ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ : ಧರ್ಮಸ್ಥಳದಲ್ಲಿ ವ್ಯಸನಮುಕ್ತ ಸಾಧಕರ ಸಮಾವೇಶ

12:04 PM, Thursday, February 13th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

ujire

ಉಜಿರೆ : ಭಾರತದ ಆದ್ಯಾತ್ಮಿಕತೆ, ಸಂಸ್ಕೃತಿ-ಸಂಸ್ಕಾರ ಹಾಗೂ ಕುಟುಂಬ ಜೀವನ ಪದ್ಧತಿ ವಿಶ್ವಕ್ಕೆ ಮಾದರಿಯಾಗಿದೆ. ಮನೆಯಲ್ಲಿ ಸ್ವರ್ಗ-ನರಕಎರಡೂಇದೆ. ಗಂಡ-ಹೆಂಡತಿ ಹಾಗೂ ಕುಟುಂಬದ ಸದಸ್ಯರೆಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ ಅನ್ಯೋನ್ಯತೆಯಿಂದ ಸೌಹಾರ್ದಯುತ ಜೀವನ ನಡೆಸಿದರೆ ಮನೆಯಲ್ಲೆ ಸ್ವರ್ಗ ಸುಖ ಅನುಭವಿಸಬಹುದು.ಆಗ ಮನೆಯೇ ಮಂತ್ರಾಲಯವಾಗುತ್ತದೆ. ಮನಸೇ ದೇವಾಲಯವಾಗುತ್ತದೆ.ಪರಸ್ಪರ ಅನ್ಯೋನ್ಯತೆ, ಹೊದಾಣಿಕೆ ಹಾಗೂ ಪ್ರೀತಿ-ವಿಶ್ವಾಸಇಲ್ಲವಾದಲ್ಲಿ ಮನೆಯೇ ನರಕ ಸದೃಶವಾಗುತ್ತದೆಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಅನ್ನಾಸಾಹೇಬ್ ಹೇಳಿದರು.

ujire

ಅವರು ಮಂಗಳವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿಸಭಾಭವನದಲ್ಲಿ ಅಖಿಲ ಕರ್ನಾಟಕಜನಜಾಗೃತಿ ವೇದಿಕೆ ಆಶ್ರಯದಲ್ಲಿ ವ್ಯಸನಮುಕ್ತ ಸಾಧಕರ ಸಮಾವೇಶ ಮತ್ತು ಶತದಿನೋತ್ಸವಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ujire

ಆಡು ಮುಟ್ಟದ ಸೊಪ್ಪಿಲ್ಲ, ಡಿ. ವೀರೇಂದ್ರ ಹೆಗ್ಗಡೆಯವರು ಮಾಡದ ಸೇವಾ ಕ್ಷೇತ್ರವಿಲ್ಲ ಎಂದು ಹೇಳಿದ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಮೂಲಕ ನವಜೀವನ ಸಮಿತಿಆಶ್ರಯದಲ್ಲಿ ಹೆಗ್ಗಡೆಯವರು ಹಮ್ಮಿಕೊಂಡ ಸಮಾಜಮುಖಿ ಕಾರ್ಯಗಳು ಹಾಗೂ ವ್ಯಸನಮುಕ್ತಆರೋಗ್ಯ ಪೂರ್ಣ ಸಮಾಜರೂಪಿಸುವ ಕಾರ್ಯ ಸ್ತುತ್ಯಾರ್ಹವಾಗಿದೆ. ಕಿರುಆರ್ಥಿಕಯೋಜನೆ ಮೂಲಕ ಸ್ವ-ಸಹಾಯ ಸಂಘಗಳ ಸಹಭಾಗಿತ್ವದಲ್ಲಿ ಮಹಿಳೆಯರು ಇಂದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.ಶೇಕಡಾ ನೂರು ಸಾಲ ಮರು ಪಾವತಿಯಾಗುತ್ತಿದೆಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ujire

ಮಾನಸಿಕ ಒತ್ತಡ, ವ್ಯವಹಾರದಲ್ಲಿ ಸೋಲು, ನಷ್ಟ, ಸಹವಾಸ ದೋಷ, ಆರೋಗ್ಯ ಸಮಸ್ಯೆಇತ್ಯಾದಿ ಹತ್ತು-ಹಲವು ಕಾರಣಗಳಿಂದ ಜನರುಜಾತಿ-ಮತ, ಲಿಂಗ, ವಯಸ್ಸಿನ ಭೇದವಿಲ್ಲದೆ ಮದ್ಯಪಾನಚಟಕ್ಕೆ ಬಲಿಯಾಗುತ್ತಾರೆ.

