ಮಾ.2ರಂದು ಬೆಂಗಳೂರಿನಲ್ಲಿ‌ ಸಹಕಾರಿ ಕ್ಷೇತ್ರ ಹಾಗೂ ಬ್ಯಾಂಕ್​ಗಳ ಸಭೆ : ಸಚಿವ ಎಸ್.ಟಿ.ಸೋಮಶೇಖರ್

11:45 AM, Thursday, February 27th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

S-T-Somashekhar

ಮಂಗಳೂರು : ಸಹಕಾರಿ ಕ್ಷೇತ್ರಗಳು ಹಾಗೂ ಬ್ಯಾಂಕ್ಗಳು ಆದಾಯ ತೆರಿಗೆ ಇಲ್ಲದ ಸಂದರ್ಭ ಯಾವ ರೀತಿ ಇತ್ತು, ಆದಾಯ ತೆರಿಗೆ ಅಳವಡಿಸಿದ ಬಳಿಕ ಯಾವ ರೀತಿಯ ಪರಿಣಾಮವಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಬಗ್ಗೆ ಮಾರ್ಚ್ 2ರಂದು ಬೆಂಗಳೂರಿನಲ್ಲಿ‌ ಸಹಕಾರಿ ಕ್ಷೇತ್ರ ಹಾಗೂ ಬ್ಯಾಂಕ್ಗಳ ಸಭೆ ಕರೆಯಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ನಗರದ ಕೊಡಿಯಾಲ್ ಬೈಲ್ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮಾಹಿತಿಗಳನ್ನು ಮುಖ್ಯಮಂತ್ರಿಯವರ ಮುಖಾಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಲುಪಿಸಲಿದ್ದೇವೆ‌. ಈ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಆದಾಯ ತೆರಿಗೆ ಅಳವಡಿಕೆಯ ಬಳಿಕ ಆದ ಪರಿಣಾಮಗಳ ಬಗ್ಗೆ ಶೀಘ್ರ ಮಾಹಿತಿ ಕಲೆ ಹಾಕಲಿದ್ದೇವೆ ಎಂದರು.

ಮಾರ್ಚ್ 31 ರಂದು ಕಟ್ಟಬೇಕಿರುವ ಸಾಲದ ಅಸಲು ಕಟ್ಟೋದನ್ನು ಮುಂದಕ್ಕೆ ಹಾಕಿದರೆ ಅನುಕೂಲ ಆಗಲಿದೆ ಎಂಬ ಮಾತುಗಳು‌ ಕೇಳಿ ಬರುತ್ತದೆ. ಆದರೆ ಸಿಎಂ ಮಾರ್ಚ್ 31ಕ್ಕೆ ಅಂತಿಮ ಗಡುವು ಎಂದು ನಿರ್ಣಯ ಮಾಡಿದ್ದಾರೆ‌. ಆದರೆ ಈ ಬಗ್ಗೆ ಮಾಹಿತಿ ಪಡೆದು ಆ ಬಳಿಕ ಈ ಬಗ್ಗೆ ಯೋಚನೆ ಮಾಡಲಾಗುವುದು. ಸಹಕಾರಿ ಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂದು ನಾನು ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಮಾಡುತ್ತಿದ್ದೇನೆ. ಎಪಿಎಂಸಿ ಅತೀ ದೊಡ್ಡ ಬೆಳವಣಿಗೆ ಇರುವ ಸ್ಥಳ. ಇಲ್ಲಿ ಯಾವುದೇ ಹಣದ ಕೊರತೆ ಇಲ್ಲ. ಆದ್ದರಿಂದ ಅಭಿವೃದ್ಧಿ ಪಡಿಸುವ ಎಲ್ಲಾ ರೀತಿಯ ಅವಶ್ಯಕತೆ ಇದ್ದು ಮಾರ್ಚ್ 2ರಂದು ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದೇವೆ ಎಂದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English