ಮೂಡುಬಿದಿರೆ : ಪ್ರತಿಯೊಬ್ಬರೂ ತಮ್ಮಲ್ಲಿರುವ ಗುಪ್ತ ಪ್ರತಿಭೆಗಳನ್ನ ಹುಡುಕಾಟ ನಡೆಸಿದ ನಂತರ ಆ ಕ್ಷೇತ್ರದಲ್ಲಿ ಹೆಚ್ಚಿನ ತನ್ಮಯತೆ ಅಗತ್ಯವಿದೆ ಎಂದು ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ್ ಭಟ್ ಗಾಳಿಮನೆ ಅಭಿಪ್ರಾಯ ಪಟ್ಟರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಆವರಣದಲ್ಲಿ ಕಾಮಾರ್ಸ್ ವೃತ್ತಿಪರ ಕೋರ್ಸ್‌ನ ”ಪ್ರತಿಭಾ ಸಂಘ”ದ ಉದ್ಘಾಟಕರಾಗಿ ಮಾತನಾಡಿದರು.
ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಸಂಪನ್ನತೆಯನ್ನ ಬೇರೆಲ್ಲೂ ಹುಡುಕುವ ಅಗತ್ಯವಿಲ್ಲ. ಪ್ರತಿಭೆ ವ್ಯಕ್ತಿತ್ವವಾಗಿ ರೂಪುಗೊಂಡು ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವಂತಹ ಅದೆಷ್ಟೋ ಪ್ರತಿಭಾವಂತರಿಗೆ ಸ್ಪೂರ್ತಿಯಾಗಿರುವುದು ನಮ್ಮೆಲ್ಲರ ಹೆಮ್ಮೆ ಎಂದರು. ಭಾರತ ದೇಶಕ್ಕೆ ಸಾವಿರಾರು ವರ್ಷದ ಹಿನ್ನಲೆ ಇದೆ. ಇಲ್ಲಿನ ಸಂಸ್ಕೃತಿಗೆ ದೇಶವಿದೇಶಗಳಲ್ಲಿ ವಿಶೇಷ ಸ್ಥಾನ ಮಾನವಿದೆ. ಇಂತಹ ಅಮೂಲ್ಯ ಸಂಪತ್ತನ್ನು ನಾವು ಪಾಲಿಸಿ ಪೋಷಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್, ಆಡಳಿತಾಧಿಕಾರಿಯಾದ ಬಾಲಕೃಷ್ಣ ಶೆಟ್ಟಿ, ಕಾಮಾರ್ಸ್ ವೃತ್ತಿಪರ ಕೋರ್ಸ್‌ನ ಸಂಯೋಜಕ ಅಶೋಕ್ ಕೆ ಜಿ, ಕಾರ‍್ಯಕ್ರಮದ ಸಂಯೋಜಕರಾದ ಅನಂತಶಯನ ಉಪಸ್ಥಿತರಿದ್ದರು.
ಪತ್ರಿಕೋದ್ಯಮ ವಿಭಾಗದ ಮೀಡಿಯಾ ಬಝ್ ಅಂಗವಾಗಿ ಪ್ರಕೃತಿಯನ್ನು ಮುಖ್ಯ ವಿಷಯವಾಗಿ ರಂಗೋಲಿ, ಚಿತ್ರಕಲೆ, ಕಾರ್ಟೂನ್, ಕೊಲಾಜ್ ಮೇಕಿಂಗ್, ಕಸದಿಂದರಸ ಮುಂತಾದ ಸ್ಪರ್ಧೆಗಳನ್ನ ಒಂದು ವಾರದ ಅವಧಿಯಲ್ಲಿ ಅಯೋಜಿಸಲಾಗುತ್ತದೆ. ಇಂದು ನಡೆದ ರಂಗೋಲಿ ಬಿಡಿಸುವ ಸ್ಪರ್ಧೆಯಲ್ಲಿ ಕಾಮಾರ್ಸ್ ವೃತ್ತಿಪರ ಕೋರ್ಸ್‌ನ ಸುಮಾರು ಐವತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರೇರಣಾ ಹೆಬ್ಬಾರ್ ಕಾರ‍್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English