ujire

ಮಹಿಳೆಯರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಬೇಕುಎಂದುಅವರು ಸಲಹೆ ನೀಡಿದರು.ಹೆಣ್ಣು ಮಕ್ಕಳಂತೆ ಗಂಡು ಮಕ್ಕಳಿಗೂ ಸಮಾನವಾಗಿಎಚ್ಚರಿಕೆ, ಮಾರ್ಗದರ್ಶನ ನೀಡಬೇಕು. ಎಲ್ಲಾ ಗ್ರಾಮಗಳು ವ್ಯಸನ ಮುಕ್ತ ಗ್ರಾಮಗಳಾದಾಗ ಮಾತ್ರ ಮಹಿಳೆಯರು ಶಾಂತಿ, ನೆಮ್ಮದಿಯಜೀವನ ನಡೆಸಬಹುದು.ಅವರಿಗೆ ನಾವು ನ್ಯಾಯ ಒದಗಿಸಿದಂತಾಗುತ್ತದೆ ಎಂದು ಸಚಿವರುಅಭಿಪ್ರಾಯ ಪಟ್ಟರು.

ujire

ಹೇಮಾವತಿ ವಿ. ಹೆಗ್ಗಡೆಯವರುಮಾತನಾಡಿ, ಮಹಿಳೆಯರು ದುಶ್ಚಟಗಳ ದಮನ ಮಾಡುವ ಸಂಕಲ್ಪ ಶಕ್ತಿ ಮತ್ತುಆತ್ಮ ಬಲ ಹೊಂದಿರಬೇಕು. ಜನಜಾಗೃತಿ ವೇದಿಕೆಯ ನಿರಂತರ ಪರಿಶ್ರಮ-ಪ್ರಯತ್ನದಿಂದ ವ್ಯಸನ ಮುಕ್ತರಾಗಿ ಅನೇಕ ಕುಟುಂಬಗಳು ಇಂದು ಚೇತರಿಸಿ ನವಜೀವನ ನಡೆಸುತ್ತಿವೆಎಂದು ಹೇಳಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಹೆಗ್ಗಡೆಯವರ ನೇತೃತ್ವದಲ್ಲಿರಾಷ್ಟ್ರಪಿತ ಮಹಾತ್ಮಗಾಂಧೀಜಿಕಂಡ ವ್ಯಸನಮುಕ್ತ ಭಾರತದ ಕನಸು ನನಸಾಗುತ್ತಿದೆಎಂದು ಹೇಳಿದರು.

ujire

ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್‌ಅವರನ್ನು ಸನ್ಮಾನಿಸಲಾಯಿತು.

ujire

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವ್ಯಸನಮುಕ್ತರುಕಾಯಾ, ವಾಚಾ, ಮನಸಾ, ಪರಿಶುದ್ಧರಾಗಿ ಶ್ರೀ ಮಂಜುನಾಥ ಸ್ವಾಮಿಯದರ್ಶನ ಮಾಡಿ, ಆಶೀರ್ವಾದ ಪಡೆದು ಪವಿತ್ರಾತ್ಮರಾಗಿದ್ದೀರಿ.ಮುಂದೆದೃಢ ಸಂಕಲ್ಪದಿಂದಅಂತರಂಗ-ಬಹಿರಂಗ ಪರಿಶುದ್ಧರಾಗಿಆರೋಗ್ಯಪೂರ್ಣಜೀವನ ನಡೆಸಬೇಕುಎಂದು ಸಲಹೆ ನೀಡಿದರು.

ಕುಟುಂಬದ ಸದಸ್ಯರೆಲ್ಲರೂ ವ್ಯಸನ ಮುಕ್ತರನ್ನು ಪ್ರೀತಿ-ವಿಶ್ವಾಸ ಮತ್ತುಗೌರವದಿಂದ ನೋಡಿಕೊಳ್ಳಬೇಕು.ಮನೆ ಮಂದಿ ಎಲ್ಲರೂಒಟ್ಟಿಗೆ ಕುಳಿತು ಊಟ ಮಾಡಬೇಕುಎಂದುಅವರು ಕಿವಿ ಮಾತು ಹೇಳಿದರು.

