ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಘಟಕದ ಸ್ನೇಹ ಮಿಲನ

11:06 AM, Wednesday, February 19th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

vijaya-collage

ಮುಂಬಯಿ : ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾರ್ಥಿಗಳು ಮುಂಬಯಿ ಮಾತ್ರವಲ್ಲ ಪರಿಸರದ ಪೂನಾದಲ್ಲಿಯೂ ಅಧಿಕ ಸಂಖ್ಯೆಯಲ್ಲಿ ನೆಲೆಸಿದ್ದು ಅವರೆಲ್ಲರನ್ನೂ ಯವುದಾದರೂ ರೀತಿಯಲ್ಲಿ ಸಂಪರ್ಕಿಸಬೇಕಾಗಿದೆ. ಇಲ್ಲಿ 1970 ರಿಂದ 2015 ರ ತನಕದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ನಮ್ಮ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳನ್ನು ಇನ್ನೂ ಅಧಿಕ ಸಂಖ್ಯೆಯಲ್ಲಿ ಸಂಘಟಿಸೋಣ ಎಂದು ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಘಟಕದ ಅಧ್ಯಕ್ಷ ರಾದ ಆನಂದ ಶೆಟ್ಟಿ ನುಡಿದರು.

vijaya-collage

ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಘಟಕದ ವಾರ್ಷಿಕ ಸ್ನೇಹ ಮಿಲನ ೨೦೨೦ ಸಮಾರಂಭವು ಫೆ. ೧೫ ರಂದು ಸಂಜೆ ಕುರ್ಲಾ ಪೂರ್ವ ಭಂಟರ ಭವನ ಮುಂಬಯಿ ಇದರ ಅನೆಕ್ಸ್ ಸಭಾಗೃಹದಲ್ಲಿ ಜರಗಿದ್ದು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆನಂದ ಶೆಟ್ಟಿ ಯವರು ಮುಂಬಯಿ ಮಾತ್ರವಲ್ಲ ಪೂನಾದಲ್ಲಿನ ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿ ಗಳನ್ನು ಸಂಪರ್ಕಿಸಿ ಅಲ್ಲಿ ಸಭೆಯನ್ನು ಕರೆದು ನಮ್ಮ ಉದ್ದೇಶದ ಬಗ್ಗೆ ಮಾತನಾಡಲಿರುವೆವು. ಇಲ್ಲಿ ನೀವೆಲ್ಲರೂ ನಮ್ಮ ಕಾಲೇಜು, ನಮ್ಮ ಸಭೆಯಂತ ತಿಳಿದು ಆತ್ಮೀಯವಾಗಿ ಬಹಳ ಸಂಖ್ಯೆಯಲ್ಲಿ ಆಗಮಿಸಿದ್ದೀರಿ. ಇಲ್ಲಿ ನಾವು ಒಂದಾಗಿ ಸೇರಿದ್ದರಿಂದಾಗಿ ನಮ್ಮ ಕಾಲೇಜು ಬದುಕಿನ ನೆನಪು ಆಗುತ್ತಿದೆ. ಊರಿಗೆ ಹೋದಾಗಲೆಲ್ಲಾ ನಾನು ಕಾಲೇಜಿಗೆ ಹೋಗುತ್ತಿದ್ದ ಕಾರಣ ಕಾಲೇಜಿನ ಈಗಿನ ಪರಿಸ್ಥಿತಿಯ ಅರಿವಾಗುತ್ತಿದೆ. ಪ್ರಸಿದ್ದ ಶಿಕ್ಷಣ ಸಂಸ್ಥೆಯಾದ ನಮ್ಮ ಕಾಲೇಜನ್ನು ನಾವೆಲ್ಲರೂ ಸೇರಿ ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ. ಸುಮಾರು ನಾಲ್ಕು ವರ್ಷಗಳ ಹಿಂದೆ ವಿಜಯಾ ವಿದ್ಯಾ ನಿಧಿಯನ್ನು ಪ್ರಾರಂಭಿಸಿದ್ದು ಅದಕ್ಕೆ ಬಹಳ ಪ್ರೋತ್ಸಾಹ ಸಿಗುತ್ತಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಯಾಕೆಂದರೆ ನಮಗೆ ಇದು ಹಿಂತಿರುಗಿಸುವ ಸಮಯ. ಮುಂದಿನ ಪೀಳಿಗೆಗೆ ಇದು ಪ್ರಯೋಜನಕಾರಿಯದೀತು ಎಂದರು.

