ಆಳ್ವಾಸ್‌ನಲ್ಲಿ “ಡೇಟಾ ಅನಲಿಟಿಕ್ಸ್ ಅಂಡ್ ಮಷಿನ್ ಲರ್ನಿಂಗ್” ಕಾರ್ಯಾಗಾರ

5:13 PM, Monday, February 10th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

alvas

ಮಿಜಾರು : ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪುಸ್ತಕದ ಜ್ಞಾನದೊಂದಿಗೆ ಇಂತಹ ಕಾರ್ಯಗಾರಗಳು ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ವೃದ್ದಿಸಲು ಸಹಾಯಕವಾಗುತ್ತದೆ ಎಂದು ಅಲಹಾಬಾದ್ ಐ.ಐ.ಐ.ಟಿಯ ಮಾಹಿತಿತಂತ್ರಜ್ಞಾನ ವಿಭಾಗದ ಪ್ರಾಧ್ಯಪಕ ಡಾ.ಸತೀಶ್ ಕೆ ಸಿಂಗ್ ಹೇಳಿದರು.

ಅವರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿ.ಎಸ್.ಇ, ಐ.ಎಸ್.ಸಿ, ಇ,ಸಿ,ಇ ಮತ್ತು ಐ.ಐ.ಐ.ಟಿ ಅಲಹಾಬಾದ್‌ನ ಸಹಯೊಗದೊಂದಿಗೆ ನಾಲ್ಕು ವಾರಗಳ ಕಾಲ ನಡೆಯಲಿರುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಅಧಿಕ ಕಲಿಕೆಗೆ ತಮ್ಮ ಸಮಯಮನ್ನು ಮೀಸಲಾಗಿಡುವುದರೊಂದಿಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಅಲ್ಲದೇ ವಿದ್ಯಾರ್ಥಿಗಳು ಸಂಶೋಧನಾತ್ಮಕ ಒಲವು ಹೊಂದಿದಲ್ಲಿ ಐ.ಐ.ಐ.ಟಿ ಅಲಹಾಬಾದ್‌ನಲ್ಲಿ ಉನ್ನತ ವಿಧ್ಯಾಭ್ಯಾಸಕೆ ಅವಕಾಶವನ್ನು ಕಲ್ಪಿಸಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ಡೀನ್‌ಗಳಾದ ಡಾ.ಪ್ರವೀಣ್ ಜೆ ಮತ್ತು ಡಾ.ದತ್ತಾತ್ರೇಯ, ಗಣಕಯಂತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಕೊಠಾರಿ, ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಡಿ.ವಿ ಮಂಜುನಾಥ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರಾಧ್ಯಾಪಕ ಜಯಂತ್ ಕುಮಾರ್ ರಾಥೋಡ್ ಉಪಸ್ಥಿತರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English