ಮಿಜಾರು : ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಕಾಲೇಜಿನ ಎಂಬಿಎ ವಿದ್ಯಾರ್ಥಿ ವರುಣ್ ಕಟ್ಟಿ ಇಂಡೋನೇಷಿಯಾದ ಬಾಲಿಯಲ್ಲಿ ಜುಲೈ 3 ರಿಂದ 6ರವರೆಗೆ ನಡೆಯಲಿರುವ ನಾಲ್ಕನೇ ಏಷ್ಯಾ ವಿಶ್ವ ಮಾದರಿ ಸಂಯುಕ್ತ ರಾಷ್ಟ್ರ -2020ಕ್ಕೆ ಆಯ್ಕೆಯಾಗಿದ್ದರೆ. ‘ಕ್ರಿಯಾತ್ಮಕ ಭದ್ರತಾ ಆಯಾಮಗಳಲ್ಲಿ ಶಾಂತಿಯನ್ನು ಕಾಪಾಡುವುದು’ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ಜಾಗತಿಕ ಮಂಡಳಿಯಲ್ಲಿ ಭಾಗವಹಿಸಲು ನಾನಾ ದೇಶಗಳಿಂದ ಬಂದ 3500 ಅರ್ಜಿಗಳಲ್ಲಿ 4.33% ಜನರನ್ನು ಆಯ್ಕೆಮಾಡಲಾಗುತ್ತದೆ. ಶೈಕ್ಷಣಿಕ ಸಾಧನೆಯ ಆಧಾರದಲ್ಲಿ ವರುಣ್‌ನನ್ನು ಆಯ್ಕೆ ಮಾಡಲಾಗಿದೆ.
ವಿದ್ಯಾರ್ಥಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ, ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ.
ವಿಶ್ವಮಾದರಿ ಸಂಯುಕ್ತ ರಾಷ್ಟ್ರ :
ವಿವಿಧ ರಾಷ್ಟ್ರಗಳಿಂದ ಪ್ರತಿನಿಧಿಯಾಗಿ ಭಾಗವಹಿಸಿದ ಸ್ಪರ್ಧಾಳು ನೈಜ ಜಾಗತಿಕ ಮಟ್ಟದ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಸಂಶೋಧನೆ, ಡ್ರಾಫ್ಟಿಂಗ್, ಲಾಬಿಯಿಂಗ್ ಹಾಗೂ ಡಿಬೇಟ್ ಮೂಲಕ ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸಲ ಅವಕಾಶವಿದೆ.
Click this button or press Ctrl+G to toggle between Kannada and English