ರಾಣಿಪುರ : ಪವಿತ್ರ ಪರಮ ಪ್ರಸಾದದ ಮೆರವಣಿಗೆ

4:59 PM, Monday, February 17th, 2020
Share
1 Star2 Stars3 Stars4 Stars5 Stars
(No Ratings Yet)
Loading...

meravanige

ಮಂಗಳೂರು : ಮೇರಿ ವಿಶ್ವ ಮಾತೆ ದೇವಾಲಯ ರಾಣಿಪುರದ ವಾರ್ಷಿಕ ಮಹೋತ್ಸವದ ಅಂಗವಾಗಿ ತಾರೀಕು 16ರಂದು ಸಂತ ಅಂತೊನಿಯವರ ಪ್ರಾಥಾನಾಲಯ ರಾಣಿಪುರ ಉಳಿಯದಿಂದ ಸುಮಾರು ಎರಡೂವರೆ ಕೀ.ಮೀ ದೂರದ ಮೇರಿ ವಿಶ್ವ ಮಾತೆ ದೇವಾಲಯ ರಾಣಿಪುರಕ್ಕೆ ಪವಿತ್ರ ಪರಮ ಪ್ರಸಾದದ ಮೆರವಣಿಗೆಯು ಭಕ್ತಿ ಗೀತೆಗಳು ಹಾಗೂ ಬ್ಯಾಂಡ್ ವಾದ್ಯದ ಮೂಲಕ ಭಕ್ತಾದಿಗಳು ನಡೆದು ಕೊಂಡು ಬಂದು ಭಕ್ತಿಪೂರ್ವಕವಾಗಿ ನಡೆಯಿತು.

ದೇವಾಲಯದಲ್ಲಿ ಪರಮ ಪ್ರಸಾದದ ಆಶೀರ್ವಚನದ ನಂತರ ವಾರ್ಷಿಕ ಮಹೋತ್ಸವಕ್ಕೆ ಸಹಾಯ ನೀಡಿದ ಭಕ್ತಾಧಿಗಳಿಗೆ ಮೇಣದ ಬತ್ತಿಯನ್ನು ನೀಡಿ ಗೌರವಿಸಲಾಯಿತು. ಆ ನಂತರ ರಾಣಿಪುರ ದೇವಾಲಯದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಲಾಯಿತು.

meravanige

ಪ್ರಧಾನಾ ಧರ್ಮಗುರುಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಜುಡಿಶೀಯಲ್ ವಿಕಾರ್ ಅತೀ ನಿಂದನೀಯ ವಾಲ್ಟರ್ ಡಿ ಮೆಲ್ಲೊ ತಮ್ಮ ಪ್ರವಚನದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಧರ್ಮಕ್ಷೇತ್ರದ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ರಾಣಿಪುರ ಧರ್ಮಕ್ಷೇತ್ರದ ಗುರುಗಳಾದ ವಂದನೀಯ ಸಂತೋಷ್ ಡಿಸೋಜ, ಋಷಿವನದ ಧರ್ಮಗುರುಗಳಾದ ವಂದನೀಯ ಎಲಾಯಸ್, ವಂದನೀಯ ಆಲ್ವಿಟೊ,ಹಾಗೂ ಡೀಕನ್ ವಿಲಿಯಂ ಡಿ ಸೋಜ ಬಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಪರಮ ಪ್ರಸಾದದ ಮೆರವಣಿಗೆ ಹಾಗೂ ವಾರ್ಷಿಕ ಮಹೋತ್ಸವಕ್ಕೆ ಸಹಕಾರ ನೀಡಿದ ಎಲ್ಲರನ್ನೂ ವಂದನೀಯ ಸಂತೋಷ್ ಡಿ ಸೋಜ ಸ್ಮರಿಸಿದರು.

ಬಲಿಪೂಜೆಯ ನಂತರ ಆಕರ್ಷೀಕ ಸುಡು ಮುದ್ದು ಸುಡುವ ಕಾರ್ಯಕ್ರಮ ನಡೆಯಿತು.ವಾರ್ಷಿಕ ಮಹೋತ್ಸವವು 23/02/2020 ರಂದು 10 ಘಂಟೆಗೆ ಅದ್ಧೂರಿಯಾಗಿ ನಡೆಯಲಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English