ರಾಜ್ಯ ಬಜೆಟ್ ನಲ್ಲಿ ಕಾಫಿ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಮುಖ್ಯಮಂತ್ರಿ ಭರವಸೆ

11:59 AM, Friday, February 14th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

CM

ಮಡಿಕೇರಿ : ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿತ 2020-21ನೇ ಸಾಲಿನ ಆಯ-ವ್ಯಯ ಮೇಲಿನ ಪೂರ್ವಭಾವಿ ಚಚೆ೯ಯಲ್ಲಿ ಕನಾ೯ಟಕ ಬೆಳೆಗಾರರ ಒಕ್ಕೂಟದ ಪ್ರಮುಖರು ಪಾಲ್ಗೊಂಡು ಕಾಫಿ ಬೆಳೆಗಾರರ ಸಮಸ್ಯೆಗೆ ಬಜೆಟ್ ನಲ್ಲಿ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು. ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳಿಗೆ ಕೂಲಂಕುಶವಾಗಿ ಮನವರಿಕೆ ಮಾಡಿಕೊಡಲಾಯಿತು.

ಕನಾ೯ಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥ ಮಲ್ಲೇಶ್ ಕಾಫಿ ಬೆಳೆಗಾರರ ಹಲವಾರು ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಿ ಸೂಕ್ತ ಪರಿಹಾರ ಕಾಯ೯ಕ್ರಮಗಳ ಯೋಜನೆ ಜಾರಿಗೊಳಿಸುವಂತೆ ಮನವಿ ಮಾಡಿದರು.

10 ಅಶ್ವಶಕ್ತಿ ವಿದ್ಯುಚ್ಚಕ್ತಿ ಪಂಪ್ ಸೆಟ್ ಹೊಂದಿರುವ ಕಾಫಿ ಬೆಳೆಗಾರರನ್ನು ಎಲ್ ಟಿ4 ಸಿ ನಿಂದ ಎಲ್ ಟಿ.4 ಎ ಗೆ ಸೇರ್ಪಡೆಗೊಳಿಸಿ, ಉಚಿತ ವಿದ್ಯುತ್ ಸೌಲಭ್ಯವನ್ನುಕಲ್ಪಿಸಿಕೊಡಬೇಕು.

10 ಹೆಚ್.ಪಿವರೆಗಿನ ಪಂಪ್ ಸೆಟ್ ಹೊಂದಿರುವ ಕಾಫಿ ಬೆಳೆಗಾರರು ಅತೀ ಸಣ್ಣ ಬೆಳೆಗಾರರಾಗಿದ್ದು, ಹವಾಮಾನ ವ್ಯಪರಿತ್ಯ, ಕಾಫಿಯಲ್ಲಿ ಗುಣಪಡಿಸಲಾಗದ ರೋಗಬಾದೆ, ಬೆಲೆಕುಸಿತ, ಕುಂಠಿತ ಉತ್ಪಾದನೆ ಮುಂತಾದ ಸಮಸ್ಯೆಗಳಿಂದ ಕಾಫಿ ಬೆಳೆಗಾರರು ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಆಥಿ೯ಕವಾಗಿ ಸಂಕಷ್ಟದಲ್ಲಿದ್ದಾರೆ. ಕಾಫಿ ಬೆಳೆಗೆ ಕೇವಲ ವರ್ಷದಲ್ಲಿ 1-2 ತಿಂಗಳ ಕಾಲ ಕಾಫಿ ಹೂವಿಗಾಗಿ ನೀರಾವರಿ ಪಂಪ್ಸೆಟ್ ಹೊಂದಿದ್ದು, ವಿದ್ಯುತ್ ಶುಲ್ಕವನ್ನು ಭರಿಸಲು ಸಾಧ್ಯವಾಗದೇ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೀಗಾಗಿ ಬೆಳೆಗಾರರ ಹಿತದೃಷ್ಟಿಯನ್ನು ಪರಿಗಣಿಸಿ ಸೂಕ್ತ ಸೌಲಭ್ಯಗಳನ್ನು ಒದಗಿಸಿಕೊಟ್ಟು ಕಾಫಿ ಬೆಳೆಗಾರರನ್ನು ಆಥಿ೯ಕ ಸಂಕಷ್ಟದಿಂದ ಪಾರು ಮಾಡಬೇಕು.