vijaya-collage

ಸಭಾ ಕಾರ್ಯಕ್ರಮವನ್ನು ವೇದಿಕೆಯಲ್ಲಿರುವ ಎಲ್ಲಾ ಗಣ್ಯರ ಉಪಸ್ಥಿತಿಯಲ್ಲಿ ಗೌರವ ಅಧ್ಯಕ್ಷರಾದ ಸಿಎ ಸೋಮನಾಥ ಕುಂದರ್ ದೀಪ ಬೆಳಗಿಸಿ ಉದ್ಘಾಟಿಸಿ ಎಲ್ಲರನ್ನು ಸ್ವಾಗತಿಸುತ್ತಾ ಪ್ರಾಯಶ ಈ ಸಂಘದ ಗೌರವ ಅಧ್ಯಕ್ಷನಾಗಿ ನನ್ನ ಕೊನೆಯ ಬಾಷಣವಾಗಿರಬಹುದು. ಯಾಕೆಂದರೆ ಸದ್ಯದಲ್ಲೇ ನನ್ನ ಅವಧಿ ಮುಗಿಯಲಿದೆ. ನನ್ನ ಅವಧಿಯಲ್ಲಿ ಅಧ್ಯಕ್ಷರಾದ ಆನಂದ ಶೆಟ್ಟಿ ಹಾಗೂ ಇತರ ಎಲ್ಲರಿಂದಲೂ ನನಗೆ ಸಹಕಾರ ದೊರಕಿದೆ. ನನಗೆ ಐಕಳ ಹರೀಶ್ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿಯವರು ಮಾಡುವ ಸಮಾಜ ಸೇವೆಯನ್ನು ಮಾಡುವ ರೀತಿಯನ್ನು ನೋಡುವ ಭಾಗ್ಯ ದೊರಕಿದೆ. ನಮ್ಮ ಕಾಲದಲ್ಲಿ ನಮ್ಮ ಹಿರಿಯರು ನಮಗೆ ಸಹಕರಿಸಿದ್ದು ನಾವು ಇದನ್ನು ಮುಂದುವರಿಸಬೇಕು. ವಿದ್ಯಾನಿಧಿಗೆ ಸಹಕರಿಸದವರು ಸಾಧ್ಯವಾದಷ್ಟು ಸಹಕರಿಸಬೇಕೆಂದರು.

vijaya-collage

ವಿಜಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ನಾರಾಯಣ ಪೂಜಾರಿಯವರು ಮಾತನಾಡಿ ನಾನು ಅಧ್ಯಾಪಕನಾಗಿ ಈ ಶಿಕ್ಷಣ ಸಂಸ್ಥೆಗೆ ಸೇರಿದ್ದು ಇದೀಗ ನಮ್ಮ ಹಳೆ ವಿದ್ಯಾರ್ಥಿ ಗಳು ಇಲ್ಲಿ ಗಾಗಮಿಸಿ ಉತ್ತಮ ಸಾಧಕರಾಗಿದ್ದಾರೆ ಮಾತ್ರವಲ್ಲದೆ ಅಂತಹ ಸಾಧಕರು ಸಾಮ್ರಾಜ್ಯವನ್ನು ಕಟ್ಟಿದ್ದಾರೆ, ಸಂಸ್ಥೆಯ ಹಿರಿಮೆ ಗರಿಮೆ ಆ ಸಂಸ್ಥೆಯ ಕಟ್ಟಡದ ಮೇಲೆ ಹೊಂದಿಲ್ಲ ಹೊರತು ಆ ಕಟ್ಟಡದಿಂದ ಹೊರಬಂದ ವಿದ್ಯಾರ್ಥಿಗಳು ಮೇಲೆ ಹೊಂದಿದೆ ಎಂದರು.

