದ ಶ್ರೀ. ಭಾಸ್ಕರನ್ ಸನಾತನ ಸಂಸ್ಥೆಯ ಸಂತರಾದ ಪೂಜ್ಯ ರಮಾನಂದ ಗೌಡ, ಶ್ರೀ.ಗುರುಪ್ರಸಾದ್ ಗೌಡ ರಾಜ್ಯ ಸಮನ್ವಯಕರು ಹಿಂದೂ ಜನಜಾಗೃತಿ ಸಮಿತಿ, ಶ್ರೀ. ಮೋಹನ್ ಗೌಡ ರಾಜ್ಯ ವಕ್ತಾರರು ಹಿಂದೂ ಜನಜಾಗೃತಿ ಸಮಿತಿ, ಶ್ರೀ. ಚಂದ್ರಮೊಗೇರ್ ಜಿಲ್ಲಾ ಸಮನ್ವಯಕರು ಹಿಂದೂ‌ ಜನಜಾಗೃತಿ ಸಮಿತಿ ದಕ್ಷಿಣ ಕನ್ನಡ ಮುಂತಾದವರು ಉಪಸ್ಥಿತಿತರಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English