ಬೆಂಗಳೂರು :ಕಿಚ್ಚ ಸುದೀಪ್ ಈಗ ತೆಲುಗು ಮಾತ್ರವಲ್ಲ, ತಮಿಳು ಮತ್ತು ಹಿಂದಿಯಲ್ಲೂ ಸಿನಿರಸಿಕರ ಗಮನ ಸೆಳೆದಿದ್ದಾರೆ. ಒಂದು ರೀತಿಯಲ್ಲಿ ಅವರೀಗ ಕನ್ನಡಕ್ಕಷ್ಟೇ ಸೀಮಿತವಾದ ನಾಯಕರಲ್ಲ. ‘ಬಚ್ಚನ್’ ಚಿತ್ರವನ್ನು ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯಾವುದೇ ಯೋಚನೆ ಇರಲಿಲ್ಲ.ಆದರೆ ಈಗ ನಿರ್ಧಾರ ಬದಲಾಗುವ ಸಾಧ್ಯತೆಗಳು ಕಾಣುತ್ತಿದ್ದು. ನಿರ್ದೇಶಕ ಶಶಾಂಕ್ ಈ ಬಗ್ಗೆ ಸುಳಿವು ನೀಡಿದ್ದಾರೆ. ಸುದೀಪ್‌ಗೆ ಭಾರತೀಯ ಚಿತ್ರರಂಗದಲ್ಲಿ ಭಾರೀ ಅಭಿಮಾನಿಗಳಿದ್ದಾರೆ. ಅವರೀಗ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಬಚ್ಚನ್ ಚಿತ್ರವನ್ನು ಇತರೆ ಭಾಷೆಗಳಲ್ಲೂ ಬಿಡುಗಡೆ ಮಾಡುವ ಸಾಧ್ಯತೆಗಳನ್ನು ಈಗಲೇ ತಳ್ಳಿ ಹಾಕಲಾರೆ ಎಂದು ಚಿತ್ರ ನಿರ್ದೇಶಕ ಶಶಾಂಕ್ ಹೇಳಿದ್ದಾರೆ.
ಹಾಗೊಂದು ವೇಳೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುವುದಿದ್ದರೆ, ಡಬ್ಬಿಂಗ್ ಒಂದೇ ಸದ್ಯ ಚಿತ್ರತಂಡದ ಮುಂದಿರುವ ಆಯ್ಕೆ. ತಮಿಳು, ತೆಲುಗುಗಳಲ್ಲಿ ಸುದೀಪ್ ಉತ್ತಮ ಹಿಡಿತ ಹೊಂದಿರುವುದರಿಂದ ಆ ಭಾಷೆಗಳ ಪ್ರೇಕ್ಷಕರಿಗೆ ಚಿತ್ರ ತಲುಪುವಂತೆ ಮಾಡಬಹುದು. ಬಾಲಿವುಡ್‌ನಲ್ಲಿ ಸುದೀಪ್ ಇನ್ನೂ ಅಷ್ಟಾಗಿ ಯಶಸ್ಸು ಕಂಡಿಲ್ಲ. ‘ಈಗ’ ಚಿತ್ರದ ಹಿಂದಿ ಅವತರಣಿಕೆ ‘ಮಖಿ’ ಕಥೆಯೂ ಅಷ್ಟೇ. ನಿರ್ದೇಶಕ ರಾಜಮೌಳಿ ಇಟ್ಟಿದ್ದ ನಿರೀಕ್ಷೆಗಳು ಪರಿಣಾಮಕಾರಿಯಾಗಿ ಯಶಸ್ವಿಯಾಗಿಲ್ಲ. ಹಾಗಾಗಿ ಹಿಂದಿಯಲ್ಲಿ ‘ಬಚ್ಚನ್’ ಬಿಡುಗಡೆಯಾಗುವುದು ಕನ್ನಡದ ಯಶಸ್ಸನ್ನು ಅವಲಂಬಿಸಿರಬಹುದು. ಚಿತ್ರದ ಶೇ.60ರಷ್ಟು ಚಿತ್ರೀಕರಣ ಮುಗಿದಿದ್ದು. ಕೆಲವು ಆಕ್ಷನ್ ಸನ್ನಿವೇಶಗಳು ಮತ್ತು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಶೀಘ್ರದಲ್ಲೇ ಅದನ್ನೂ ಮುಗಿಸುತ್ತೇವೆ ಎಂದಿದ್ದಾರೆ ನಿರ್ದೇಶಕ ಶಶಾಂಕ್,
ಚಿತ್ರಕ್ಕೆ ‘ಬಚ್ಚನ್’ ಎಂದು ಹೆಸರನ್ನಿಟ್ಟಿರುವುದು ಯಾಕೆ ಎಂಬುದನ್ನು ವಿವರಿಸಿದ್ದಾರೆ. ಒಬ್ಬ ಆಕ್ರೋಶಿತ ಯುವಕನನ್ನು ಕಲ್ಪಿಸಿಕೊಳ್ಳುವಾಗ ನಮ್ಮ ಮನಸ್ಸಿಗೆ ಮೊದಲು ಬರುವ ವ್ಯಕ್ತಿ ಅಮಿತಾಬ್ ಬಚ್ಚನ್. ಅಂತಹುದೇ ಪಾತ್ರವನ್ನು ಸುದೀಪ್ ಈ ಚಿತ್ರದಲ್ಲಿ ಮಾಡುತ್ತಿದ್ದಾರೆ. ಅವರನ್ನು ಬಚ್ಚನ್ ಎಂದೇ ಚಿತ್ರದಲ್ಲಿ ಸಂಬೋಧಿಸಲಾಗುತ್ತದೆ. ಪ್ರೇಕ್ಷಕರಿಗೆ ಸಾಕಷ್ಟು ಅಚ್ಚರಿಗಳು ಕಾದಿವೆ ಎಂದರು. ಪಕ್ಕಾ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಸುದೀಪ್‌ಗೆ ಭಾವನಾ, ಪಾರುಲ್ ಯಾದವ್ ಮತ್ತು ಟುಲಿಪ್ ಜೋಶಿ ಮೂವರು ಹೀರೋಯಿನ್‌ಗಳು. ಚಿತ್ರ ತುಂಬಾ ಸ್ಟೈಲಿಶ್ ಆಗಿ ಬರುತ್ತಿದ್ದು, 2013ರ ಜನವರಿ ಅಥವಾ ಫೆಬ್ರವರಿ ಹೊತ್ತಿಗೆ ತೆರೆಗೆ ಬರುವ ನಿರೀಕ್ಷೆಗಳಿವೆ.
Click this button or press Ctrl+G to toggle between Kannada and English