ಲಕ್ನೋ ನ್ಯಾಯಾಲಯದ ಆವರಣದಲ್ಲಿ ಸಜೀವ ಬಾಂಬ್​ ಸ್ಫೋಟ : ಹಲವರಿಗೆ ಗಾಯ

3:31 PM, Thursday, February 13th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

lacknow

ಉತ್ತರ ಪ್ರದೇಶ : ವಕೀಲರನ್ನು ಗುರಿಯಾಗಿಸಿಕೊಂಡು ಲಕ್ನೋ ನ್ಯಾಯಾಲಯದಲ್ಲಿ ಸಜೀವ ಬಾಂಬ್ ಸ್ಪೋಟಿಸಲಾಗಿದ್ದು, ಘಟನೆಯಲ್ಲಿ ಅನೇಕ ವಕೀಲರು ಗಾಯಗೊಂಡಿದ್ದಾರೆ.

ಬಾಂಬ್ ಸ್ಪೋಟ ಘಟನೆ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಗಾಯಗೊಂಡ ವಕೀಲರನ್ನು ತಕ್ಷಣಕ್ಕೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ವಸಿರ್ಗಂಜ್ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದರು. ಈ ವೇಳೆ ಮೂರು ಸಜೀವ ಬಾಂಬ್ ಪತ್ತೆಯಾಗಿದೆ.

ಇಲ್ಲಿನ ಜಿಲ್ಲಾ ನ್ಯಾಯಾಲಯದ ವಕೀಲ ಸಂಜೀವ್ ಲೋದಿ ಅವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಕೂದಲೆಳೆ ಅಂತರದಲ್ಲಿ ಲೋದಿ ಪಾರಾಗಿದ್ದಾರೆ.

ಬಾಂಬ್ ಸ್ಪೋಟಿಸಿದ ವ್ಯಕ್ತಿಯನ್ನು ಜೀತು ಯಾದವ್ ಎಂದು ಗುರುತಿಸಲಾಗಿದ್ದು, ಈತ ಕಚ್ಛಾ ಸಾಮಾಗ್ರಿ ಬಳಸಿ ಈ ಸ್ಪೋಟ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English