ಗಾಂಜ ಸೇವನೆ ಮಾಡುವುದು ಎಪ್ಟು ಅಪರಾಧವೋ, ಅಪ್ಟೇ ಗಾಂಜವನ್ನು ಒಬ್ಬರಿಂದ ಇನೊಬ್ಬರಿಗೆ ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧ

10:07 AM, Thursday, February 13th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

kudroli

ಮಂಗಳೂರು : ದಿನಾಂಕ : 11.02.2020 ರಂದು ಮಂಗಳೂರು ತಾಲೂಕಿನ ಬೊಕ್ಕಪಟ್ಣ-3 ಇಲ್ಲಿಯ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚೈಲ್ಡ್‌ಲೈನ್ ವತಿಯಿಂದ ತೆರೆದ ಮನೆ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಕಾರ್ಯಕ್ರಮವನ್ನು ಬಿತ್ತಿ ಪತ್ರವನ್ನು ಉದ್ಘಾಟಿಸುವ ಮೂಲಕ ಪ್ರಾರಂಬಿಸಲಾಯಿತು. ನಂತರ ಕಾರ್ಯಕ್ರಮದ ಪ್ರಾಸ್ತವಿಕತೆಯನ್ನು ಕೇಂದ್ರ ಸಂಯೋಜಕರಾದ ದಿಕ್ಷೀತ್ ಅಚ್ರಪ್ಪಾಡಿಯವರು ಮಾತನಾಡುತ್ತಾ ಚೈಲ್ಡ್‌ಲೈನ್ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಗೆ ಮಂತ್ರಾಲಯದ ಯೋಜನೆಯಾಗಿದ್ದು ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆ ಹಾಗೂ ಪೋಷಣೆಗೆ ಇರುವ ,24 ಗಂಟೆಯ ಹಗಲು ತುರ್ತು ಸೇವೆಯಾಗಿದೆ ಮಕ್ಕಳು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಾದ ಮಗುವನ್ನು ಹಿಡಿದು ಕೊಂಡು ಭಿಕ್ಷೆ ಬೇಡುವುದು, ಬಾಲ ಕಾರ್ಮಿಕರು, ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಹೀಗೆ ಒಂದಲ್ಲಾ ರೀತಿಯ ಸಮಸ್ಯೆಗಳಿಗೆ ಗುರಿಯಾಗಿದ್ದಾರೆ ಇಂತಹ ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ 1098 ಕ್ಕೆ ಮಾಹಿತಿ ನೀಡಿ ಎಂಬುದಾಗಿ ತಿಳಿಸಿದರು. ನಂತರ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿಯವರಾದ ಶ್ರೀಮತಿ ಜ್ಯೋತಿರವರು ಮಾತನಾಡುತ್ತಾ ಮಕ್ಕಳ ವೈಯಕ್ತಿಕ ಶುಚಿತ್ವ,ಮಾನಸಿಕ,ದೈಹಿಕ ಶುಚಿತ್ವಕ್ಕೆ ಹೆಚ್ವಿನ ರೀತಿಯಲ್ಲಿ ಮಹತ್ವ ನೀಡಬೇಕು,

