ಎನ್‌ಪಿಆರ್‌ಗೆ ಮಹಾರಾಷ್ಟ್ರದಲ್ಲಿ ಅವಕಾಶ : ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ

1:02 PM, Wednesday, February 19th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

maharashtra

ಮುಂಬೈ : ಎಲ್ಗಾರ್‌ ಪರಿಷತ್‌ ತನಿಖೆಯನ್ನು ಎನ್‌ಐಎಗೆ ವರ್ಗಾಯಿರಿಸುವುದಕ್ಕೆ ಕಾಂಗ್ರೆಸ್‌, ಎನ್‌ಸಿಪಿ ಆಕ್ಷೇಪ ಮಾಡಿರುವಂತೆಯೇ, ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಯಾರೂ ಭಯಪಡಬೇಕಾಗಿಲ್ಲ ಎಂದಿದ್ದಾರೆ. ಇದರ ಜತೆಗೆ ರಾಷ್ಟ್ರೀಯ ಜನ ಸಂಖ್ಯಾ ನೋಂದಣಿ (ಎನ್‌ಪಿಆರ್‌) ಅರ್ಜಿ ಯಲ್ಲಿರುವ ಅಂಶಗಳನ್ನು ತಾವೇ ಖುದ್ದು ಪರಿಶೀಲಿಸುವುದಾಗಿ ಹೇಳಿಕೊಂಡಿದ್ದಾರೆ.

ಸಿಂಧೂದುರ್ಗದಲ್ಲಿ ಮಾತನಾಡಿದ ಅವರು, ಸಿಎಎ, ಎನ್‌ಆರ್‌ಸಿ ಎರಡು ಪ್ರತ್ಯೇಕ ವಿಚಾರಗಳು. ಎನ್‌ಪಿಆರ್‌ ಮೂರನೇ ವಿಚಾರ. ಎನ್‌ಪಿಆರ್‌ ಜಾರಿಗೆ ಮಹಾರಾಷ್ಟ್ರ ಅವಕಾಶ ಮಾಡಿಕೊಡಲಿದೆ ಎಂದಿದ್ದಾರೆ. ಆದರೆ ಎನ್‌ಆರ್‌ಸಿಗೆ ಅವಕಾಶವಿಲ್ಲ. ಏಕೆಂದರೆ ಅದರಿಂದ ಹಿಂದೂಗಳಿಗೆ, ಮುಸ್ಲಿಂ ಸೇರಿದಂತೆ ಎಲ್ಲರಿಗೂ ತೊಂದರೆಯಾಗಲಿದೆ ಎಂದು ಹೇಳಿದ್ದಾರೆ.

ಮತ್ತೂಂದೆಡೆ ಎಲ್ಗಾರ್‌ ಪರಿಷತ್‌ ತನಿಖೆಯನ್ನು ಕೇಂದ್ರಕ್ಕೆ ನೀಡುವುದಿಲ್ಲ ಎಂದೂ ಉದ್ಧವ್‌ ಹೇಳಿದ್ದಾರೆ. ಇತ್ತೀಚೆಗಷ್ಟೇ ಪುಣೆಯ ಕೋರ್ಟ್‌ ಈ ಬಗ್ಗೆ ಆದೇಶ ನೀಡಿತ್ತು. ಎಲ್ಗಾರ್‌ ಪರಿಷತ್‌ ಕೇಸಿನಲ್ಲಿ ದೇವೇಂದ್ರ ಫ‌ಡ್ನವಿಸ್‌ ನೇತೃತ್ವದ ಸರಕಾರ ಪೊಲೀಸ್‌ ಇಲಾಖೆಯನ್ನು ದುರುಪಯೋಗಪಡಿಸಿಕೊಂಡಿತ್ತು ಎಂದು ಶರದ್‌ ಪವಾರ್‌ ಆರೋಪಿಸಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English