vijaya-collage

ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾರ್ಥಿ ಸಂಘ ದ ಅಧ್ಯಕ್ಷರಾದ ಸುಮಲತಾ ಸುವರ್ಣ ರವರು ಮಾತನಾಡಿ ನಮ್ಮಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಭೆಯಲ್ಲಿ ಕಡಿಮೆ ಜನ ಸೇರುತ್ತಿದ್ದು ಮುಂಬಯಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು ಸೇರಿದ್ದು ಸಂತೋಷದ ಸಂಗತಿಯಾಗಿದೆ. ಇಲ್ಲಿಗೆ ಆಗಮಿಸಿದ ಹಳೆ ವಿದ್ಯಾರ್ಥಿ ಗಳು ಉನ್ನತ ಮಟ್ಟದಲ್ಲಿದ್ದು ಈಗಿನ ವಿದ್ಯಾರ್ಥಿಗಳಿಗೆ ಸಹಕರಿಸುತಿರುವುದು ಅಭಿನಂದನೀಯ. ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಅವರಿಗೆ ಆಧುನಿಕ ಶಿಕ್ಷಣ ದೊರೆಯುವಂತಾಗಲಿ ಎನ್ನುತ್ತಾ ಕಾಲೇಜಿನ ವಾರ್ಷಿಕ ಸಮಾರಂಭಕ್ಕೆ ಎಲ್ಲರನ್ನು ಆಮಂತ್ರಿಸಿದರು.

ವಿಜಯ ಕಾಲೇಜು ಮೂಲ್ಕಿ ಗರ್ವನಿಂಗ್ ಕೌನ್ಸಿಲಿಂಗ್‍ನ ಕಾರ್ಯಾಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ಯವರು ಮಾತನಾಡುತ್ತ ನಾನು ಕೂಡಾ ವಿಜಯ ಕಾಲೇಜಿಗೆ ಬರುವಾಗ ಮುಗ್ದನಂತಿದ್ದೆ ನಾನು ಹೋಸ್ಟೇಲಲ್ಲಿ ಇದ್ದು ಆಗ ನನಗೆ ಗುರುಗಳಂತಿದ್ದವರು ಐಕಳ ಮತ್ತು ಕರ್ನಿರೆ ಎನ್ನುತ್ತಾ ಅವರೊಂದಿಗಿನ ಕಾಲೇಜು ಜೀವನದ ಅನುಭವವನ್ನು ಹಾಸ್ಯಮಯವಾಗಿ ಅಂಚಿಕೊಂಡರು. ವಿಜಯ ಕಾಲೇಜು ಅಭಿವೃದ್ದಿಯ ಪಥದಲ್ಲಿದೆ. ಊರಿಗೆ ಬಂದಲ್ಲಿ ನೀವೆಲ್ಲರೂ ಕಾಲೇಜಿಗೆ ಬಂದು ಮಕ್ಕಳಿಗೆ ಸಹಕರಿ ಅವರಿಗೆ ಮಾರ್ಗದರ್ಶನ ನೀಡಬೇಕೆಂದು ವಿನಂತಿಸಿದರು.

ಗೌರವ ಅತಿಥಿಯಾಗಿ ಆಗಮಿಸಿದ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ಉಪ ಕಾರ್ಯಧ್ಯಕ್ಷ ಶಿರ್ವಾ ನಿತ್ಯಾನಂದ ಹೆಗ್ಡೆ, ಯವರು ಮಾತನಾಡಿ ಈ ಸಂಘದ ಸ್ಥಾಪನೆ ಬಗ್ಗೆ ತಿಳಿಸಿದರು ಮಾತ್ರವಲ್ಲದೆ ಕಾಲೇಜಿನ ಮಕ್ಕಳಿಗಾಗಿ ನಿಧಿ ಸಂಗ್ರಹಿಸುವುದು ನಮಗೆ ಕಷ್ಟದ ಕೆಲಸವಲ್ಲ. ಕಟ್ಟಡಕ್ಕೆ ಸಹಕರಿಸದಿದ್ದರೂ ಮಕ್ಕಳಿಗಾದರೂ ನಾವು ಸಹಕರಿಸೋಣ ಇನ್ನು ಹೊಸ ಮುಖಗಳನ್ನು ಸಮಿತಿಗೆ ಸೇರಿಸುದರ ಮೂಲಕ ನಾವು ಅವರಿಗೆ ಮಾರ್ಗದರ್ಶಕರಾಗಿ ಉಳಿಯಬಹುದು ಎಂದರು.

