ಕಮಲ್​ ಹಾಸನ್​ ಅಭಿನಯದ ‘ಇಂಡಿಯನ್​ 2’ ಸಿನಿಮಾದ ಸೆಟ್​ನಲ್ಲಿ ಅವಘಡ : ಮೂವರ ಸಾವು

11:12 AM, Thursday, February 20th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

kamal-hasan

ಚೆನ್ನೈ : ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಸಿನಿಮಾದ ಸೆಟ್ನಲ್ಲಿ ಸಂಭವಿಸಿದ ಅವಘಡದಿಂದ ಮೂವರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಚೆನ್ನೈನಲ್ಲಿ ‘ಇಂಡಿಯನ್ 2’ ಸೆಟ್ ನಿರ್ಮಾಣ ಮಾಡಲಾಗುತ್ತಿತ್ತು. ಸೆಟ್ ನಿರ್ಮಾಣಕ್ಕೆ ಬಳಕೆಯಾಗುತ್ತಿದ್ದ ಕ್ರೇನ್ ಕುಸಿದಿದೆ. ಕ್ರೇನ್ ಅಡಿಯಲ್ಲಿ ಸಿಕ್ಕ ಸಹಾಯಕ ನಿರ್ದೇಶಕ ಕೃಷ್ಣ, ಸಹಾಯಕ ಕಲಾ ನಿರ್ದೇಶಕ ಚಂದ್ರನ್ ಹಾಗೂ ನಿರ್ಮಾಣ ಸಹಾಯಕ ಮಧು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಮಲ್ ಹಾಸನ್, ಟ್ವಿಟ್ಟರ್ನಲ್ಲಿ ಈ ಬಗ್ಗೆ ಸಂತಾಪ ಸೂಚಿಸಿದ್ದಾರೆ. “ನಾನು ಸಾಕಷ್ಟು ಅಪಘಾತಗಳನ್ನು ಕಂಡಿದ್ದೇನೆ ಮತ್ತು ಅದರಿಂದ ಹೊರ ಬಂದಿದ್ದೇನೆ. ಆದರೆ, ಇಂದು ಕಂಡ ಅಪಘಾತ ನಿಜಕ್ಕೂ ಭೀಕರ. ನಾನು ನನ್ನು ಮೂವರು ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇನೆ. ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ,” ಎಂದು ಅವರು ಬರೆದುಕೊಂಡಿದ್ದಾರೆ.

ಸಿನಿಮಾದ ನಿರ್ದೇಶಕ ಶಂಕರ್ಗೆ ಕೂಡ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನುವ ವರದಿ ಹರಿದಾಡಿತ್ತು. ಆದರೆ, ಇದು ಸುಳ್ಳು ಎನ್ನುವುದು ನಂತರ ಖಾತ್ರಿಯಾಗಿತ್ತು.

ಮಾಹಿತಿ ತಿಳಿಯುತ್ತಿದ್ದಂತೆ ನಟ ಕಮಲ್ ಹಾಸನ್ ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲು ಸಹಕಾರ ನೀಡಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English