ಉತ್ತರಪ್ರದೇಶ : ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಒಂದು ದಿನದ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕೈಗಾಡಿ ತಳ್ಳುವ ವ್ಯಕ್ತಿ ಮಂಗಲ್ ಕೇವಾಟ್ ಅವರನ್ನು ಭೇಟಿಯಾಗಿದ್ದಾರೆ. ಕೇವಾಟ್ ತಮ್ಮ ಮಗಳ ಮದುವೆಯ ಆಹ್ವಾನ ಪತ್ರಿಕೆಯನ್ನು ಪ್ರಧಾನಿಗೆ ಕಳುಹಿಸಿಕೊಟ್ಟಿದ್ದ ಹಿನ್ನೆಲೆಯಲ್ಲಿ ಭೇಟಿಯಾಗಿರುವುದಾಗಿ ವರದಿ ತಿಳಿಸಿದೆ.
ಮಂಗಲ್ ಕೇವಾಟ್ ಅವರ ಆರೋಗ್ಯ ಹಾಗೂ ಕುಟುಂಬದ ಬಗ್ಗೆ ಕುಶಲೋಪರಿ ವಿಚಾರಿಸಿದ ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ್ ಅಭಿಯಾನಕ್ಕೆ ಕೇವಾಟ್ ನೀಡಿದ ಕೊಡುಗೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನದಿಂದ ಪ್ರೇರಣೆಗೊಂಡು ತನ್ನ ಗ್ರಾಮದಲ್ಲಿ ಹರಿಯುವ ಗಂಗಾನದಿ ಪಾತ್ರವನ್ನು ಕೇವಾಟ್ ಸ್ವಚ್ಛಗೊಳಿಸಿದ್ದರು. ನಾವು ಮಗಳ ಆಹ್ವಾನ ಪತ್ರಿಕೆಯನ್ನು ಮೊದಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದು.
ನಂತರ ಕೇವಾಟ್ ಖುದ್ದು ದಿಲ್ಲಿಯ ಪ್ರಧಾನಮಂತ್ರಿ ಕಚೇರಿಯ ತೆರಳಿ ಮಗಳ ಆಹ್ವಾನ ಪತ್ರಿಕೆ ಕೊಟ್ಟು ಬಂದಿದ್ದರು. ಫೆ.8ರಂದು ಪ್ರಧಾನಿ ಮೋದಿ ಅವರಿಂದ ಅಭಿನಂದನಾ ಪತ್ರ ಬಂದಿದ್ದು, ಇದರಿಂದ ನಮಗೆ ತುಂಬಾ ಸಂತಸವಾಗಿತ್ತು ಎಂದು ಮಂಗಲ್ ಕೇವಾಟ್ ಎಎನ್ ಐ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಫೆ.16ರಂದು ವಾರಣಾಸಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದ ವೇಳೆ ನಮ್ಮನ್ನು ಖುದ್ದಾಗಿ ಮಾತನಾಡಿಸಿರುವುದು ಮರೆಯಲಾರದ ಘಟನೆ ಎಂದು ಮಂಗಲ್ ಕೇವಾಟ್ ಪತ್ನಿ ರೇಣು ದೇವಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English