kudroli

ಅದರಲ್ಲೂ ಹೆಣ್ಣು ಮಕ್ಕಳು ಹದಿಹರೆಯದ ಸಮಸ್ಯೆಗಳ ಬಗ್ಗೆ ಮಾನಾಡುತ್ತಾ, ಮಕ್ಕಳಿಗೆ ತನ್ನ ಮನೆಯಲ್ಲಿ ಹೆತ್ತವರು ವೈಯಕ್ತಿಕ ಶುಚಿತ್ವಕ್ಕೆ ಪ್ರೇರಣೆಯನ್ನು ನೀಡಬೇಕು ಹಾಗೂ ಪ್ರತೀ ತಿಂಗಳೂ ಜಂತು ಹುಳುವಿನ ಮಾತ್ರೆಯನ್ನು ಶಾಲೆಗಳಲ್ಲಿ ನೀಡತ್ತೇವೆ,ಎಂದು ಹೇಳಿದರು. ಬಳಿಕ, ಸಂಪನ್ಮೂಲ ಆಧಿಕಾರಿಯಾದ ಇಕೊನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಪೊಲೀಸ್ ಠಾಣೆಯ ಶ್ರೀಮತಿ ಶ್ರೀಲತಾರವರು ಮಾದಕ ವಸ್ತುವಿನ ದುಷ್ಪರಿಣಾಮದ ಕುರಿತು ಮಾಹಿತಿಯನ್ನು ನೀಡುತ್ತಾ ಅಮಲು ಪದರ್ಥಾವನ್ನು ಸೇವನೆ ಮಾಡುವವರ ದೈನಂದಿನ ಚಟುವಟಿಕೆಗಳಲ್ಲಿ ಬದಲಾಣೆ ಕಾಣುತ್ತದೆ, ಅಮಲು ಪದಾರ್ಥಗಳಾದ ಗಾಂಜ , ತಂಬಾಕು , ಸಿಗರೇಟ್ ,ಕಪ್ ಸಿರಾಪ್, ಇವುಗಳನ್ನು ಸೇವನೆ ಮಾಡುವುದರಿಂದ ಅವರ ಆರೋಗ್ಯದಲ್ಲಿ ಪರಿಣಾಗಳು ಕಾಣುತ್ತದೆ. ಗಾಂಜ ಸೇವನೆ ಮಾಡುವುದು ಎಪ್ಟು ಆಪಾರದವೋ, ಅಪ್ಟೇ ಗಾಂಜವನ್ನು ಒಬ್ಬರಿಂದ ಇನೊಬ್ಬರಿಗೆ ಮಾರಾಟ ಮಾಡುವುದು ಕಾನೂನು ಪ್ರಕಾರ ಅಪಾರದ, ಇದಕ್ಕೆ ಕಾನೂನಿನಲ್ಲಿ ಶಿಕ್ಷೆಯು ಇದೆ ಎಂದು ತಿಳಿಸಿದರು. ಕಾರ್ಯಕ್ರಮದ ಎಂದರೆ ಒಂದು ಜಾತಿಯ ಜೌಷಧೀಯ ಸಸ್ಯವಾದರೂ ಅದನ್ನು ಬೆಳೆಯಲು ನಮಗೆ ಅನಮತಿಯನ್ನ ನೀಡಲಿಲ್ಲ. ಹೆತ್ತವರು ಮಕ್ಕಳ ಶಾಲಾ ಬ್ಯಾಗ್‌ನ್ನು ಪರಿಶೀಲಿಸಬೇಕು ಎಂದು ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಆಥಿತಿಗಳನ್ನು ಸ್ವಾಗತಿದ, ಮಂಗಳೂರು ತಾಲೂಕಿನ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ಶ್ರೀಮತಿ ಕಲ್ಪನಾ.ಆರ್‌ರವರು ವೇದಿಕೆಯಲ್ಲಿ ಆಸೀನರಾಗಿರುವ ಅತಿಥಿಗಳಿಗೆ ಸ್ವಾಗತವನ್ನು ನೀಡಿದರು. ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಮ್ಯಾಗ್ದಲೀನ್ ಡಿಸೋಜರವರು ಧನ್ಯವಾದವನ್ನು ನೀಡಿದರು ,ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ರೇವತಿ ಹೊಸಬೆಟ್ಟು ಇವರು ನೇರವೇರಿಸಿದರು. ಕಾರ್ಯಕ್ರಮದಲ್ಲಿ ಚೈಲ್ಡ್‌ಲೈನ್ ಕಾರ್ಯಕರ್ತರಾದ ,ಜಯಂತಿ ಕೋಕಳ, ಮತ್ತು ಪೋಲಿಸ್ ಇಲಾಖಾಧಿಕಾರಿಗಳಾದ ಶ್ರೀಮತಿ ಲತಾ ರವರು ಮತ್ತು ಅಂಗನವಾಡಿ ಶಿಕ್ಷಕರು ಹಾಜರಾಗಿದ್ದರು ಮತ್ತು ಮಕ್ಕಳ ಪೋಷಕರು ಭಾಗವಹಿಸಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English