CM

ಮುಖ್ಯ ಬೇಡಿಕೆಗಳು:
10ಹೆಚ್.ಪಿವರೆಗಿನ ವಿದ್ಯುಚ್ಚಕ್ತಿ ಪಂಪ್ಸೆಟ್ ಹೊಂದಿರುವ ಕಾಫಿಬೆಳೆಗಾರರನ್ನು ಎಲ್.ಟಿ.4 ಸಿ ನಿಂದ ಎಲ್ ಟಿ.4ಎ ಗೆ ಇತರೆ ರೈತರಂತೆ ಕಾಫಿ ಬೆಳೆಗಾರರಿಗೂ ಕೂಡಾ (ಉಚಿತ) ಶುಲ್ಕರಹಿತ ವಿದ್ಯುತ್ ಪೂರೈಸಬೇಕು.

10 ಹೆಚ್.ಪಿಗೂ ಅಧಿಕ ವಿದ್ಯುಚ್ಯಕ್ತಿ ಪಂಪ್ ಸೆಟ್ ಹೊಂದಿರುವ ಬೆಳೆಗಾರರಿಗೆ ಬಾಕಿಯನ್ನು ಬಡ್ಡಿರಹಿತವಾಗಿ ಕಂತುಗಳ ರೂಪದಲ್ಲಿ ಪಾವತಿಸಲು ಅನುಕೂಲ ಮಾಡಿಕೊಡಬೇಕು.

ಅಲ್ಲಿಯವರೆಗೂ ವಿದ್ಯುತ್ ಸ್ಥಾವರದ ಮೂಲಕ ನೀರಾವರಿ ಮಾಡಲು ಯಾವುದೇ ಅಡಚಣೆಯಾಗದಂತೆ ಸೂಕ್ತ ಕ್ರಮ ಕೈಗೊಂಡು ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರು ಕಾಫಿ ಬೆಳೆಯಲ್ಲಿ ಅಭಿವೃದ್ದಿ ಸಾಧಿಸಲು ನೆರವಾಗಬೇಕು.

2.ರಾಷ್ಟ್ರೀಕೃತ, ವಾಣಿಜ್ಯ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ವಾಷಿ೯ಕ ಬಡ್ಡಿಯನ್ನು ಮನ್ನಾ ಮಾಡಬೇಕು.

ಸಹಕಾರಿ ಸಂಸ್ಥೆಗಳಲ್ಲಿ ಸಕಾಲದಲ್ಲಿ ಸಾಲ ಪಾವತಿಸುವ ಪ್ರತೀ ಪಾವತಿದಾರರಿಗೆ ಅವರ ವಾಷಿ೯ಕ ಬಡ್ಡಿಯನ್ನು ಮನ್ನಾ ಮಾಡುವ ಹೊಸ ಯೋಜನೆ ಇದ್ದು , ಅದೇ ಸೌಲಭ್ಯವನ್ನು ಎಲ್ಲಾ ರೈತರಿಗೆ ಎಲ್ಲಾ ರಾಷ್ಟ್ರೀಕೃತ, ವಾಣಿಜ್ಯ ಮತ್ತು ಖಾಸಗಿ ಬ್ಯಾಂಕುಗಳಿಗೆ ವಿಸ್ತರಿಸಬೇಕು.

3.ಸಕಾ೯ರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಬೇಕು.

ಸಕಾ೯ರಿ ಭೂಮಿಯನ್ನು ಬೆಳೆಗಾರರಿಗೆ 2017-18 ರ ಬಜೆಟ್ ನಲ್ಲಿ ಗುತ್ತಿಗೆ ಆಧಾರದಲ್ಲಿ ನೀಡಲು ಘೋಷಿಸಲಾಗಿದೆ. ಹೀಗಿದ್ದರೂ ರೂಪುಗೊಂಡ ಈ ಕರುಡು ನಿಯಮಗಳು ಬೆಳೆಗಾರರ ಪರವಾಗಿ ಇಲ್ಲ. ಎಲ್ಲಾ ಬೆಳೆಗಾರರ ಹಿತದೃಷ್ಟಿಯಿಂದ ಕನಾ೯ಟಕ ಬೆಳೆಗಾರರ ಒಕ್ಕೂಟದ ಸಲಹೆಗಳನ್ನು ಪರಿಗಣಿಸಿ, ಗುತ್ತಿಗೆ ಆಧಾರದಲ್ಲಿ ಸಕಾ೯ರಿ ಭೂಮಿಯನ್ನು ನೀಡಬೇಕು.

