ಮೈಸೂರು : ಇಲ್ಲಿಗೆ ಸಮೀಪದ ಮಲೈ ಮಹದೇಶ್ವರ ವನ್ಯ ಜೀವಿ ವಿಭಾಗಕ್ಕೆ ಸೇರಿದ ಹೂಗ್ಯಂ ವಲಯದ ಶಾಂತನೂರು ಬಯಲು ಅರಣ್ಯದಲ್ಲಿ ಇಬ್ಬರು ಐನಾತಿಗಳು ಎರಡು ತಲೆ ಹಾವನ್ನು ಹಿಡಿದಿದ್ದಾಗಲೇ ಅರಣ್ಯ ಅಧಿಕಾರಿಗಳ ಕೈಗೆ ಸಿಕ್ಕು ಬಿದ್ದಿದ್ದಾರೆ.
ಇಂದು ಬೆಳಿಗ್ಗೆ ಬೀಟ್ ತಿರುಗುತ್ತಿರುವಾಗ ಅರಣ್ಯದೊಳಗೆ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರು. ಸಿಬ್ಬಂದಿಗಳು ಹತ್ತಿರ ಹೋಗಿ ವಿಚಾರಿಸಿದಾಗ ಚೀಲವೊಂದರಲ್ಲಿ ಎರಡು ತಲೆ ಹಾವು ಕಂಡು ಬಂದಿತು. ಕೂಡಲೇ ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ ಎಂದು ವನ್ಯ ಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ತಿಳಿಸಿದ್ದಾರೆ.
ಬಂಧಿತರನ್ನು ಫ್ರನ್ಸಿಸ್ ಸೆಲ್ವಂ (40) ಮತ್ತು ಚಾರ್ಲ್ಸ್ ಕ್ಸೇವಿಯರ್ ಎಂದು ಗುರುತಿಸಲಾಗಿದ್ದು ಇಬ್ಬರೂ ಸಮೀಪದ ರಾಮಾಪುರ ಗ್ರಾಮದವರು ಎಂದು ತಳಿದು ಬಂದಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಟಿವಿಎಸ್ ಅಪಾಚೆ ಬೈಕ್ ನ್ನೂ ವಶಪಡಿಸಿಕೊಳ್ಲಲಾಗಿದೆ . ಅರಣ್ಯಾಧಿಕಾರಿಗಳು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.
Click this button or press Ctrl+G to toggle between Kannada and English