ಉಜಿರೆ : ಕಂಬಳದ ಕೋಣಗಳ ಓಟಗಾರ ಶ್ರೀನಿವಾಸ ಗೌಡರನ್ನು ಸೋಮವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿದರು.
ಸೋಲು-ಗೆಲುವಿನ ಬಗ್ಯೆಚಿಂತಿಸದೆ ಬದ್ಧತೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡಿಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಕಂಬಳ ಕ್ರೀಡೆಗೂ ಒಳ್ಳೆಯ ಕಾಲ ಹಾಗೂ ಒಂದುಯೋಗ ಬಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಸೋಮವಾರ ಧರ್ಮಸ್ಥಳದಲ್ಲಿ ತಮ್ಮ ನಿವಾಸದಲ್ಲಿ ಕಂಬಳಗಳ ಕೋಣಗಳ ಓಟದಲ್ಲಿ ದಾಖಲೆ ನಿರ್ಮಿಸಿದ ಮೂಡಬಿದ್ರೆ ಬಳಿ ಅಶ್ವತ್ಥಪುರ ನಿವಾಸಿ ಶ್ರೀನಿವಾಸ ಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಗೆಲುವು ಬಂದಾಗ ಹಿಗ್ಗದೆ, ಸೋಲು ಬಂದಾಗಕುಗ್ಗದೆ ಸಮತೋಲನದಲ್ಲಿರಬೇಕು.ಸ್ಥಿಮಿತ ಕಳೆದುಕೊಳ್ಳಬಾರದು.ಸಭೆ-ಸಮಾರಂಭಗಳಿಗೆ ಹೋಗುವಾಗ ಪ್ಯಾಂಟು ಹಾಕಬಾರದು. ಬಿಳಿ ಧೋತಿ ಉಡಬೇಕು ಎಂದು ಹೊಸ ವೇಸ್ಟಿಯನ್ನು ಉಡುಗೊರೆಯಾಗಿ ನೀಡಿದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕಂಬಳ ಅಕಾಡೆಮಿ ಸಂಚಾಲಕ ಕೆ ಗುಣಪಾಲ ಕಡಂಬ, ಎಸ್.ಡಿ. ಸಂಪತ್ ಸಾಮ್ಯಾಜ್ಯ ಶಿರ್ತಾಡಿ, ಕೋಣಗಳ ಮಾಲಕ ಸತೀಶ್ಚಂದ್ರ ಸಾಲಿಯಾನ್ ಇರುವೈಲ್, ಕಂಬಳ ಅಕಾಡೆಮಿ ನಿರ್ದೇಶಕರುಗಳಾದ ಜ್ವಾಲಾಪ್ರಸಾದ್ ಇದು, ಸುಭಾಶ್ಚಂದ್ರ ಚೌಟ, ಮೂಡಬಿದ್ರೆ, ಮಂಗಳೂರು ಎ.ಪಿ.ಎಂ.ಸಿ.ಅಧ್ಯಕ್ಷ ಪ್ರವೀಣ ಕುಮಾರ್ ಜೈನ್, ಚಿಂತನ್ ಲೋಬೊ, ತರಬೇತುದಾರ ದಿನೇಶ್ ಅಳಿಯೂರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English