4.ಕೃಷಿ ಸಾಲ ಮನ್ನಾ ಮಾಡಬೇಕು.
ಹಿಂದಿನ ಸಕಾ೯ರವು ಕೃಷಿ ಸಾಲ ಮನ್ನಾ ಘೋಷಿಸಿದೆ. ಆದರೆ ಅದು ಏಕರೂಪವಾಗಿಲ್ಲ. ಅನೇಕ ಷರತ್ತುಗಳನ್ನು ಮುಂದಿಡಲಾಗಿದೆ. ಆದ್ದರಿಂದ ಯಾವುದೇ ಷರತ್ತುಗಳಿಲ್ಲದೇ ಏಕರೂಪದ ಸಾಲಮನ್ನಾ ಸೌಲಭ್ಯವನ್ನು ರೈತನಿಗೆ ನೀಡಬೇಕು.

5.ಅತೀವೃಷ್ಟಿಯಿಂದ ಹಾನಿಗೊಳಗಾದ ಭೂಮಿಗೆ ಪರಿಹಾರ ನೀಡಬೇಕು.

2018 ಮತ್ತು 2019 ನೇ ಸಾಲಿನಲ್ಲಿ ಸುರಿದ ಅತಿಯಾದ ಮಳೆಯಿಂದ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಕಾಫಿ ತೋಟಕ್ಕೆ ಸಮಸ್ಯೆಯಾಗಿ ಈ ಜಿಲ್ಲೆಗಳಲ್ಲಿ ಹಲವಾರು ಭೂಕುಸಿತಗಳು ಉಂಟಾಗಿದೆ. ಹೀಗಿದ್ದರೂ ಈವರೆಗೆ ಸಕಾ೯ರದಿಂದ ಸಂಕಷ್ಟ ಅನುಭವಿಸಿದವರಿಗೆ ಸೂಕ್ತ ರೀತಿಯಲ್ಲಿ ಯಾವುದೇ ಪರಿಹಾರ ಘೋಷಣೆಯಾಗಿಲ್ಲ. ಕಾಫಿ ತೋಟಗಳನ್ನು ಪುನಶ್ಚೇತನಗೊಳಿಸಲು ಮತ್ತು ನಷ್ಟವನ್ನು ಸರಿದೂಗಿಸಲು ಕಾಫಿ ಮಂಡಳಿಯು ಸೂಚಿಸಿದಂತೆ ಪರಿಹಾರವನ್ನು ಬೆಳೆಗಾರರಿಗೆ ಘೋಷಿಸಬೇಕು. ಸಕಾ೯ರ ಮತ್ತು ಎನ್.ಡಿ.ಆರ್.ಎಫ್ ನಿಂದ ಬೆಳೆಗಾರರಿಗೆ ನೀಡುವ ಪರಿಹಾರ ಏಕರೂಪವಾಗಿರುವುದಿಲ್ಲ. ಆದ್ದರಿಂದ ಎಲ್ಲಾ ಬೆಳೆಗಾರರಿಗೆ ಸೂಕ್ತ ರೀತಿಯಲ್ಲಿ ಪರಿಹಾರವನ್ನು ನೀಡಬೇಕು.

6 ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ದೊರಕಬೇಕು.

ಕಾಫಿ ಬೆಳೆಯುವ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷವು ದಿನನಿತ್ಯ ನಡೆಯುತ್ತಿದೆ. ಅಪಾರ ಪ್ರಮಾಣದ ಆಸ್ತಿ-ಪಾಸ್ತಿ, ಜೀವಹಾನಿ, ಬೆಳೆಹಾನಿ ಮಾಡುತ್ತಿವೆ. ಆದ್ದರಿಂದ ಈ ಭಾಗದಲ್ಲಿ ನೆಲೆಸಿರುವ ಕಾಡಾನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಲು ಸಕಾ೯ರ ಕಾಯ೯ಪ್ರವ?ತ್ತವಾಗಬೇಕು.

7. ಸಹಕಾರಿ ಸಂಸ್ಥೆಗೆ ಹೆಚ್ಚು ಒತ್ತು ನೀಡುವುದು.
ಭಾರತೀಯ ಕಾಫಿ ಮಾರುಕಟ್ಟೆ ಸಹಕಾರ ಸಂಘ ನಿಯಮಿತ(ಕೋಮಾಕ್೯) ಸಂಸ್ಥೆಯ ಕಾರ್ಯಚಟುವಟಿಕೆಗಳು ನಡೆಯಲು ಆಥಿ೯ಕ ಸಹಕಾರವನ್ನು ರಾಜ್ಯ ಸಕಾ೯ರ ನೀಡಬೇಕು. ಈ ಸಂಸ್ಥೆಯ ಮೂಲ ಉದ್ದೇಶವೇ ಕಾಫಿಯನ್ನು ಮಾರುಕಟ್ಟೆಯಲ್ಲಿ ಪ್ರಚುರಪಡಿಸುವುದಾಗಿದೆ. 26 ವರ್ಷದ ಕಾಫಿಬೆಲೆ ಈಗ ಸಿಗುತ್ತಿದ್ದು, ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಆಥಿ೯ಕ ಸಂಕಷ್ಟದಲ್ಲಿ ಬೆಳೆಗಾರರಿದ್ದಾರೆ. ಕೋಮಾಕ್೯ ಸಂಸ್ಥೆಗೆ 20ಕೋಟಿ ರೂಗಳ ಅಗತ್ಯವಾದ ಹಣಕಾಸನ್ನು ಒದಗಿಸಿಕೊಟ್ಟು ಕಾಫಿ ಬೆಳೆಗಾರರು ತಾವು ಬೆಳೆದ ಕಾಫಿಗೆ ಉತ್ತಮ ಧರ ಸಿಗುವಂತೆ ಮಾಡಬೇಕು.

