ಜಮ್ಮು -ಕಾಶ್ಮೀರದ ತ್ರಾಲ್​ನಲ್ಲಿ ಮೂವರು ಉಗ್ರರ ಹತ್ಯೆ

2:13 PM, Wednesday, February 19th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

 

bhadrata-pade

ಶ್ರೀನಗರ : ಜಮ್ಮು-ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದ್ದು, ಬುಧವಾರ ನಸುಕಿನಲ್ಲಿ ತ್ರಾಲ್ ನಲ್ಲಿ ನಡೆದ ಎನ್ಕೌಂಟರ್ಗೆ ಮೂವರು ಉಗ್ರರು ಬಲಿಯಾಗಿದ್ದಾರೆ.

ಹತರಾದ ಉಗ್ರರು ಅನ್ಸಾರ್ ಘಜ್ವಾ ಉಲ್ ಹಿಂದ್ ಸಂಘಟನೆಗೆ ಸೇರಿದವರಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಾಗಿದೆ ಎಂದು ಕಾಶ್ಮೀರ ವಲಯದ ಪೊಲೀಸರು ಟ್ವೀಟ್ ಮಾಡಿದ್ದರು.

ಹತರನ್ನು ಜಂಗೀರ್ ರಫೀಕ್ ವಾನಿ, ರಾಜಾ ಉಮರ್ ಮಕ್ಬೂಲ್ ಭಟ್, ಉಜೈರ್ ಆಮಿನ್ ಭಟ್ ಎಂದು ಗುರುತಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English