ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ ! ಪಾದಯಾತ್ರಿಗಳ ಗಡಣ

9:54 AM, Thursday, February 20th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

ujire

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಇದೇ 21 ರಂದು ಶುಕ್ರವಾರ ಇಡೀ ರಾತ್ರಿ ಶಿವನಾಮ ಪಂಚಾಕ್ಷರಿ ಪಠಣ, ಭಜನೆ, ಪ್ರಾರ್ಥನೆ, ಜಪ,ತಪ, ಧ್ಯಾನದೊಂದಿಗೆ ಜಾಗರಣೆ ನಡೆಯಲಿದೆ.

ಶುಕ್ರವಾರ ಸಂಜೆಗಂಟೆ 5.30 ರಿಂದಇಡೀರಾತ್ರಿ ನಾಲ್ಕು ಜಾವಗಳಲ್ಲಿ ಭಕ್ತರುದೇವರದರ್ಶನ ಮಾಡಿ ಶತರುದ್ರಾಭಿಷೇಕ ಸೇವೆ ಸಲ್ಲಿಸುವರು.
ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಮೊದಲಾದ ಕಡೆಗಳಿಂದ ಇಪ್ಪತ್ತೈದು ಸಾವಿರಕ್ಕೂ ಮಿಕ್ಕಿ ಪಾದಯಾತ್ರಿಗಳು ಶುಕ್ರವಾರ ಬೆಳಿಗ್ಯೆ ಧರ್ಮಸ್ಥಳ ತಲುಪುವರು.

ujire

ಹತ್ತು ಸಾವಿರಕ್ಕೂ ಮಿಕ್ಕಿ ಪಾದಯಾತ್ರಿಗಳು ಈಗಾಗಲೆ ಮುಂಡಾಜೆ, ಚಾರ್ಮಾಡಿ, ಪ್ರದೇಶದಲ್ಲಿ ಬೀಡು ಬಿಟ್ಟಿದ್ದಾರೆ. ಗುರುವಾರ ಪಾದಯಾತ್ರಿಗಳಿಗೆ ಉಜಿರೆಯಲ್ಲಿರುವಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳಲ್ಲಿ ವಸತಿ ಸೌಲಭ್ಯಕಲ್ಪಿಸಲಾಗಿದೆ.

ಶಿವರಾತ್ರಿಗೆ 67 ತಂಡಗಳಲ್ಲಿ 16,500 ಮಂದಿ ಪಾದಯಾತ್ರಿಗಳು ಬರುವುದಾಗಿ ಈಗಾಗಲೆ ಧರ್ಮಸ್ಥಳಕ್ಕೆ ಪತ್ರ ಮೂಲಕ ಖಚಿತ ಪಡಿಸಿದ್ದಾರೆ.

ujire

ಇದೇ 20ರ ವರೆಗೆ ಪಾದಯಾತ್ರಿಗಳು ತಂಗುವ ಶಾಲೆ, ವಸತಿಛತ್ರ ಹಾಗೂ ಭಜನಾ ಮಂದಿರಗಳಲ್ಲಿ ಪ್ರತಿ ದಿನ ಸಂಜೆ6.30 ರಿಂದ 8.30ರ ವರೆಗೆಧಾರ್ಮಿಕಉಪನ್ಯಾಸ, ಭಜನೆ, ಪ್ರಾರ್ಥನೆ, ಧ್ಯಾನ ಮೊದಲಾದ ಸತ್ಸಂಗ ಕಾರ್ಯಕ್ರಮಗಳನ್ನು ಧರ್ಮಸ್ಥಳದ ಭಜನಾ ಪರಿಷತ್ ವತಿಯಿಂದಆಯೋಜಿಸಲಾಗಿದೆ.

ಎಸ್.ಡಿ.ಎಂ.ಸಂಚಾರಿಆಸ್ಪತ್ರೆ ವತಿಯಿಂದ ಪಾದಯಾತ್ರಿಗಳಿಗೆ ಉಚಿತ ವೈದ್ಯಕೀಯ ಶುಶ್ರೂಷೆ ನೀಡಲಾಗುತ್ತಿದೆ.

ujire

ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದಲ್ಲಿ ಪೊಲೀಸ್ ಹೊರಠಾಣೆ, ಸ್ವಾಗತಕಚೇರಿ, ಉಚಿತ ಪಾನೀಯ ವ್ಯವಸ್ಥೆ, ಉಚಿತ ವೈದ್ಯಕೀಯಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.

ರಾಜ್ಯದ ವಿವಿಧ ಭಾಗಗಳಿಂದ ಕೆ.ಎಸ್.ಆರ್.ಟಿ.ಸಿ. ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.

ujire

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English