ರಾಜ್ಯದ ಎಲ್ಲಾ ರೈತರ ಸಮಸ್ಯೆಗಳನ್ನು ಸತತ ಮೂರು ಗಂಟೆಗಳ ಸಭೆಯ ಸಂದಭ೯ ಆಲಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ನೀರಾವರಿಗೆ ಹೆಚ್ಚಿನ ಆದ್ಯತೆ ಕೊಡುವ ನಿಟ್ಟಿನಲ್ಲಿ ಹತ್ತಿರದ ಜಲಾಶಯಗಳಿಂದ ಕೆರೆಕಟ್ಟೆಗಳಿಗೆ ನೀರನ್ನು ತುಂಬಿಸುವ ಕೆಲಸ ಮಾಡಲಾಗುವುದು. ಪಿ.ಎಲ್.ಡಿ., ಡಿಸಿಸಿ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಮದ್ಯಮಾವಧಿ ಹಾಗೂ ದೀಘಾ೯ವಧಿ ಸಾಲದ ಮೇಲಿನ ಬಡ್ಡಿ ಮತ್ತು ಸುಸ್ಥಿ ಬಡ್ಡಿಯನ್ನು ಮನ್ನಾ ಮಾಡುವ ನಿಧಾ೯ರ ಮಾಡಲಾಗಿದೆ. ಅತೀವೃಷ್ಟಿ ಹಾನಿಗೆ ಒಳಗಾದ ಪ್ರತಿಯೊಬ್ಬರಿಗೂ ಮನೆಯನ್ನು ನಿಮಿ೯ಸಿಕೊಡಲು ಹಾಗೂ ಬೆಳೆಹಾನಿಗೆ ಕೇಂದ್ರ ಸಕಾ೯ರದಿಂದ ಪರಿಹಾರ ನೀಡಲಾಗುತ್ತಿದ್ದ ಹಣಕ್ಕೆ ರಾಜ್ಯ ಸಕಾ೯ರದಿಂದ ಹತ್ತು ಸಾವಿರ ರೂಗಳನ್ನು ಕೊಡುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಕನಾ೯ಟಕ ಬೆಳೆಗಾರರ ಒಕ್ಕೂಟವು ಕಾಫಿ ಬೆಳೆಗಾರರ ಹಿತದೃಷ್ಟಿ ಯಿಂದ ನೀಡಿರುವ ಹಲವಾರು ಮಹತ್ವದ ಬೇಡಿಕೆಗಳ ಬಗ್ಗೆ ಕೂಲಕುಶವಾಗಿ ಪರಿಶೀಲಿಸಿ, ರೈತರ ಪರವಾಗಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು ಎಂದು ಕನಾ೯ಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್, ಪ್ರಧಾನ ಕಾರ್ಯದಶಿ೯ ಮುರಳೀಧರ್ ಎಸ್ ಬಕ್ಕರವಳ್ಳಿ ತಿಳಿಸಿದ್ದಾರೆ.

ಈ ಸಭೆಯಲ್ಲಿ ಕನಾ೯ಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್, ಪ್ರಧಾನ ಕಾರ್ಯದಶಿ೯ ಮುರಳೀಧರ್ ಎಸ್.ಬಕ್ಕರವಳ್ಳಿ, ಉಪಾಧ್ಯಕ್ಷ ಎನ್.ಬಿ.ಉದಯ್ ಕುಮಾರ್, ಸಂಘಟನಾ ಕಾರ್ಯದಶಿ೯ ಹೆಚ್.ಹೆಚ್.ಉದಯ್,ಕೋಮಾಕ್೯ ನ ಮಾಜಿ ಅಧ್ಯಕ್ಷ ಡಿ.ಎಸ್.ರಘು ಪಾಲ್ಗೊಂಡಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English