ಮಂಗಳೂರು : ಈಗಾಗಲೇ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ತುಳುವರು ನಿರಂತರ ಹೋರಾಟ ಮಾಡುತ್ತಾರೆ. ಅವರ ಹೋರಾಟಕ್ಕೆ ಕನ್ನಡಿಗರಾದ ನಾವೆಲ್ಲರೂ ಕೈಜೋಡಿಸಬೇಕು. ಈಗಾಗಲೇ ಕೇರಳ ಸರಕಾರವು ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ ಪಡುತ್ತಿದೆ.
ತುಳು ಕರ್ನಾಟಕದಲ್ಲಿ ಅಧಿಕೃತ ಭಾಷೆಯಾದರೆ ಭಾಷೆಗೆ ಸಿಕ್ಕುವ ಎಲ್ಲಾ ಸವಲತ್ತುಗಳು ಕರ್ನಾಟಕದ ಪಾಲಾಗುತ್ತದೆ. ಈ ಭಾಷೆಗೆ ಸಿಕ್ಕುವ ಆರ್ಥಿಕ ಬೆಂಬಲದಿಂದ ಕರ್ನಾಟಕದ ಸಾಹಿತಿಗಳಿಗೆ ಕಲಾವಿದರಿಗೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ನಮ್ಮ ಸಂಸ್ಕೃತಿ ಭಾಷೆ ಅನ್ಯರ ಪಾಲು ಆಗುವುದಕ್ಕಿಂತ ಮೊದಲು ರಾಜ್ಯ ಎಚ್ಚೆತ್ತುಕೊಳ್ಳಬೇಕು ಎಂದು ಖ್ಯಾತ ರಂಗನಿರ್ದೇಶಕ ಮಲ್ಲಿಕಾರ್ಜುನಯ್ಯ ಸ್ವಾಮಿ ಮಹಾಮನೆ ಅಭಿಪ್ರಾಯಪಟ್ಟರು.
ಅವರು ಆಗಸ್ಟ್ ತಿಂಗಳಲ್ಲಿ ಬೆಂಗಳೂರು ರಾಜಧಾನಿಯಲ್ಲಿ ತುಳುವರ್ಲ್ಡ್ ಮಂಗಳೂರು ಮತ್ತು ಸಂಭ್ರಮ ಬೆಂಗಳೂರು ಇವುಗಳ ಆಶ್ರಯದಲ್ಲಿ ನಡೆಯಲಿರುವ ತುಳು-ಕನ್ನಡ ಸ್ನೇಹ ಸಮ್ಮೇಳನದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜಗೋಪಾಲ ರೈ ಮಂಗಳೂರು ಡಾ. ಕೆಎನ್ ಅಡಿಗ,ಭಾಸ್ಕರ ಕಾಸರಗೋಡು, ವೇಣುಗೋಪಾಲ್ ಆಚಾರ್ಯ ಕಾಸರಗೋಡು, ಪುರುಷೋತ್ತಮ ಚೇಂಡ್ಲ, ಚಂದ್ರಹಾಸ ಎಸ್, ಎನ್ನೇಬಿ ಮೊಗ್ರಾಲ್ ಪುತ್ತೂರು, ರಾಮಚಂದ್ರ ಸೂರಂಬೈಲು,ರಾಜಾರಾಮ್ ಶೆಟ್ಟಿ ಉಪ್ಪಳ, ದಯಾನಂದ ಕೆಬಿ ಕುಂಬಳ, ವಿಜಯಕುಮಾರ್ ಕುಲಶೇಖರ, ಸುಂದರ್ ರಾಜ್ ರೈ, ಮಂಜುನಾಥ ಅಡಪ್ಪ, ಜಯಂತ್ ರಾವ್, ಉಷಾ ಬೆಂಗಳೂರು, ಸತೀಶ ಅಗಪಲ್, ಭರತ್ ಕರವೇ, ಆಶಾನಂದ ಕುಲಶೇಖರ, ಎಲ್ ಸುಧಾ ಬೆಂಗಳೂರು, ಚೆನ್ನಕೇಶವ ಮೂರ್ತಿ ಬೆಂಗಳೂರು, ಪದ ದೇವರಾಜ್, ಮಂಜುನಾಥ್ ಎನ್ ಬೆಂಗಳೂರು. ಮೊದಲಾದವರು ಉಪಸ್ಥಿತರಿದ್ದರು. ಸಂಭ್ರಮ ಬೆಂಗಳೂರು ಅಧ್ಯಕ್ಷ ಜೋಗಿಲ ಸಿದ್ದರಾಜು ಸ್ವಾಗತಿಸಿ, ತುಳುವರ್ಲ್ಡ್ ಅಧ್ಯಕ್ಷ ಡಾ. ರಾಜೇಶ್ ಆಳ್ವ ಬದಿಯಡ್ಕ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English