ಶ್ರದ್ಧಾ ಭಕ್ತಿಯಿಂದ ನಡೆಯುತ್ತಿರುವ ಲಿಂಗರೂಪಿ ಶ್ರೀದುರ್ಗಾ ಭಗವತಿ ದೇವಾಲಯದ ಬ್ರಹ್ಮ ಕಲಶೋತ್ಸವ

10:21 AM, Monday, February 10th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

madikeri

ಮಡಿಕೇರಿ : ತಾಳತ್ತಮನೆಯ ಪುರಾತನ ಲಿಂಗರೂಪಿ ಶ್ರೀದುರ್ಗಾ ಭಗವತಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶೋತ್ಸವ ಪ್ರಯುಕ್ತ ದೇವರಿಗೆ ಗಣಪತಿ ಹೋಮ, ಪ್ರೋಕ್ತಹೋಮ, ಪ್ರಾಯಶ್ಚಿತ ಹೋಮ, ಬಿಂಬ ಶುದ್ಧಿ, ಅಂಕುರ ಪೂಜೆ ಶ್ರದ್ಧಾಭಕ್ತಿಯಿಂದ ಜರುಗಿತು.

ಮಧ್ಯಾಹ್ನ ಮಹಾಪೂಜೆ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.

madikeri

ಸಂಜೆ ಸುಳ್ಯದ ಧರ್ಮಾರಣ್ಯದ ಶ್ರೀ ಗುರು ಗಣಪತಿ ಭಕ್ತಜನ ಭಜನಾ ಮಂಡಳಿಯಿಂದ ಭಜನೆ, ಅರಂತೋಡು ಮಲ್ಲಿಕಾರ್ಜುನಾ ದೇವಸ್ಥಾನದ ಪ್ರಧಾನ ಅರ್ಚಕರಾದ ಕೇಶವಮೂರ್ತಿ ಅವರು ಉಪನ್ಯಾಸ ನೀಡಿದರು.

madikeri

ರಾತ್ರಿ ಮೈಸೂರಿನ ಸುಮಂತ್ ವಸಿಷ್ಠ ಹಾಗೂ ಚಂದ್ರಕಲಾ ಮೂರ್ತಿ ಮತ್ತು ಅನ್ವಿತ್ ತಂಡದವರಿಂದ ’ಭಕ್ತಿ ರಸಸಂಜೆ’ ಸಾಂಸ್ಕೃತಿಕ ಕಾರ್ಯಕ್ರಮ ಭಕ್ತರ ಗಮನ ಸೆಳೆಯಿತು.
madikeri

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English