ಮೂಡುಬಿದಿರೆ : ಆಳ್ವಾಸ್ ಪದವಿ ಕಾಲೇಜಿನ ಮಾನವಿಕ ವಿಭಾಗದ ಓಶಿಯನಸ್-2020 ಫೆಸ್ಟ್‌ನ ಪೂರ್ವಭಾವಿಯಾಗಿ ಆದಿತ್ಯವಾರ ಇಲ್ಲಿನ ಸ್ವರಾಜ್ಯ ಮೈದಾನದಿಂದ ಆಲಂಗಾರಿನವರೆಗಿನ ರಸ್ತೆಯ ಬದಿಯಲ್ಲಿ ವಿಶೇಷ ’ಪ್ಲಾಗಿಂಗ್’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಾನವಿಕ ವಿಭಾಗದ 150 ವಿದ್ಯಾರ್ಥಿಗಳು ಬೆಳಿಗ್ಗೆ ಏಳು ಗಂಟೆಗೆ ಸ್ವರಾಜ್ಯ ಮೈದಾನದಿಂದ ರಸ್ತೆಯ ಎರಡೂ ಬದಿಯ ಪ್ಲಾಸ್ಟಿಕ್ ಕಸಗಳನ್ನು ಚೀಲಗಳಲ್ಲಿ ತುಂಬಿ ಸ್ವಚ್ಛಗೊಳಿಸಿದರು. ಆರೋಗ್ಯಕ್ಕಾಗಿ ಜಾಗಿಂಗ್, ಸ್ವಚ್ಛತೆಗಾಗಿ ಪ್ಲಾಗಿಂಗ್ ಎಂಬ ಘೋಷವನ್ನಿರಿಸಿಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮೂಡುಬಿದಿರೆ ಪುರಸಭೆಯವರು ವಿದ್ಯಾರ್ಥಿಗಳಿಗೆ ಕಸ ವಿಲೇವಾರಿಯಲ್ಲಿ ಸಹಕರಿಸಿದರು. ರೋಟರಿ ಕ್ಲಬ್ ವತಿಯಿಂದ ಪ್ಲಾಗಿಂಗ್ ಗೆ ಅಗತ್ಯವಿದ್ದ ಗ್ಲವ್ಸ್ ಮತ್ತು ಚೀಲಗಳನ್ನು ನೀಡಲಾಯಿತು.
ಪ್ಲಾಂಗಿಂಗ್ ನಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ ಎಸ್, ಸಮಾಜ ಶಾಸ್ತ್ರ ವಿಭಾಗ ಮುಖ್ಯಸ್ಥ ಚಂದ್ರಶೇಖರ್ ಮಯ್ಯ ಭಾಗವಹಿಸಿದ್ದರು.
Click this button or press Ctrl+G to toggle between Kannada and English