ನಿವೃತ್ತ ಪ್ರಾಧ್ಯಾಪಕ ಜಯರಂಗ ತೆಲ್ಲಾರ್, ವಿಜಯ ಪ್ರೀ ಯುನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲರಾದ ಪಮೀದ ಬೇಗಂ ಮತ್ತು ಪ್ರಾಧ್ಯಾಪಕಿ ಡಾ. ವಿಜಯ ಕುಮಾರಿ ಇವರಿಗೆ ಗುರುವಂದನೆ ಕಾರ್ಯಕ್ರಮ ನಡಿದಿದ್ದು ರತ್ನಾಕರ ಸಾಲ್ಯಾನ್, ಸರಿತ ರಾವ್ ಮತ್ತು ಪುಷ್ಪ ಶೆಟ್ಟಿಯವರು ಪರಿಚಯಿಸಿದರು.

vijaya-collage

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಘದ ಹಳೆವಿದ್ಯಾರ್ಥಿಗಳಾದ ಬಂಟ್ಸ್ ಸಂಘ ಮುಂಬಯಿ ಯ ಜೊತೆ ಕೋಶಾಧಿಕಾರಿ ಐಕಳ ಗುಣಪಾಲ ಶೆಟ್ಟಿ, ಮೋಡೆಲ್ ಕೊ ಆಪರೇಟಿವ ಬ್ಯಾಂಕಿನ ನಿರ್ದೇಶಕ ಲಾರೆನ್ಸ್ ಎಲ್ ಡಿ. ಸೋಜಾ, ಬಂಟ್ಸ್ ಸಂಘ ಮುಂಬಯಿ ಕೋಶಾಧಿಕಾರಿ ಪ್ರವೀಣ್ ಬಿ ಶೆಟ್ಟಿ ಮತ್ತು ಬಿಎಅರ್ ಸಿ ಯ ಹಿರಿಯ ವಿಜ್ನಾನಿ ಪ್ರಪುಲ್ಲ ಸತೀಷ್ ಶೆಣೈ ವದ್ಯಾರ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಹರೀಶ್ ಹೆಜ್ಮಾಡಿ, ದಿನೇಶ್ ಸಿ. ಸಾಲ್ಯಾನ್, ಭಾಸ್ಕರ ಶೆಟ್ಟಿ ಮತ್ತು ಪ್ರಸಾದ್ ಆರ್ ಭಂಡಾರಿ ಯವರು ವಾಚಿಸಿದರು.

ಮೀರಾರೋಡ್ ಅಮಿತಾ ಕಲಾ ನಾಟ್ಯ ಮಂದಿರದ ಕಲಾವಿದರಿಂದ ಮತ್ತು ಹಳೆವಿದ್ಯಾರ್ಥಿಗಳ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರವಲ್ಲದ ಕಾಲೇಜಿನ ಹಳೆ ವಿದ್ಯಾರ್ಥಿ ರಾಜ್ ಕುಮಾರ್ ಕಾರ್ನಾಡ್ ಇವರಿಂದ ಕನ್ನಡ ಹಾಗೂ ತುಳು ಸಂಗೀತ ಹಾಡುಗಳಿಂದ ಮನರಂಜಿಸಿದರು.

ಈ ಸಂಧರ್ಭದಲ್ಲಿ ಹಳೆವಿದ್ಯಾರ್ಥಿಗಳ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಗಿದ್ದು ಸಂಘದ ಉಪಾಧ್ಯಕ್ಷ ವಾಸುದೇವ ಎಂ ಸಾಲ್ಯಾನ್ ಮಕ್ಕಳ ಯಾದಿಯನ್ನು ಓದಿ ಹೇಳಿದರು. ಕೋಶಾಧಿಕಾರಿ ಅಶೋಕ ದೇವಾಡಿಗ ಅವರು ಸಂಘದ ಲೆಕ್ಕ ಪತ್ರವನ್ನು ವಾಚಿಸಿದರು. ಕಾಲೇಜಿನ ಹಳೆ ವಿದ್ಯಾರ್ಥಿನಿ ಚಿತ್ರ ಗಣೇಶ್ ಶೆಟ್ಟಿ ಪ್ರಾರ್ಥನೆಗೈದರು. ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಕಾರ್ಯದರ್ಶಿ ನ್ಯಾ. ಶೇಖರ ಎಸ್ ಭಂಡಾರಿಯವರು ಸಂಘದ ವಾರ್ಷಿಕ ವರದಿಯನ್ನು ಓದಿ ಎಲ್ಲರಿಗೂ ಅಬಾರ ಮನ್ನಿಸಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English