ಫ್ರೆಂಚ್ ಓಪನ್​ಗೆ ರೋಜರ್ ಫೆಡರರ್ ಇಲ್ಲ

4:47 PM, Friday, February 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

fadarar

ಪ್ಯಾರಿಸ್ : ದೀರ್ಘಕಾಲದಿಂದ ಸಮಸ್ಯೆ ನೀಡುತ್ತಿದ್ದ ಮೊಣಕಾಲು ಗಾಯಕ್ಕೆ ಬುಧವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಟೆನಿಸ್ ದಿಗ್ಗಜ ರೋಜರ್ ಫೆಡರರ್ ವರ್ಷದ 2ನೇ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಫ್ರೆಂಚ್ ಓಪನ್ನಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.

ಗುರುವಾರ ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಣೆಯ ಮೂಲಕ ಫೆಡರರ್ ಇದನ್ನು ತಿಳಿಸಿದ್ದಾರೆ. 20 ಗ್ರಾಂಡ್ ಸ್ಲಾಂ ಪ್ರಶಸ್ತಿ ವಿಜೇತ 38 ವರ್ಷದ ಫೆಡರರ್, ಸ್ವಿಜರ್ಲೆಂಡ್ನಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಫ್ರೆಂಚ್ ಓಪನ್ನೊಂದಿಗೆ ದುಬೈ, ಇಂಡಿಯನ್ ವೆಲ್ಸ್, ಬೊಗೊಟಾ ಹಾಗೂ ಮಿಯಾಮಿ ಟೂರ್ನಿಯಿಂದಲೂ ಹೊರಗುಳಿದಿದ್ದಾರೆ.

ಮೇ 24 ರಿಂದ ಜೂನ್ 7ರವರೆಗೆ ಫ್ರೆಂಚ್ ಓಪನ್ ನಡೆಯಲಿದೆ. ಕಳೆದ ಐದು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಫೆಡರರ್ ಫ್ರೆಂಚ್ ಓಪನ್ ಟೂರ್ನಿ ತಪ್ಪಿಸಿಕೊಂಡಂತೆ ಆಗಲಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English