ನಿಸರ್ಗ ಸಂರಕ್ಷಣೆ ಕುರಿತ ಯೋಜನೆ ಹೆಚ್ಚಾಗಿ ಜಾರಿಯಾಗಲಿ : ಡಿವೈಎಸ್ಪಿ ದಿನೇಶ್ ಕುಮಾರ್

9:48 AM, Thursday, February 13th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

marothon

ಮಡಿಕೇರಿ : ಕೊಡಗಿನಲ್ಲಿ ಹೆಚ್ಚಿದ್ದ ಪರಿಸರದ ಶೋಷಣೆಯ ಪರಿಣಾಮ ಎಂಬಂತೆ ಕೆಲವು ವಷ೯ಗಳಿಂದ ಪ್ರಕ?ತ್ತಿಯೂ ಮುನಿಸಿಕೊಂಡಿದ್ದು, ಇನ್ನಾದರೂ ನಿಸಗ೯ ಸಂರಕ್ಷಣೆಯ ಕಾಯ೯ಕ್ರಮಗಳು ಹೆಚ್ಚುಹೆಚ್ಚಾಗಿ ಜಾರಿಗೊಳ್ಳಬೇಕಾಗಿದೆ ಎಂದು ಮಡಿಕೇರಿ ಡಿವೈಎಸ್ಪಿ ಬಾರಿಕೆ ದಿನೇಶ್ ಕುಮಾರ್ ಹೇಳಿದ್ದಾರೆ.

ಮಡಿಕೇರಿಯಲ್ಲಿ ಇಬ್ನಿ ರೆಸಾಟ್೯ ವತಿಯಿಂದ ಆಯೋಜಿತ ಹಸಿರು ಸಂರಕ್ಷಣೆ ಸಂಬಂಧಿತ ಸಂದೇಶ ಹೊಂದಿದ ಮ್ಯಾರಥಾನ್ ಅಂಗವಾಗಿನ ಸಭೆಯಲ್ಲಿ ಮಾತನಾಡಿದ ದಿನೇಶ್ ಕುಮಾರ್, ಪರಿಸರ ರಕ್ಷಣೆಯ  ಜಾಗೃತಿ ಮ್ಯಾರಥಾನ್ ಮಕ್ಕಳ ಮನಸ್ಸಿಗೆ ಹೆಚ್ಚು ನಾಟುವಂಥ ಕಾಯ೯ಕ್ರಮವಾಗಿದ್ದು ಇಂಥ ಪರಿಸರ ಮಹತ್ವದ ಕಾಯ೯ಕ್ರಮವನ್ನು ಪರಿಸರ ಸ್ನೇಹಿ ರೆಸಾಟ್೯ ಆಗಿರುವ ಇಬ್ನಿ ರೆಸಾಟ್೯ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಹಿರಿಯ ವಕೀಲ ಎಂ.ಎ.ನಿರಂಜನ್ ಮಾತನಾಡಿ, ನಾವು ನಿಸಗ೯ದ ಮೇಲೆ ನಡೆಸಿದ ದೌಜ೯ನ್ಯಕ್ಕೆ ಪ್ರತಿಫಲ ಎಂಬಂತೆ ಪ್ರಕೃತಿ ಯು ಇದೀಗ ಮಾನವನಿಗೆ ತಿರುಗೇಟು ನೀಡುತ್ತಿದ್ದು, ನಾವು ನಿಸಗ೯ದ ಅಧಿಪತಿಗಳಲ್ಲ ಎಂಬುದನ್ನು ಇನ್ನಾದರೂ ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಬಾಲ್ಯದಲ್ಲಿರುವಾಗಲೇ ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾಥಿ೯ಗಳಿಗೆ ತಿಳುವಳಿಕೆ ಮೂಡಿಸುವಂಥ ಕಾಯ೯ಕ್ರಮಗಳನ್ನು ಆಯೋಜಿಸಬೇಕು. ಪರಿಸರ ಮಾನವನ ಜೀವನಕ್ಕೆ ಎಷ್ಟು ಅನಿವಾಯ೯ ಎಂಬ ಬಗ್ಗೆ ಜಾಗೃತಿ ಮೂಡಿಸುವ ಕಾಯ೯ಕ್ರಮಗಳು ರೂಪುಗೊಳ್ಳಬೇಕು ಎಂದರಲ್ಲದೇ ಹಸಿರನ ನಡುವೆ ಜೀವಿಸುತ್ತಿರುವ ಕೊಡಗಿನವರು ಭಾಗ್ಯವಂತರು ಎಂದು ನಿರಂಜನ್ ಬಣ್ಣಿಸಿದರು.

ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕವನ್ ಮಾತನಾಡಿ, ಮಕ್ಕಳು ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿರಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇಬ್ನಿ ಕೂಗ್೯ ರೆಸಾಟ್೯ ಮಾಲೀಕ ಕ್ಯಾಪ್ಟನ್ ಸೆಬಾಸ್ಟಿನ್ ಮಾತನಾಡಿ, ಸ್ವಚ್ಚ, ಹಸಿರು ಪರಿಸರ ತಮ್ಮ ರೆಸಾಟ್೯ನ ಧ್ಯೇಯವಾಕ್ಯವಾಗಿದ್ದು ಭೂದೇವಿಯ ಒಡಲನ್ನು ಹಾಳುಗೆಡಹಲು ಬಿಡಬಾರದು ಎಂಬ ದೃಷ್ಟಿಯಿಂದ ತಮ್ಮ ರೆಸಾಟ್೯ನ್ನು ಮಾಲಿನ್ಯಕ್ಕೆ ಆಸ್ಪದ ಕೊಡದಂತೆ ಸಂರಕ್ಷಿಸಲಾಗಿದೆ ಎಂದು ಹೇಳಿದರು. ಆಹಾರವನ್ನೂ ಕೂಡ ರೆಸಾಟ್೯ನಲ್ಲಿ ವ್ಯಥ೯ವಾಗದಂತೆ ಪ್ರವಾಸಿಗರಿಗೆ ತಿಳಿಹೇಳುತ್ತಿದ್ದು ರೆಸಾಟ್೯ಗೆ ಬರುವವರು ಅನಗತ್ಯವಾದ ಆಹಾರವನ್ನು ವ್ಯಥ೯ ಮಾಡಿದ್ದೇ ಆದಲ್ಲಿ 100ಗ್ರಾಮ್ ಗೆ 100 ರೂ. ದಂಡ ವಿಧಿಸಲಾಗುತ್ತಿದೆ. ವ್ಯಥ೯ವಾಗುವ ನೀರು, ಆಹಾರದಿಂದ ರೆಸಾಟ್೯ನ ಹಸಿರು ಸಸಿಗಳಿಗೆ ಅಗತ್ಯವಾದ ಗೊಬ್ಬರ ಸಿಂಪಡಿಸಲಾಗುತ್ತದೆ. ಇದಕ್ಕಾಗಿ ಇಬ್ನಿ ರೆಸಾಟ್೯ಗೆ ರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿದೆ ಎಂದು ಮಾಹಿತಿ ನೀಡಿದರು.

ಪ್ರವಾಸೋದ್ಯಮಿ ಶಾಂತೆಯಂಡ ವಿಕಾಸ್ ಅಚ್ಚಯ್ಯ ವೇದಿಕೆಯಲ್ಲಿದ್ದರು.

ಇಬ್ನಿ ಕೂಗ್೯ ರೆಸಾಟ್೯ನ ಕಾಯ೯ನಿವಾ೯ಹಕ ಮುಖ್ಯಸ್ಥೆ ಶರಿ ಸೆಬಾಸ್ಟಿನ್ ವಂದಿಸಿದರು. ಮ್ಯಾರಥಾನ್ ನಲ್ಲಿ ಪಾಲ್ಗೊಂಡ ವಿದ್ಯಾಥಿ೯ಗಳಿಗೆ ಪ್ರಶಂಸನಾ ಪತ್ರವನ್ನು ಗಣ್ಯರು ವಿತರಿಸಿದರು.

marothon

ಮ್ಯಾರಥಾನ್ ಗೆ ಚಾಲನೆ – ಇಬ್ನಿ ಕೂಗ್೯ ರೆಸಾಟ್೯ ವತಿಯಿಂದ ಆಯೋಜಿತ ವಿದ್ಯಾಥಿ೯ಗಳಿಗಾಗಿನ ಹಸಿರು ಸಂರಕ್ಷಣೆ ಸಂದೇಶ ಹೊಂದಿದ ಮ್ಯಾರಾಥಾನ್ ಗೆ ಮಡಿಕೇರಿಯ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ವ?ತ್ತದಲ್ಲಿ ವಿಧಾನಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಪನ್ನೇಕರ್ ಚಾಲನೆ ನೀಡಿದರು. ಕಾಯ೯ಕ್ರಮದ ಸಂಚಾಲಕ ವಕೀಲ ಎಂ.ಎ.ನಿರಂಜನ್, ಹೋಂಸ್ಟೇ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ, ಕಾಯ೯ದಶಿ೯ ಅಂಬೆಕಲ್ ನವೀನ್ ಕುಶಾಲಪ್ಪ, ಗ್ರೀನ್ ಸಿಟಿ ಫೋರಂ ಸಂಚಾಲಕ ಚೆಯಂಡ ಸತ್ಯ, ರೋಟರಿ ವಲಯ ಕಾಯ೯ದಶಿ೯ ಅನಿಲ್ ಎಚ್.ಟಿ., ವಕೀಲರ ಸಂಘದ ಅಧ್ಯಕ್ಷ ಕವನ್, ಉದ್ಯೋಗ ವಿನಿಮಯಾದಿಕಾರಿ ಕೆ.ವಿ.ಜಗನ್ನಾಥ್, ಡಿವೈಎಸ್ಪಿ ದಿನೇಶ್, ನಿವೃತ ನಿರೀಕ್ಷಕ ಅನೂಪ್ ಮಾದಪ್ಪ, ಪ್ರವಾಸೋದ್ಯಮಿ ವಿಕಾಸ್ ಅಚ್ಚಯ್ಯ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ವಿವಿಧ ಶಾಲಾ ವಿದ್ಯಾಥಿ೯ಗಳು ಹಸಿರು ಸಂರಕ್ಷಣೆ ಸಂದೇಶ ಹೊಂದಿದ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English