ಮಂಗಳೂರು : ಮೇರಿ ವಿಶ್ವ ಮಾತೆ ದೇವಾಲಯ ರಾಣಿಪುರದ ವಾರ್ಷಿಕ ಮಹೋತ್ಸವವು ಆದಿತ್ಯವಾರ 23 ರಂದು ವಿಜೃಂಭಣೆಯಿಂದ ನಡೆಯಿತು. ಪ್ರಧಾನ ಧರ್ಮಗರುಗಳಾಗಿ ಫಾ.ಮುಲ್ಲರ್ಸ್ ಹೋಮಿಯೋಪತಿ ಆಸ್ಪತ್ರೆ ಹಾಗೂ ಕಾಲೇಜಿನ ಆಡಳಿತಾಧಿಕಾರಿಯಾಗಿರುವ ವಂದನೀಯ ರೋಶನ್ ಕ್ರಾಸ್ತಾ ರವರು ಬಲಿಪೂಜೆಯನ್ನು ನೇರವೇರಿಸಿ ಮಾನವ ಜೀವದ ಮಹತ್ವದ ಬಗ್ಗೆ ಪ್ರವಚನ ನೀಡಿ ಪ್ರತಿ ಯೊಬ್ಬರ ಜೀವಕ್ಕೆ ಗೌರವ, ಮಹತ್ವ. ಹಾಗೂ ರಕ್ಷಣೆ ನೀಡಲು ಕರೆ ನೀಡಿದರು. ಮಂಗಳೂರು ಧರ್ಮ ಪ್ರಾಂತ್ಯವು ಈ ವರ್ಷವನ್ನು ಮನುಷ್ಯ ಜೀವಕ್ಕೆ ಗೌರವ ಮತ್ತು ರಕ್ಷಣೆ ನೀಡಲು ಕರೆ ನೀಡಿರುವುದರಿಂದ ಈ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ಕಾರ್ಯಗತ ಮಾಡಲು ಪ್ರಯತ್ನಿಸಲು ಕರೆ ನೀಡಿದರು.
ಮೇರಿ ಮಾತೆಯು ಮನುಷ್ಯ ಜೀವಕ್ಕೆ ನೀಡಿದ ಗೌರವವು ನಮಗೆ ಪ್ರೇರಣೆಯಾಗಲೆಂದು ಸಂದೇಶ ನೀಡಿದರು.ಮಹೋತ್ಸವದ ಬಲಿ ಪೂಜೆಯಲ್ಲಿ ರಾಣಿಪುರ ದೇವಾಲಯದ ಧರ್ಮಗುರುಗಳಾದ ವಂದನೀಯ ಸಂತೋಷ್ ಡಿ ಸೋಜ,ಋಷಿವನದ ನಿರ್ದೇಶಕ ರಾದ ವಂದನೀಯ ಆಲ್ಫ್ರೆಡ್ ಮಿನೇಜಸ್,ಹಾಗೂ ಮಂಗಳೂರು ದಕ್ಷಿಣ ವಲಯದ ಧರ್ಮಗುರುಗಳು ಸೇರಿ ಹಲವಾರು ಧರ್ಮಗುರುಗಳು ಬಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ವಾರ್ಷಿಕ ಮಹೋತ್ಸವಕ್ಕೆ ಸಹಕಾರ ನೀಡಿದ ಎಲ್ಲರನ್ನೂ ವಂದನೀಯ ಸಂತೋಷ್ ಡಿ ಸೋಜ ಸ್ಮರಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಕೆಥೋಲಿಕ್ ಯುವ ಸಂಚಾಲನ್ ರಾಣಿಪುರ ಇವರ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಹೊರ ತಂದ ಭಾಂಗ್ರಾಳಿ ಪಾವ್ಲಾಂ ಎಂಬ ಸ್ಮರಣ ಸಂಚಿಕೆಗೆ ಜಾಹೀರಾತು ನೀಡಿದವರಿಗೆ ಗೌರವ ಪ್ರತಿಯನ್ನು ನೀಡಿ ವಂದಿಸಿದರು.ಕಳೆದ ಭಾನುವಾರ 16ರಂದು ವಾರ್ಷಿಕ ಮಹೋತ್ಸವದ ಅಂಗವಾಗಿ ಪವಿತ್ರ ಪರಮ ಪ್ರಸಾದದ ಭವ್ಯ ಮೆರವಣಿಗೆಯು ಸಂತ ಅಂತೊನಿ ಪ್ರಾಥಾನಾಲಯ ರಾಣಿಪುರ ಉಳಿಯದಿಂದ ಮೇರಿ ವಿಶ್ವ ಮಾತೆ ದೇವಾಲಯ ರಾಣಿಪುರಕ್ಕೆ ಸುಮಾರು ಎರಡೂವರೆ ಕೀ.ಮೀ ದೂರದಿಂದಲೇ ಭಕ್ತಾದಿಗಳು ಭಕ್ತಿ ಪೂರ್ವಕವಾಗಿ ನಡೆದು ಬಂದು ಬಲಿ ಪೂಜೆಯೊಂದಿಗೆ ನೇರವೇರಿತು. ಈ ರೀತಿಯಲ್ಲಿ ವಾರ್ಷಿಕ ಮಹೋತ್ಸವವು ಸಂಭ್ರಮ ಸಡಗರದೊಂದಿಗೆ ಆಚರಿಸಲಾಯಿತು.
Click this button or press Ctrl+G to toggle between Kannada and English