ಮಂಗಳೂರು : ಆರ್.ಟಿ.ಸಿ ಭೂ ವರ್ತನೆ ಪತ್ರ ಏಕ ವಿನ್ಯಾಸ, ನಗರ ಆಸ್ತಿ ಮಾಲಿಕತ್ವ ದಾಖಲೆ ಕಂದಾಯ ಇಲಾಖೆಯಲ್ಲಿನ ಪತ್ರಗಳಲ್ಲಿ ವ್ಯತ್ಯಾಸ ಮಾಡಿರುವ ಬೃಹತ್ ಮೋಸದ ಜಾಲ/ ಭೂ ಮಾಫಿಯಾ ಬಗ್ಗೆ ಸಮಗ್ರ ತನಿಖೆಗೆ ತುಳುನಾಡ ರಕ್ಷಣಾ ವೇದಿಕೆ ಯೋಗೀಶ್ ಶೆಟ್ಟಿ ಜಪ್ಪು ಕೇಂದ್ರ ಉಪನೋಂದಾವಣಾಧಿಕಾರಿ, ಮೂಡ ಆಯುಕ್ತರು, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರಿಗೆ ಮನವಿ ನೀಡಿ ಒತ್ತಾಯಿಸಿರುತ್ತಾರೆ.
ಈ ಬಗ್ಗೆ ಕೂಡಲೇ ಸಂಬಂಧ ಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಗರಾಭಿವೃದ್ಧಿ ಕಚೇರಿ, ತಾಲೂಕು ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಪತ್ರಿಕೆ ಹೇಳಿಕೆ ಮೂಲಕ ಎಚ್ಚರಿಸಿರುತ್ತಾರೆ.
Click this button or press Ctrl+G to toggle between Kannada and English