ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ನಿಶ್ಚಿತಾರ್ಥ

1:30 PM, Monday, February 10th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

nikil

ಬೆಂಗಳೂರು : ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ನಿಶ್ಚಿತಾರ್ಥ ಇಂದು ಬೆಂಗಳೂರಿನ ತಾಜ್ ವೆಸ್ಟ್ ಹೋಟೆಲ್‌ನಲ್ಲಿ ಶಾಸ್ತ್ರೋಕ್ತವಾಗಿ ನಡೆದಿದೆ. ಈ ನಿಶ್ಚಿತಾರ್ಥಕ್ಕೆ ಅನಿತಾ ಕುಮಾರಸ್ವಾಮಿ ಸಹೋದರಿಯರಾದ ಶೈಲಜಾ ಮತ್ತು ಅನುಸೂಯ, ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಮಾರ್ಗದರ್ಶನದಲ್ಲಿ ಎಲ್ಲ ತಯಾರಿಗಳು ನಡೆದಿವೆ. ತಾಜ್‌ ವೆಸ್ಟ್‌ನ ಪೂರ್ವ ದಿಕ್ಕಿಗೆ ಇರುವ ವೆಸ್ಟೆಂಡ್‌ ಕೋರ್ಟ್‌ನಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ತಾಜ್‌ ವೆಸ್ಟೆಂಡ್‌ ಹೊಟೇಲ್‌ನಲ್ಲಿರುವ ಮರಗಿಡಗಳ ನಡುವೆ ನಿಶ್ಚಿತಾರ್ಥ ನಡೆಯಬೇಕು ಎಂಬುದು ನಿಖಿಲ್‌ಕುಮಾರ್‌ ಅವರ ಆಸೆಯಾಗಿತ್ತು.

ನಿಶ್ಚಿತಾರ್ಥ ಸಂಪೂರ್ಣ ವೈಟ್‌ ಥೀಮ್‌ನಲ್ಲಿ ನಡೆಯಲಿದೆ. ಕಾರ್ಪೇಟ್‌ನಿಂದ ಹಿಡಿದು ಹುಡುಗ ಹುಡುಗಿ ಉಂಗುರ ಬದಲಾಯಿಸುವ ಮಂಟಪ ಕೂಡ ಶ್ವೇತ ವರ್ಣದಲ್ಲಿರುತ್ತದೆ. ನಿಶ್ಚಿತಾರ್ಥದ ಮಂಟಪ ಮತ್ತು ನಡೆಯುವ ಜಾಗವನ್ನು ಹೂವಿನಿಂದ ಅಲಂಕರಿಸಲಾಗಿದ್ದು, ಅದಕ್ಕಾಗಿ ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಬೆಳೆಯುವ ಬಿಳಿಯ ಬಣ್ಣದ ತರಿಸಲಾಗಿದೆ. ದೆಹಲಿಯಿಂದ ಕ್ರಿಸ್ಟಲ್ಸ್‌ಗಳನ್ನು ತರಿಸಿ ಅಲಂಕಾರಕ್ಕೆ ಬಳಸಿಕೊಳ್ಳಲಾಗುತ್ತದೆ. ಗಣಪತಿ ಪೂಜೆ ಸಹ ಇರಲಿದೆ, ಈ ಶ್ವೇತ ವರ್ಣದ ಮಂಟಪದಲ್ಲಿ ಕುಂಕುಮ ಶಾಸ್ತ್ರವೂ ನಡೆದಿದೆ. ತಾಜ್‌ ವೆಸ್ಟೆಂಡ್‌ ಗೇಟ್‌ನಿಂದ ನಿಶ್ಚಿತಾರ್ಥ ನಡೆಯುವ ಜಾಗದವರೆಗೂ ಹೂವುಗಳಿಂದ ಅಲಂಕಾರ ಮಾಡಲಾಗುತ್ತಿದೆ. ಎರಡೂ ಕುಟುಂಬವನ್ನು ವಿಶೇಷವಾಗಿ ಬರಮಾಡಿಕೊಳ್ಳಲಾಗುವುದು.

ಕುಮಾರಸ್ವಾಮಿ ಅವರು ಪಕ್ಷ ಬೇಧ ಮರೆತು, ಎಲ್ಲರನ್ನು ತಮ್ಮ ಪುತ್ರನ ನಿಶ್ಚಿತಾರ್ಥಕ್ಕೆ ಆಹ್ವಾನಿಸಿದ್ದಾರೆ. ಎಲ್ಲರೂ ತಮ್ಮ ಪುತ್ರನಿಗೆ ಆಶೀರ್ವಾದ ನೀಡಲಿ ಎಂಬ ಉದ್ದೇಶ ಇದಾಗಿದೆ. ಚಿತ್ರರಂಗದ ಗೆಳೆಯರಿಗೆ ನಿಖಿಲ್‌ ಕುಮಾರ್‌ ಆಹ್ವಾನ ನೀಡಿದ್ದಾರೆ. ಈಗಾಗಲೇ ಮೈಸೂರು ಮಹಾರಾಜ ಯದುವೀರ್‌ ಸೇರಿದಂತೆ ರಾಜ್ಯದ ಗಣ್ಯಾತಿ ಗಣ್ಯರ ಮದುವೆಗಳನ್ನು ಮಾಡಿದ ಧ್ರುವ ಕ್ಲವರ್ ಮ್ಯಾನ್ಶನ್ ಹೂವಿನ ಅಲಂಕಾರದ ಜವಾಬ್ದಾರಿ ಹೊತ್ತಿದ್ದಾರೆ. ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಆಸನದ ವ್ಯವಸ್ಥೆ ಮಾಡುವ ರಾಜಾ ಎಂಟರ್ ಪ್ರೈಸಸ್- ರಾಜ ನಿಶ್ಚಿತಾರ್ಥದಲ್ಲಿಯೂ ಮತ್ತಿತರ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ನಿಶ್ಚಿತಾರ್ಥಕ್ಕೆ ಬರುವವರಿಗೆ ಯಾವುದೇ ಪಾಸ್‌ ವ್ಯವಸ್ಥೆಯನ್ನು ಮಾಡಿಲ್ಲ. ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಎಲ್ಲರಿಗೂ ಮುಕ್ತ ಆಹ್ವಾನವನ್ನು ನೀಡಲಾಗಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English