ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ : ಪಾದಯಾತ್ರಿಗಳಿಗೆ ಸನ್ಮಾನ

5:19 PM, Friday, February 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

dharmastala

ಉಜಿರೆ : ಭಕ್ತರ ದೋಷಗಳನ್ನು ಗ್ರಹಣ ಮಾಡಿ, ಸಂಕಷ್ಟಗಳನ್ನು ಪರಿಹರಿಸುವ ಶಕ್ತಿ ಹೊಂದಿರುವ ಸಾನ್ನಿಧ್ಯಗಳು ತೀರ್ಥಕ್ಷೇತ್ರಗಳಾಗಿ ಬೆಳಗುತ್ತವೆ, ಬೆಳೆಯುತ್ತವೆ. ಸಾರ್ಥಕ ಬದುಕಿಗೆದಾರಿದೀಪವಾಗುತ್ತವೆ. ತಮ್ಮಲ್ಲಿರುವ ಕೋಪ, ದ್ವೇಷ, ಅಸೂಯೆ ಮೊದಲಾದ ಅರಿಷಡ್ವರ್ಗಗಳನ್ನು ಕಳಚಿ, ದುಃಖ, ದುಮ್ಮಾನಗಳನ್ನು ಮರೆಯಲು ಧರ್ಮಸ್ಥಳ ಕ್ಷೇತ್ರಕ್ಕೆ ಭಕ್ತರು ಬರುತ್ತಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

dharmastala

ಅವರು ಗುರುವಾರ ರಾತ್ರಿ ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆಗೆ ಬಂದ ಪಾದಯಾತ್ರಿಗಳಿಗೆ ಶುಭ ಹಾರೈಸಿ ಮಾತನಾಡಿದರು.

dharmastala

ಶಿವ ಭಕ್ತರ ಸರ್ವ ದೋಷಗಳನ್ನು ಸ್ವೀಕರಿಸಿ ವಿಷಕಂಠನಾಗಿ ಭಕ್ತರ ಅಭೀಷ್ಠಗಳನ್ನು ಈಡೇರಿಸಿ ಮಂಗಳಕಾರಕನಾಗಿಯೂ ಸದಾ ಭಕ್ತರನ್ನುಅನುಗ್ರಹಿಸುತ್ತಾರೆ.
ನೇತ್ರಾವತಿ ನದಿಯಲ್ಲಿ ಮಿಂದು ಬಹಿರಂಗ ಪರಿಶುದ್ಧಿಯೊಂದಿಗೆ, ಉಪವಾಸ, ವ್ರತ-ನಿಯಮಗಳ ಪಾಲನೆಯೊಂದಿಗೆಅಂತರಂಗ ಶುದ್ಧಿಯಿಂದದೇವರನ್ನು ಪ್ರಾರ್ಥಿಸಿದಾಗ ಸಕಲ ದೋಷಗಳ ನಿವಾರಣೆಯಾಗಿ ಶಾಂತಿ, ನೆಮ್ಮದಿ ನೆಲೆಸುತ್ತದೆ.

dharmastala

ಪ್ರಸ್ತುತ ಮೊಬೈಲ್ ಫೋನ್‌ಕಾಟದಿಂದಜಪ, ತಪ, ಪ್ರಾರ್ಥನೆ, ಧ್ಯಾನಕ್ಕೂಅಡಚಣೆಯಾಗುತ್ತಿದೆ.ಮನಸ್ಸಿನಲ್ಲಿ ಏಕಾಗ್ರತೆಇರುವುದಿಲ್ಲ ಎಂದುಅವರು ಕಳವಳ ವ್ಯಕ್ತಪಡಿಸಿದರು.ಹಿತ-ಮಿತವಾಗಿ ಮೊಬೈಲ್ ಬಳಸಿ ಎಂಬ ಕಿವಿಮಾತನ್ನೂ ಹೇಳಿದರು.

dharmastala

ಅನೇಕ ಮಂದಿ ಪಾದಯಾತ್ರಿಗಳು ಒಂದೆರಡು ದಿನ ಮುಂಚಿತವಾಗಿ ಬಂದುದೇವರದರ್ಶನ ಮಾಡಿಇತರ ಭಕ್ತರಿಗೆ ಅನುಕೂಲ ಮಾಡಿದ್ದಾರೆಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪಾದಯಾತ್ರಿಗಳಲ್ಲಿರುವ ಶಿಸ್ತು, ಸಂಯಮ, ಸ್ವಚ್ಛತೆ ಬಗ್ಯೆ ಕಾಳಜಿ ಇತ್ಯಾದಿಗಳನ್ನು ಹೆಗ್ಗಡೆಯವರು ಶ್ಲಾಘಿಸಿ ಎಲ್ಲರಿಗೂ ಪಾದಯಾತ್ರೆಯ ಫಲ ಸಿಗಲಿ.ಮಳೆ-ಬೆಳೆ ಚೆನ್ನಾಗಿ ಆಗಲಿ.ಎಲ್ಲೆಲ್ಲೂ ಸುಖ-ಶಾಂತಿ, ನೆಮ್ಮದಿ ನೆಲೆಸಲಿ ಹಾಗೂ ಲೋಕಕಲ್ಯಾಣವಾಗಲಿಎಂದುಅವರು ಹಾರೈಸಿದರು.

dharmastala

ಪಾದಯಾತ್ರಿಗಳ ತಂಡದ ನಾಯಕ ಬೆಂಗಳೂರಿನ ಹನುಮಂತಪ್ಪ ಸ್ವಾಮೀಜಿ ಮತ್ತು ಶಶಿಕುಮಾರ್ ಹಾಗೂ ಇತರರನ್ನು ಹೆಗ್ಗಡೆಯವರು ಗೌರವಿಸಿದರು.
ಹನುಂತಪ್ಪ ಸ್ವಾಮೀಜಿ ಮಾತನಾಡಿ ಮುಂದಿನ ವರ್ಷಆಯಾ ಊರುಗಳಲ್ಲೆ ಪಾದಯಾತ್ರಿಗಳ ತಂಡ ರಚಿಸಿ, ಸುಗಮ ಪಾದಯಾತ್ರೆ ಮಾಡಬೇಕುಎಂದು ಸಲಹೆ ನೀಡಿದರು.

ಹೇಮಾವತಿ ವಿ. ಹೆಗ್ಗಡೆಯವರು, ನಾಗರಾಜರೆಡ್ಡಿ ಮತ್ತು ಮರಿಯಪ್ಪಗುರು ಮೊದಲಾದವರು ಉಪಸ್ಥಿತರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English