ಶಾಲಾ-ಕಾಲೇಜುಗಳ ಬಳಿ ಡ್ರಗ್ಸ್ ಮಾರಾಟಜಾಲ ಹೆಚ್ಚಾಗುತ್ತಿದೆ.ಇದನ್ನು ಸರ್ಕಾರತಡೆಗಟ್ಟಬೇಕುಎಂದು ಹೆಗ್ಗಡೆಯವರು ಹೇಳಿದರು.
ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದಂತೆತಡೆಯಲು ಶಾಲಾ-ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮೂಲಕ ಅರಿವು, ಅರಿವು ಮೂಡಿಸಲಾಗುತ್ತಿದೆಎಂದುಅವರು ತಿಳಿಸಿದರು.

ಜನಜಾಗೃತಿ ವೇದಿಕೆಯ ನಿರ್ದೇಶಕ ವಿವೇಕ್ ವಿ. ಪಾಸ್ ಸ್ವಾಗತಿಸಿದರು.ಜನಜಾಗೃತಿ ವೇದಿಕೆಯರಾಜ್ಯಾಧ್ಯಕ್ಷ ವಿ. ರಾಮಸ್ವಾಮಿಧನ್ಯವಾದವಿತ್ತರು.
ಭಾಸ್ಕರ್‌ಎನ್. ಮತ್ತು ನಾಗೇಶ್‌ಕಾರ್ಯಕ್ರಮ ನಿರ್ವಹಿಸಿದರು.

ಮುಖ್ಯಾಂಶಗಳು :
* ಸಚಿವೆ ಶಶಿಕಲಾ ಜೊಲ್ಲೆಅನ್ನಾಸಾಹೇಬ್‌ಅವರನ್ನು ಹೆಗ್ಗಡೆಯವರು ಗೌರವಿಸಿದರು.

*ಕರ್ನಾಟಕರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಕೆ. ರೋಹಿಣಿಜನಜಾಗೃತಿ ವೇದಿಕೆಗೆ ಮದ್ಯವರ್ಜನ ಶಿಬಿರ ಆಯೋಜಿಸಲು ಹತ್ತು ಲಕ್ಷರೂ. ನೆರವು ನೀಡಿದರು.

* ಮದ್ಯವರ್ಜನ ಶಿಬಿರದಲ್ಲಿ ವ್ಯಸನ ಮುಕ್ತರಾಗಿನವಜೀವನ ನಡೆಸುತ್ತಿರುವಹುಣಸೂರಿನಕೃಷ್ಣೇಗೌಡ ಮತ್ತು ಮಂಡ್ಯದ ಸವಿತಾರುದ್ರಾಚಾರಿತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

* ತಾನು 12 ವರ್ಷ ಪ್ರಾಯದವಳಿದ್ದಾಗ ತಾಯಿ-ತಂದೆಜೊತೆ ಧರ್ಮಸ್ಥಳಕ್ಕೆ ಬಂದಾಗ ಹೆಗ್ಗಡೆಯವರ ನಾಯಕತ್ವ ಹಾಗೂ ಸೇವಾ ಕಾರ್ಯದಿಂದ ಪ್ರೇರಿತಳಾಗಿದ್ದೇನೆ ಎಂದು ಸಚಿವೆ ಶಶಿಕಲಾ ಜೊಲ್ಲೆಅನ್ನಾಸಾಹೇಬ್ ಹೇಳಿದರು.

* ಸಚಿವೆ ಅನೇಕ ಭಕ್ತಿಗೀತೆ, ರಾಗಿ ಬೀಸುವ ಹಾಡುಗಳನ್ನು ರಾಗದಿಂದ ಸರಾಗವಾಗಿ ಹಾಡಿ ಶ್ರೋತೃಗಳ ಮುಕ್ತ ಪ್ರಶಂಸೆಗೆ ಪಾತ್ರರಾದರು.
* ದುಶ್ಚಟಗಳುಗೆದ್ದಲಿನಂತೆಇಡಿ ಮನೆ ಹಾಗೂ ಸಂಸಾರವನ್ನು ಹಾಳು ಮಾಡುತ್ತವೆ.

* ಮದ್ಯ ವ್ಯಸನಿಗಳ ಮನ ಪರಿವರ್ತನೆ ಮಾಡಿ ವ್ಯಸನ ಮುಕ್ತರನ್ನಾಗಿ ಮಾಡಿದವರಿಗೆ ಜಾಗೃತಿಅಣ್ಣ ಮತ್ತು ಜಾಗೃತಿ ಮಿತ್ರ ಪುರಸ್ಕಾರ ನೀಡಿಗೌರವಿಸಲಾಯಿತು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English